'ಸಿಂಚನ'ಕ್ಕೆ ಲೇಖನ ಕಳಿಸಿ ಬಹುಮಾನ ಗೆಲ್ಲಿರಿ!

'ಸಿಂಚನ'ಕ್ಕೆ ಲೇಖನ ಕಳಿಸಿ ಬಹುಮಾನ ಗೆಲ್ಲಿರಿ!

ಕನ್ನಡ ಸಂಘ (ಸಿಂಗಪುರ)ದ ಹೆಮ್ಮೆಯ ಮಾಸಪತ್ರಿಕೆ "ಸಿಂಚನ"ಗೆ ಒಂದು ವರ್ಷ ತುಂಬಿದ ಸಂತಸ. 2011ರ ಆಗಸ್ಟ್‌ನಲ್ಲಿ ಹುಟ್ಟಿದ ಈ ಕನಸಿನ ಕೂಸು ಬೆಳೆದು ಪ್ರತಿ ತಿಂಗಳು ಸಿಂಗನ್ನಡಿಗರ ಜೊತೆಯಲ್ಲಿ ಮಾತನಾಡುತ್ತಾ ಹಲವು ವೈವಿಧ್ಯಮಯ ವಿಷಯಗಳನ್ನು ಹಂಚಿಕೊಂಡು ಬರುತ್ತಿದೆ. ಒಂದು ವರುಷ ತುಂಬಿದ ಈ ಹರುಷಕ್ಕಾಗಿ ಬರ್ತ್‌ಡೇ ಆಚರಿಸಿಕೊಳ್ಳುವ ಆಸೆ. ಅದಕ್ಕಾಗಿ ನವೆಂಬರ್ 2012ರಲ್ಲಿ ಅಲಂಕರಿಸಿಕೊಂಡು ಬಿಡುಗಡೆಗೊಳ್ಳಲು ಸಿದ್ದವಾಗುವ ತವಕದಲ್ಲಿರುವ ಸಿಂಚನದ ವಿಶೇಷ ಸಂಚಿಕೆಗಾಗಿ ನಿಮ್ಮ ಬರಹಗಳಿಂದ ಇನ್ನಷ್ಟು ಸುಂದರವಾಗಿ ಕಾಣುವ ಆಸೆ, ಅದಕ್ಕಾಗಿಯೇ ಈ ಆಹ್ವಾನ, ಆಮಂತ್ರಣ. ಅಂಕಣ, ಕಥೆ ಮತ್ತು ಕವನವನ್ನು ಒಳಗೊಂಡ ಮೂರು ವರ್ಗಗಳಿಗೆ ನಿಮ್ಮ ಬರಹಗಳನ್ನು ಕಳುಹಿಸಬಹುದು. ವರ್ಗಗಳ ವಿವರಗಳನ್ನು ಕೆಳಗೆ ನೀಡಲಾಗಿದೆ. ಪ್ರತೀ ವರ್ಗದಲ್ಲೂ ಆಯ್ದ 3 ಉತ್ತಮ ಬರಹಗಳಿಗೆ ಬಹುಮಾನ ಕೂಡ ಇದೆ. ಇನ್ನೇಕೆ ತಡ? ನಿಮ್ಮ ಬರಹಗಳನ್ನು ಆದಷ್ಟು ಬೇಗ ನಮಗೆ ಕಳುಹಿಸುತ್ತೀರಾ ತಾನೆ? ವರ್ಗ - 1 ವಿಷಯ ಆಧಾರಿತ ಅಂಕಣ (ಮಿತಿ - 1 ಪುಟ, ತುಂಗ ಅಕ್ಷರ ಶೈಲಿ, ಗಾತ್ರ 9ರಲ್ಲಿ) ವಿಷಯ : "ಸ್ಥಳೀಯ ಕನ್ನಡ ಸಂಘ ಮತ್ತು ನಾನು" ಅಥವಾ "ಹೊರದೇಶದಲ್ಲಿ ನಾನು ಕಂಡದ್ದು ಕಲಿತದ್ದು" ವರ್ಗ - 2 ಸಣ್ಣ ಕಥೆ : (ಮಿತಿ - 2 ಪುಟಗಳು, ತುಂಗ ಅಕ್ಷರ ಶೈಲಿ, ಗಾತ್ರ 9ರಲ್ಲಿ) ವರ್ಗ - 3 ಕವನ, ಹನಿಗವನ : (ಮಿತಿ - 1 ಪುಟ, ತುಂಗ ಅಕ್ಷರ ಶೈಲಿ, ಗಾತ್ರ 9ರಲ್ಲಿ) ಬರಹಗಾರರ ಗಮನಕ್ಕೆ... 1. "ಸಿಂಚನ" ವಿಶೇಷ ಸಂಚಿಕೆಗೆ ಕಳಿಸುವ ಕಥೆ, ಅಂಕಣ, ಕವನಗಳು ಸ್ವಂತದ್ದಾಗಿರಬೇಕು ಮತ್ತು ಬೇರೆಲ್ಲೂ (ಅಂತರ್ಜಾಲ ಮತ್ತು ಮುದ್ರಿತ ಮಾಧ್ಯಮ) ಪ್ರಕಟವಾಗಿರಬಾರದು. 2. ಅಂಕಣ, ಕಥೆ ಮತ್ತು ಕವನಗಳು "ಬರಹ" ದಲ್ಲಿರಬೇಕು. ಕೈ ಬರಹದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ. 3. ಪ್ರತೀ ವರ್ಗದಲ್ಲಿ ಆಯ್ದ 3 ಉತ್ತಮ ಕೃತಿಗಳಿಗೆ ಬಹುಮಾನವಿರುತ್ತದೆ. ಬಹುಮಾನದ ವಿವರಗಳನ್ನು ಮುಂಬರುವ "ಸಿಂಚನ" ಸಂಚಿಕೆಯಲ್ಲಿ ನಿರೀಕ್ಷಿಸಿ. 4. ಬಹುಮಾನಿತ ಕೃತಿಗಳನ್ನು "ಸಿಂಚನ" ನವೆಂಬರ್-2012ರ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಮಿಕ್ಕ ಕೃತಿಗಳನ್ನು ಯೋಗ್ಯವಾಗಿದ್ದಲ್ಲಿ "ಸಿಂಚನ" ಮಾಸ ಪತ್ರಿಕೆಯಲ್ಲಿ ಬಳಸಲಾಗುವುದು. 5. "ಸಿಂಚನ" ಸಂಪಾದಕ ಸಮಿತಿಯ ತೀರ್ಮಾನವೇ ಅಂತಿಮ. ಅಂಕಣಗಳನ್ನು ಪರಿಷ್ಕರಿಸಿ ಪ್ರಕಟಿಸುವ ಹಕ್ಕು "ಸಿಂಚನ" ಸಂಪಾದಕ ಸಮಿತಿಗೆ ಸೇರಿದ್ದು. ಬಹುಮಾನ ವಿಜೇತರಿಗೆ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಮಿಂಚಂಚೆ ಮೂಲಕ ತಿಳಿಸಲಾಗುವುದು. 6. ಬರಹಗಾರರು ತಮ್ಮ ಕೃತಿಯ ಜೊತೆಗೆ ತಮ್ಮ ಸಂಪೂರ್ಣ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಯಸ್ಸು, ಭಾವಚಿತ್ರ ಮತ್ತು email IDಯನ್ನು ಕಳುಹಿಸಬೇಕು. 7. ಎಲ್ಲಾ ವರ್ಗಗಳಿಗೂ ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 15, 2012. ನಂತರ ಬಂದ ಬರಹಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. 8. ನಿಮ್ಮ ಬರಹಗಳನ್ನು newsletter@singara…ೆ ಮಿಂಚಂಚೆ ಮೂಲಕ ಕಳುಹಿಸಿ. 9. ವಿಶ್ವಕನ್ನಡಿಗರೆಲ್ಲರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಸಿಂಚನ ಮಾಸಪತ್ರಿಕೆಯ ಎಲ್ಲ ಸಂಚಿಕೆಗಳನ್ನೂ http://singara.org/… ಈ ಅಂತರ್ಜಾಲ ಕೊಂಡಿಯಲ್ಲಿ ಓದಿ ಆನಂದಿಸಿ, ನಿಮ್ಮ ಪ್ರತಿಕ್ರಿಯೆಯನ್ನು newsletter@singara…ೆ ಬರೆದು ತಿಳಿಸಿ. ಕನ್ನಡ ಸಂಘ (ಸಿಂಗಪುರ)ದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು www.singara.org ಅಂತರ್ಜಾಲ ತಾಣಕ್ಕೆ ಭೇಟಿ ಕೊಡಿ.

Comments