ಮಾತನಾಡು

ಮಾತನಾಡು

ಬಂಧ ಕಳೆಯದಂತೆ
ಆಪ್ತನಾಗುವಂತೆ ನೀ
ಆತ್ಮೀಯವಾಗಿ  ಮಾತನಾಡು

ನೋವು ಕೊಡದಂತೆ
ನಲಿವು ತುಂಬುವಂತೆ ನೀ
ಮಧುರವಾಗಿ  ಮಾತನಾಡು

ಮನ ಕೆರಳಿಸದಂತೆ
ಹೃದಯ ಅರಳಿಸುವಂತೆ ನೀ
ಸತ್ವಭರಿತವಾಗಿ ಮಾತನಾಡು

ನೀರಸವೆನಿಸದಂತೆ
ಕಳೆಕಟ್ಟುವಂತೆ ನೀ
ಸ್ವಾರಸ್ಯವಾಗಿ ಮಾತನಾಡು

ತೋಚಿದ್ದನ್ನೆಲ್ಲ ಆಡುವ
ಮುನ್ನ ಯೋಚಿಸಿ  ನೀ
ತೂಕದ ಮಾತನಾಡು

ಅಂತರಾಳದ ಒಳದನಿ
ಯನು ಆಲಿಸಿ  ನೀ
ಎಚ್ಚೆತ್ತು  ಮಾತನಾಡು

 

Rating
No votes yet

Comments

Submitted by venkatb83 Wed, 12/05/2012 - 16:09

In reply to by Premashri

ಮಾತೇ ಮುತ್ತು-ಆಡಿದ ಮಾತು ಒಡೆದ ಮುತ್ತು
ಮಾತು ಬೆಳ್ಳಿ ಮೌನ ಬಂಗಾರ ಗಾದೆ ಸುಳ್ಳಲ್ಲ..
ಆ ತಾತ್ಪರ್ಯವನ್ನು ಮತ್ತು ಸವಿ ಹಿತ ನುಡಿಯನ್ನು ಅಕ್ಷರ ರೂಪದಲ್ಲಿ ಹೇಳಿದ ಬಗೆ ಹಿಡಿಸಿತು..

ಶುಭವಾಗಲಿ..

\|/