ಪುರುಷ ಪ್ರಯತ್ನ

ಪುರುಷ ಪ್ರಯತ್ನ

ಕವನ

 ಛಿನ್ನವಿಚ್ಛಿನ್ನವಾಗಿ

ಅಲ್ಲಲ್ಲಿ ಕೈಮುರಿದು,ಕಾಲ್ಮುರಿದು

ಬಿದ್ದವರನ್ನು ಅಖಂಡವಾಗಿಸುವ

ಕೈಗಳ ಕಸುವಿಂದ

    ಜಗದ ಗಾಲಿಯ ನೇರ್ಪಡಿಸುವ

    ಅಪಾರ ಶಕ್ತಿಯ ಹೊಡೆತ

   ಕರ್ತಾರನ ಕಮ್ಮಟದಲ್ಲಿ

   ಪುರುಷ ಪ್ರಯತ್ನದ ಸಹಾಯ

ಒದಗದೆ ಇದ್ದರೆ ಸಿಗದು

ಶ್ರಮಕ್ಕೆ ತಕ್ಕ ಫಲ

ತುಂಬದು ತುತ್ತಿನ ಚೀಲ

ಅದಕೆಂದೇ ಟಕ್ ಟಕ್ ಬಡಿತ

ಕೈಯೆತ್ತಿ ,ಬಲವಾಗಿ

ರಟ್ಟೆ ನೋಯುವ ತನಕ

ಕುಟ್ಟುವುದೇ ಕಾಯಕ

Comments