ಸಂಭಾಷಣೆ

ಸಂಭಾಷಣೆ

" ಏನು ನಿನ್ನಷ್ಟಕ್ಕೆ ಗೊಣಗುತ್ತಾ ಬರುತ್ತಿದ್ದಿ ? "
 "ಅಲ್ಲ ಅಮ್ಮಾವ್ರೆ,  ಹೆಣ್ಮರಿ ಯಾರಿಗೂ ಬೇಡವಾಗಿದೆ . "
" ಏನು ಹೇಳ್ತಿದ್ದಿ? "
" ಸಾವಿತ್ರಮ್ಮನ ಮನೆಯಲ್ಲಿ  ನಾಲ್ಕು ನಾಯಿಮರಿಗಳಿದ್ದವಲ್ಲ, ಅವುಗಳಲ್ಲಿ ಎರಡು ಗಂಡು ಮರಿಗಳನ್ನು ಯಾರೋ ಬಂದು ನಾವು ಸಾಕ್ತೇವೆ ಎಂದು ಕೊಂಡೊಯ್ಯಿದ್ದಾರೆ.ಹೆಣ್ಮರಿಗಳನ್ನು ಎಲ್ಲಾದ್ರೂ ದೂರ ಬಿಟ್ಟುಬಾ ಅಂದ್ರು."
" ಛೇ  ಬೇಸರವಾಗುತ್ತದೆ ನೋಡು ,  ಹೌದು...  ಸೀತಮ್ಮನ ಮನೆಯ ದನ ಕರು ಹಾಕಿದೆಯಾ?
" ಕರು ಹಾಕಿಯೂ ಆಯ್ತು, ಅದನ್ನು ಮಾರಿಯೂ ಆಯ್ತು, ಗಂಡು ಕರುವಾದ್ರೆ ಯಾರು ಸಾಕ್ತಾರೆ? ಮುದಿ ,ಗೊಡ್ಡು ದನಗಳದ್ದೆಲ್ಲ ಇದೇ ಕತೆ. "
"ಮನುಷ್ಯ ಬುದ್ಧಿಯೇ ಹೀಗೆ ,  ನೀನು ಮೊದ್ಲು ಹಿತ್ತಲಲ್ಲಿ ಇರುವ ಕಳೆಯನೆಲ್ಲ ತೆಗೆದುಬಿಡು, ಅಲ್ಲೊಂದು ಪಪ್ಪಾಯಿ ಗಿಡವಿದೆ , ಹೂ ಬಿಟ್ಟಿದೆಯಾ ನೋಡು"
"  ಹೂ ಬಿಟ್ಟಿದೆ, ಆದ್ರೆ ಗಂಡು ."
" ಬುಡವನ್ನೇ  ಕತ್ತರಿಸಿಹಾಕು ."

Rating
No votes yet

Comments