ದೀಪಾವಳಿ

ದೀಪಾವಳಿ

ಕವನ

ದೀಪಾವಳಿ

ಅಂದು:

ಆಗ ವಯಸಿರಲು

ಮೈಲಿ ಕಸುವಿರಲು

ಕಣ್ಣಲಿ ಕಸುವಿರಲು

ಹಚ್ಚಲು ಹೊಸಿಲಿಗೆರಡು ಮಣ್ಣ ಹಣತೆ,ಹೆಣ್ಣೆ!

ಮನೆಯೊಳಗಿರಲಿಲ್ಲ ಹನಿ ಎಣ್ಣೆ!!

ಅಳುತ ನೀ ಕೂತೆ

ನಿನ್ನೆವೆ ಅಂಗಳದಿ ಕೂತ ಕಣ್ಣೀರ ಮುತ್ತ

ಒರೆಸಿ ನಾನೆಂದೆ ಬೇರೆ ದೀಪ ಯಾಕೆ ಬೇಕು?

ನಿನ್ನ ಕಣ್ಣ ಬೆಳಕು ಸಾಕು.

ನೀನು      ನಕ್ಕೆ

ನಗುವಲ್ಲವದು ಬೆಳದಿಂಗಳು

ಕರಗಿತು ನೋವ ಕಾರ್ಮುಗಿಲು

ಇಂದು:

ಈಗ ವಯಸಿಲ್ಲ

ಕಸುವಿಲ್ಲ

ಕನಸುಗಳಿಲ್ಲ

ಪ್ರೀತಿ ಕೊಡದೊಳಗೆಲ್ಲೋ ತೂತು

ಮಡುಗಟ್ಟಿದ ಮೌನದೊಳಗೆ

ಹುಟ್ಟುತ್ತಿಲ್ಲ ಪ್ರೀತಿಯ ಮಾತು

ಎಲ್ಲವಿದೆ ಮನೆಯೊಳಗೆ

ಬೆಳ್ಳಿಬಂಗಾರದೊಡವೆ

ಹಚ್ಚಲು ಒಂದೇನು ಸಾಲು ದೀಪಗಳಿವೆ

ಆದರೂ ಹಚ್ಚಲೇಕೋ ನಮಗಿಲ್ಲ ಕಾತರ!

-----------------------------------

Comments