ನೊಂದ ಹೆಣ್ಣೊಬ್ಬಳು ಇತರೆ ಹೆಣ್ಣುಮಕ್ಕಳಿಗೆ ಕೊಡುವ ಎಚ್ಚರಿಕೆಯ,ಅನುಭವದ ಮಾತು

ನೊಂದ ಹೆಣ್ಣೊಬ್ಬಳು ಇತರೆ ಹೆಣ್ಣುಮಕ್ಕಳಿಗೆ ಕೊಡುವ ಎಚ್ಚರಿಕೆಯ,ಅನುಭವದ ಮಾತು

ಕವನ

 
ಪ್ರತಿ ಹೆಣ್ಣಿಗೂ ತಾಯ್ತನದ ಬಯಕೆ,

ಮಮತೆಯ ಕುಡಿಗಾಗಿ ನೂರಾರು ಹರಕೆ !

ದೇವಾ, ಕನಸು ನನಸಾಗಲೆನಗೆ

ಗಂಡೋ, ಹೆಣ್ಣೋ ಬೇಕೊಂದು ಮಗು ಎನಗೆ !!

 

       ಕನಸು ನನಸಾಗಲೊಂದು ದಿನ

       ಕುಣಿದಾಡಿತೆನ್ನ  ತನು-ಮನ !

       ಜನನ ದತ್ತ  ಪಯಣ

       ನಡೆಸಿತೆನ್ನ ಗರ್ಭದಲ್ಲಿನ ಭ್ರೂಣ !!

 

ಸಂತಸದಿ ಮೈಮರೆತೆ ನಾ

ಕಡೆಗಾಣಿಸುತ್ತಾ ವೈದೈಯ ಸಲಹೆಯನ್ನ !

ತಿಂಗಳೊಂಭತ್ತು ತುಂಬುವಾ ಮುನ್ನ

ಕಂಡೆ ನನ್ನ ಕರುಳ ಕುಡಿಯನ್ನ !

ಉಸಿರಾಡದೆ ಆಗಿತ್ತದು ಅಂಗಹೀನ

ಅದ ನೋಡುತ್ತಾ ಛಿದ್ರವಾಯಿತೆನ್ನ ಮನ

ನುಚ್ಚು ನೂರಾಗಿತ್ತು ನನ್ನ ಕನಸು, ಸ್ಥಾನ-ಮಾನ !!

 

                            ಬೇಡ ತಂಗಿ ಯಾರಿಗೂ ಈ ಪರಿಸ್ಥಿತಿ

                            ಅರಿಯೋಣ ನಮ್ಮ ಆರೋಗ್ಯದ ಸ್ಥಿತಿಗತಿ !

                            ಆಲಿಸೋಣ, ಪಾಲಿಸೋಣ ವೈದ್ಯರ ಕಿವಿ ಮಾತು

                            ಗರ್ಭ ಧರಿಸುವ ಮುನ್ನ, ಗರ್ಭಿಣಿಯಾದಾಗ

                            ಪ್ರಸವದ ನಂತರ ಅಷ್ಟೇ ಅಲ್ಲ,  ಸದಾ ನಿರಂತರ !!

ಡಾ.ಶಶಿಕಲಾ.ಪಿ.ಕೃಷ್ಣಮೂರ್ತಿ.

ದಾವಣಗೆರೆ.

ಫೋನ್  9972509785

 

Comments