ತತ್ವೋಪದೇಶಗಳು (ಶ್ರೀ ನರಸಿಂಹ 46)

ತತ್ವೋಪದೇಶಗಳು (ಶ್ರೀ ನರಸಿಂಹ 46)

ಜೀವ,ಬ್ರಹ್ಮಗಳೊಂದೆ ಆಗಿಹುದೆನುವುದು ಅಧ್ವೈತವು

ಬ್ರಹ್ಮನಂಶಗಳೆ ಜೀವಗಳೆನುವುದು ವಿಶಿಷ್ಟಾಧ್ವೈತವು

ಜೀವ, ಬ್ರಹ್ಮಗಳಲಿ ಬೇಧವಿಹುದೆನುವುದು ಧ್ವೈತವು

ಎಲ್ಲ ತತ್ವೋಪದೇಶಗಳು ಮುಕ್ತಿಯೆಡೆಗೊಯ್ಯುವವು

 

ಸಾಧಕರು ಸಾಧನಾನುಭವದಿ ತತ್ವಗಳ ನುಡಿದಿಹರು

ಇದರರ್ಥಗಳನರಿಯದೆ ತರ್ಕಗಳನು ನೀ ಮಾಡದಿರು

ಗುಡಿಯಡೆಗೆ ಇರುವ ದಾರಿಗಳೆಲ್ಲ ಗುಡಿ ಸೇರುವಂತೆ  

ತತ್ವಗಳೆಲ್ಲವು ಮುಕ್ತಿಯ ಪಡೆಯಲಿರುವ ಪಥಗಳಂತೆ

 

ಸಾಧಕರ ತತ್ವಗಳ ಸರಿ ಅರ್ಥಗಳ ಮೊದಲರಿಯಬೇಕು

ಇದನರಿಯೆ ಶ್ರೀ ನರಸಿಂಹನ ಕೃಪೆಯೂ ನಮಗಿರಬೇಕು  

Rating
No votes yet

Comments