ಟೊರಾಂಟೋನಲ್ಲಿ ನಾವುಕಂಡ ಭವ್ಯ ಅಕ್ಷರಧಾಮ್ ಮಂದಿರ!

ಟೊರಾಂಟೋನಲ್ಲಿ ನಾವುಕಂಡ ಭವ್ಯ ಅಕ್ಷರಧಾಮ್ ಮಂದಿರ!

'ಟೊರಾಂಟೋನಗರದ ಬಾಪ್ಸ್ ಅಕ್ಷರ ಪುರುಷೋತ್ತಮ್ ಮಂದಿರ್,'  'ಫಿಂಚ್ ರೈಲ್ವೆ ಸಬ್ವೇ' ಗೆ ಅತಿ ಹತ್ತಿರ. ಅಲ್ಲಿಂದ ಬಸ್ ವ್ಯವಸ್ಥೆಯಿದೆ. 'ಹಂಬರ್ ಕಾಲೇಜ್ ಕ್ಯಾಂಪಸ್' ಕಡೆಯಿಂದ ಬರುವ ೯೬ ಬಿ. ಬಸ್ ದೇವಾಲಯದ ಮುಂದೆಯೇ ನಿಲ್ಲುತ್ತದೆ.

 'ಕೆನಡಾದಲ್ಲೇ ಅತಿದೊಡ್ಡ ಹಿಂದೂ ಮಂದಿರ್,' ಎಂಬ ಹೆಸರುಗಳಿಸಿರುವ,  'ಬಾಪ್ಸ್ ಸ್ವಾಮಿನಾರಾಯಣ್ ಅಕ್ಷರ್ ಪುರುಷೋತ್ತಮ್ ಮಂದಿರ್' 

'ಹವೇಲಿ' ಎಂದು ಕರೆಯಲಾಗುವ ಟೀಕ್ ವುಡ್ ನ ಕುಸುರಿಕೆಲಸ ಮಾಡಿರುವ ತಾಣ. ಇದು ಗೇಟ್ ಒಳಗೆ ಹೋಗಿ ಎಡಭಾಗಕ್ಕೆ ತಿರುಗಿದರೆ  ಕಾಣಿಸುತ್ತದೆ. ದೊಡ್ಡ ಟೆಲಿವಿಶನ್ ಸೆಟ್ ನ ಮೇಲೆ  'ಅಕ್ಷರಧಾಮದ ನಿರ್ಮಾಣ'ದ ಎಲ್ಲಾ ಮಜಲುಗಳನ್ನೂ ವೀಕ್ಷಿಸಬಹುದು....

'ಬೋಚಸನ್ವಾಸಿ, ಅಕ್ಷರ್ ಪುರು ಷೋತ್ತಮ್ ಸ್ವಾಮಿನಾರಾಯಣ್ ಸಂಸ್ಥಾನ್,'  (BAPS)  ಸ್ವಾಮಿತ್ವದ ಮಂದಿರ, ಕೆನಡಾದ ಟೊರಾಂಟೋನಗರದ ಉಪನಗರದಲ್ಲಿ ಸನ್ ೨೦೦೭ ರ, ಜುಲೈ ೨೨ ರಂದು ನಿರ್ಮಿಸಲ್ಪಟ್ಟಿದೆ. ೩೨,೦೦೦ ಚ.ಅಡಿ. ವಿಸ್ತೀರ್ಣದ ಈ ಭವ್ಯ, ಅತಿ ಸುಂದರ  ಅಮೃತಶಿಲೆಯ ದೇವಾಲಯ, ಕೆನಡಾದಲ್ಲೆಲ್ಲಾ ಸ್ಥಾಪಿಸಿರುವ ಹಿಂದೂ ದೇವಸ್ಥಾನಗಳಲ್ಲೆಲ್ಲಾ ಅತಿ ದೊಡ್ಡದು. ಕೆನಡಾದ ಘನ ಸರ್ಕಾರ, ಹಾಗೂ ಹಿರಿಯ ಅಧಿಕಾರಿಗಳು,  ಈ ಮಂದಿರದ ಶಿಲ್ಪ ಕಲಾ ವೈಭವಕ್ಕೆ ಬೆರಗಾಗಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಕಟ್ಟಿರುವ ವೈಧ್ಯಮಯ ಕಲಾಕಾರಿಯ  ಸ್ವಾಮಿನಾರಾಯಣ ಮಂದಿರಗಳನ್ನು ಕಂಡಿದ್ದಾರೆ. ಅವುಗಳ ಕಲಾ ವೈಭವಗಳ ಬಗ್ಗೆ ಪರಿಚಯಪಡೆದಿದ್ದಾರೆ. 'ಸ್ವಾಮಿನಾರಾಯಣ  ಮಂದಿರ' ನಿರ್ಮಾಣದ ವೆಚ್ಚ ೪೦ ಮಿಲಿಯನ್ ಕೆನೆಡಿಯನ್ ಡಾಲರ್ ಗಳು.  ಭಾರತದಲ್ಲೇ ಹಲವಾರು ಭಾಗಗಳನ್ನು ಕೆತ್ತಿ ಇಟ್ಟಿದ್ದರು. ಅವನ್ನೆಲ್ಲಾ ಹಡಗಿನಲ್ಲಿ ಕೆನಡಾಕ್ಕೆ ಆಮದು ಮಾಡಿಕೊಂಡು, ಭಾರಿ-ಭಾರಿ ಟ್ರಕ್ ಗಳಲ್ಲಿ ಟೊರಾಂಟೋ ನಗರದ ಮಂದಿರವಿರುವ ಜಾಗಕ್ಕೆಸಾಗಿಸಲಾಯಿತು. ನಿರ್ಮಾಣ ಕಾರ್ಯದಲ್ಲಿ ೨,೦೦೦ ಅನುಭವೀ, ಕುಶಲ ಕಾರೀಗರ್ ಗಳ ಯೋಗದಾನವಿದೆ. 'ಸ್ವಯಂ ಸೇವಕರ ತಂಡ,' ವೇ ದೇವಾಲಯದ ಕಟ್ಟುವ ಕೆಲಸದಲ್ಲಿ ಸದಾ ನಿರತವಾಗಿದೆ.

ಈಗಾಗಲೇ ವಿಶ್ವದಲ್ಲಿ ನಿರ್ಮಿಸಲಾದ ೭೦೦ ಅಕ್ಷರ ಪುರುಷೋತ್ತಮ ಮಂದಿರಗಳ ಪೈಕಿ, ಈ ಮಂದಿರ ಸ್ವಲ್ಪ ಭಿನ್ನವಾಗಿದೆ. ಅತಿ ಪ್ರಮುಖ ಮೂರ್ತಿಗಳು, ಕಂಭಗಳಿಗೆ ಇಟಾಲಿಯನ್ ಮಾರ್ಬಲ್ ಬಳಸಲಾಗಿದೆ. ಪ್ರತಿ ಮಿಲಿಮೀಟರ್ ಜಾಗವನ್ನೂ ಹಾಗೆ ಬಿಟ್ಟಿಲ್ಲ. ಏನಾದರೊಂದು ಮನಮೋಹಕ ಚಿತ್ತಾರವಿದ್ದೇ ಇರುತ್ತದೆ. ಎಲ್ಲಿಯೂ ಲೋಹದ ಬಳಕೆಯಾಗಿಲ್ಲ.  ಎಲ್ಲವು ಕಲ್ಲುಗಳಿಂದಲೇ !
 
ಗುಜರಾತಿನ  'ಬೋಚಸನ್' ಎಂಬ ಗ್ರಾಮದಲ್ಲಿ ಪ್ರಪ್ರಥಮವಾಗಿ 'ಸ್ವಾಮಿನಾರಾಯಣ್ ದೇವಾಲಯ' ಕಟ್ಟಲ್ಪಟ್ಟಿತು. ಆದ್ದರಿಂದ 'ಬೋಚಸನ್ವಾಸಿ ',ಎಂಬ ಪದ ಬಳಕೆಯಲ್ಲಿದೆ. ವಿಶ್ವದ ಮೂಲೆಮೂಲೆಗಳಿಂದ ಶ್ರದ್ಧಾಳುಗಳು ಹಿಂಡು ಹಿಂಡಾಗಿ ಈ ಮಂದಿರವನ್ನು ವೀಕ್ಷಿಸಲು ಬರುತ್ತಾರೆ.
 
ಚಿತ್ರ ಲೇಖನ :
ಹೊರಂಲವೆಂ,
-ಟೊರಾಂಟೋ, ಕೆನಡಾ,
Rating
No votes yet