ಕನಸುಗಳಿದ್ದವು, ಆದರೆ ಕಾಸಿರಲಿಲ್ಲ, ಅಸ್ಟೇ (ಹೆಂಗೆಂಗ್ ಇದ್ದೋರ್- ಹೆಂಗೆಂಗ್ ಆದರು ಗೊತ್ತ?)

ಕನಸುಗಳಿದ್ದವು, ಆದರೆ ಕಾಸಿರಲಿಲ್ಲ, ಅಸ್ಟೇ (ಹೆಂಗೆಂಗ್ ಇದ್ದೋರ್- ಹೆಂಗೆಂಗ್ ಆದರು ಗೊತ್ತ?)

 

 

 

 

ಅದೇ ತಾನೇ , 'ನನ್ನ' ಡಿಗ್ರಿ ಮುಗಿದಿತ್ತು, ಹಿಂದೆಯೇ ಪುಣೆಯ 'ಟೆಲ್ಕೋ' ಕಂಪನಿಯಲ್ಲಿ ನೌಕರಿಯೂ ಸಿಕ್ಕಿತ್ತು. ಆ ದಿನಗಳಲ್ಲಿ ನನ್ನ ಸಹೋದ್ಯೋಗಿ ಆಗಿದ್ದವರು ಪ್ರಸನ್ನ. ಅವರು ಈಗ ವಿಪ್ರೊ ಸಂಸ್ಥೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಪ್ರಸನ್ನ, ಎರಡೆರಡು ದಿನಕ್ಕೆ ಒಂದರಂತೆ ಒಂದೊಂದು ಹೊಸ ಪುಸ್ತಕ ತಂದು ನನಗೆ ಓದಲು ಕೊಡುತ್ತಿದ್ದರು. ಆ ಎಲ್ಲ ಪುಸ್ತಕಗಳ ಮೇಲೆ 'ಅವರ '(ಪ್ರಸನ್ನ ಅಲ್ಲ , ಅದನ್ನು ಬರೆದ ಲೇಖಕರದು ) ಹೆಸರಿರುತ್ತಿತ್ತು. 'ಅವರು' ಆಗ 'ಪುಣೆ'ಯಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು, ಆಗಲೇ ವಿದೇಶ ಪ್ರವಾಸವನ್ನು ಮಾಡಿದರು. ಕುಶಲೋಪರಿಗೆ ನಿಂತಾಗ , ಪ್ರಸನ್ನ ಮೇಲಿಂದ ಮೇಲೆ 'ಅವರ' ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳುತ್ತಲೇ ಇರ್ತಿದ್ರು. ಈ ಕಾರಣದಿಂದಾಗಿ 'ಅವರನ್ನು' ಪ್ರತ್ಯಕ್ಷವಾಗಿ ನೋಡುವ ಮೊದ- ಮೊದಲೇ 'ಅವರು ಹೀಗಿರಬಹುದೇನೋ' ಎಂಬ ಅಂದಾಜು ನನಗಿತ್ತು.

'ಅವರ' ಪ್ರಖರ ಚಿಂತನೆ, ಬುದ್ಧಿವಂತಿಕೆ ಕುರಿತು ಮೆಚ್ಚುಗೆ , ಅಭಿಮಾನ ಜತೆಯಾಗಿದ್ದವು. ಹೀಗಿದ್ದಾಗಲೇ ಅದೊಂದು ರಾತ್ರಿ ಊಟಕ್ಕೆ ಪುಣೆಯ 'ಗ್ರೀನ್ ಫೀಲ್ಡ್ಸ್' ಹೋಟೆಲಿಗೆ ಬರುವಂತೆ , ಪ್ರಸನ್ನ ಅವರ ಮೂಲಕ 'ಅವರು' ನನಗೆ ಆಹ್ವಾನ ಕಳಿಸಿದರು, ಒಮ್ಮೆಯೂ ಭೇಟಿಯಾಗದಿದ್ದರೂ ಹೋಟೆಲಿಗೆ ಊಟಕ್ಕೆ ಆಹ್ವಾನಿಸುವ 'ಅವರ' ವರ್ತನೆ ನನಗೆ ಟೂ ಮಚ್ ಅನ್ನಿಸಿದ್ದು ಸುಳ್ಳಲ್ಲ. 'ಅವರು' ಆಹ್ವಾನಿಸಿದ್ದವರ ಪಟ್ಟಿಯಲ್ಲಿ 'ನನ್ನನ್ನು' ಬಿಟ್ಟರೆ ಒಬ್ಬರೂ ಮಹಿಳೆಯರಿರಲಿಲ್ಲ, ಈ ಕಾರಣದಿಂದಾಗಿ 'ನಾನು' ಆಹ್ವಾನವನ್ನು ನಯವಾಗಿಯೇ ತಿರಸ್ಕರಿಸಿದೆ, ಆದರೆ 'ಅವರು' ಬಿಡಲಿಲ್ಲ ಮತ್ತೆ ಆಹ್ವಾನಿಸಿದರು, ಬರಲೇಬೇಕು ಎಂದರು, ಅಸ್ಟೇ ಅಲ್ಲ ಸಂಜೆ ೭.೩೦ಕ್ಕೆ ಹೋಟೆಲಿನಲ್ಲಿ ಭೇಟಿಯಾಗೋಣ ಎಂದೂ ಸಂದೇಶ ಕಳಿಸಿದರು.

'ಅವರು' ಅಸ್ಟೆಲ್ಲಾ ಹೇಳಿದ ನಂತರವೂ ಹೋಗದೆ ಇದ್ರೆ ಚೆನ್ನಾಗಿರಲ್ಲ ಅನ್ನಿಸ್ತು, 'ಸರಿ' ಬರ್ತೀನಿ ಎಂದೇ. ಎಲ್ಲರೂ ಊಟಕ್ಕೆ ಸೇರುವ ದಿನವೂ ನಿಗದಿಯಾಯಿತು. ಆ ಹೋಟೆಲಿನ ಸಮೀಪವೇ ಇದ್ದ ಟೈಲರ್ ಅಂಗಡಿಗೆ ಒಂದಸ್ಟು ಬಟ್ಟೆ ಕೊಡುವುದಿತ್ತು, ಆ ಕೆಲಸ ಮುಗಿಸಿಕೊಂಡು ಊಟಕ್ಕೆ ಹೋಗೋಣ ಎಂದು ನಿರ್ಧರಿಸಿ,೭ ಘಂಟೆಗೆ ಅತ್ತ ನಡೆದೆ. ಅದೇ ವೇಳೆಗೆ 'ಅವರು' ಹೋಟೆಲಿನ ಮುಂದೆ ನಿಂತು ಉಳಿದವರಿಗಾಗಿ ಕಾಯುತ್ತಿದ್ದರು, 'ಅವರ' ಟೈಮ್ ಸೆನ್ಸ್ 'ನನಗೆ' ವಿಪರೀತ ಇಷ್ಟವಾಯಿತು. ಉಹೂ , ಮೊದಲ ಭೇಟಿಯಲ್ಲೇ ಯಾವ ವಿಶೇಷವೇನೂ ಜರುಗಲಿಲ್ಲ , ಬರೀ 'ಹಲೋ' -'ಹಲೋ' ಅಸ್ಟೇ, ಆದರೆ ನಂತರ ಪ್ರತಿ ಭೇಟಿಯ ಸಂದರ್ಭದಲ್ಲೂ ತಾವು ಓದಿದ ಹೊಸ ಪುಸ್ತಕ ಬಗ್ಗೆ ಹಾಗೂ ವಿದೇಶದಲ್ಲಿ 'ತಮಗಾದ' ಅನುಭವದ ಬಗ್ಗೆ ಹೇಳುತ್ತಿದ್ದರು, ಅವತ್ತಿಗೆ 'ಅವರು' 'ಉಗ್ರ ಮಾರ್ಕ್ಸ್ ವಾದಿಯಾಗಿದ್ದ್ರು'. ಕಮ್ಯೂನಿಸ್ಟ್ ಪಕ್ಷ ಸೇರಿ ರಾಜಕಾರಣಿ ಆಗ್ತೀನಿ ಅಂತಿದ್ರು. 'ಅವರು' ನನ್ನೊಂದಿಗೆ ಮುಕ್ತವಾಗಿ ಮಾತಾಡ್ತಾ ಇದ್ದುದು ನೋಡಿ 'ನಮ್ಮ್' ಗೆಳೆಯರ ಗುಂಪಿನಲ್ಲಿ ಗುಸುಗುಸು ಶುರುವಾಯ್ತು, ಅದನ್ನೆಲ್ಲಾ ನಾನು ನಿರಾಕರಿಸಿದೆ.

 

ಹೀಗಿದ್ದಾಗಲೇ ಅದೊಂದು ದಿನ ಹೋಟೆಲಿಗೆ, ಊಟಕ್ಕೆ ಬರಲು ಆಹ್ವಾನಿಸಿಯಾದ 'ಅವರು' ಊಟದ ನಂತರ 'ನೇರವಾಗಿ' ಹೇಳಿದ್ರು, ಏನು ಗೊತ್ತೇ? 'ಇವರೇ' ನಾನು ಮೊದಲೇ ಹೇಳ್ತಾ ಇದ್ದೇನೆ, ನಾನು ಬಡವರ ಮನೆಯಿಂದ ಬಂದವನು, ಅಂಥ ರೂಪವಂತನೂ ಅಲ್ಲ, "ಜೇಬಲ್ಲಿ ದುಡ್ಡೂ ಇಲ್ಲ". ಸಧ್ಯಕ್ಕೆ ಒಂದು ಒಳ್ಳೆ ನೌಕರಿಯಿಲ್ಲ, ಮುಂದೊಮ್ಮೆ 'ಕೊಟ್ತ್ಯಧಿಪತಿ' ಆಗ್ತೇನೆ ಎಂಬ ನಂಬಿಕೆ ಕೂಡ 'ನನಗಿಲ್ಲ', ಹಾಗೆ ನೋಡಿದರೆ, "ನೀನು" 'ಸುಂದರಿ, ಬುದ್ಧಿವಂತೆ, ಶ್ರೀಮಂತೆ, ನಿನ್ನನ್ನು ' ಮದುವೆಯಾಗಲು 'ನೂರಾರು' ಮಂದಿ ಕಾದು ನಿಲ್ಲುತ್ತಾರೆ, ಇಸ್ಟೆಲ್ಲಾ ಗೊತ್ತಿದ್ರೂ ಕೇಳ್ತಾ ಇದ್ದೀನಿ, 'ನೀನು' 'ನನ್ನನ್ನು' ಮದುವೆಯಾಗ್ತೀಯ? ನನ್ನಲ್ಲಿ ಹಣವಿಲ್ಲ, ಶ್ರೀಮಂತಿಕೆಯಿಲ್ಲ, ಆದರೆ 'ಕನಸು'ಗಳಿವೆ , ಅವುಗಳನ್ನು ನಾನು ನಿನ್ನೊಂದಿಗೆ ಹಂಚಿಕೊಳ್ಳಬೇಕು, ಸ್ಕ್ರಾಪ್ ಪೋಸ್ಟ್ ಮಾಡಿ ರದ್ದುಮಾಡು ಅಂತ ಆಸೆ ಇದೆ ಅಂದರು. 'ಅವರ' ನೇರ ಮಾತು, ತಮ್ಮ ಬದುಕಿನ ನೆಗೆಟಿವ್ ಅಂಶಗಳನ್ನು 'ಮುಚ್ಚ್ಚುಮರೆಯಿಲ್ಲದೆ ' ಹೇಳಿಕೊಂಡ ರೀತಿ 'ನನಗೆ' ಇಷ್ಟವಾಯಿತು.

ಸ್ವಲ್ಪ ದಿನ ಟೈಮ್ ಕೊಡಿ ಅಪ್ಪ ಅಮ್ಮನ ಜೊತೆ ಮಾತಾಡಿ ಹೇಳ್ತೀನಿ ಎಂದೆ. ಆಗ 'ನಮ್ಮ' ತಂದೆ-ತಾಯಿ ಹುಬ್ಬಳ್ಳಿ ಯಲ್ಲಿದ್ದರು, ಒಮ್ಮೆ ರಜೆಗೆ ಬಂದಾಗ 'ವಿಷಯ' ತಿಳಿಸಿದೆ, ಅಮ್ಮ ಒಪ್ಪಿದರು, ಆದರೆ ಅಪ್ಪ ಹುಡುಗನ ಹಿನ್ನೆಲೆ, ವಿದ್ಯಾರ್ಹತೆ ,ಸಂಬಳ, ನೌಕರಿಯ ಬಗ್ಗೆ ಕೇಳಿದ್ರು. ನಿಜ ಹೇಳಬೇಕಂದರೆ, ಅವತ್ತು 'ಅವರ' ಸಂಬಳ 'ನನಗಿಂತ' ಕಡಿಮೆಯಿತ್ತು. ಖಾಯಂ ನೌಕರಿಯಿಲ್ಲ, ಹೀಗೆಂದರೆ ಎಲ್ಲಿ 'ನಮ್ಮಪ್ಪ' ಬೇಡ ಅಂದುಬಿಡುತ್ತಾರೆ , ಎಂದು ಯೋಚಿಸಿ, , ಒಂದಿಸ್ಟು ಸುಳ್ಳು ಹೇಳಿದೆ., ಆಗ ಅಪ್ಪ ನಾನು 'ಅವರೊಂದಿಗೆ' ಮಾತನಾಡಿ, 'ಅವರ' ಮಾತು, ವರ್ತನೆ, ಎರಡೂ ಇಷ್ಟವಾದರೆ, ಮಾಡುವೆ ಮಾಡ್ತೇನೆ, ಒಮ್ಮೆ ಭೇಟಿ ಮಾಡಿಸು ಎಂದರು. 'ಪುಣೆ'ಯ ಹೋಟೆಲೊಂದರಲ್ಲಿ, ಭಾವೀ ಮಾವ ಅತ್ತೆಯನ್ನು ಭೇಟಿಯಾಗಲು, 'ಅವರು' ಒಪ್ಪಿದರು. ಒಂದು ನಿಗದಿತ ದಿನ ಹೇಳಿ ,ಬೆಳಗ್ಗೆ ಸರಿಯಾಗಿ ೧೦ ಘಂಟೆಗೆ ಬರ್ತೇನೆ ಎಂದರು. ಅವತ್ತು 'ನಾವು' ೯.೩೦ಕ್ಕೆ ಹೋಟೆಲಿಗೆ ಹೋದೆವು, ೧೦ ಘಂಟೆಯಾಯ್ತು, 'ಅವರು' ಬರಲಿಲ್ಲ, ಹನ್ನೊಂದು ಹೊಡೆಯಿತು, ಆಗಲೂ 'ಆಸಾಮಿ' ಪತ್ತೆಯಿಲ್ಲ. ಹನ್ನೊಂದುವರೆ ದಾಟಿದಾಗ ಮಾತ್ರ 'ನಮ್ಮ' ತಂದೆ ತಾಳ್ಮೆ ಕಳೆದುಕೊಂಡು ' ಮಾತಿಗೆ ತಪ್ಪುವವರಿಗೆ, ಟೈಮ್ ಸೆನ್ಸ್ ಇಲ್ಲದಿರುವವರಿಗೆ ಹೆಗಮ್ಮ 'ನಿನ್ನನ್ನು' ಮಾಡುವೆ ಮಾಡಿಕೊಡಲಿ ಅಂದರು.

 

ಹನ್ನೆರಡು ಘಂಟೆ ಆಯ್ತು ನೋಡಿ, ಆಗ 'ರಕ್ತಗೆಂಪು' ಬಣ್ಣದ ಹೊಸ ಶರ್ಟ್ ದರಿಸಿದ್ದ 'ಅವರು' ಅವಸರದಿಂದ ಬಂದರು. ಮೊದಲು 'ಸಾರಿ'' ಕೇಳಿದರು, 'ಕಚೇರಿ' ಕೆಲಸದ ನಿಮಿತ್ತ ಬಾಂಬೆಗೆ ಹೋಗಿದ್ದೆ ಅಲ್ಲಿ,ಬರುವಾಗ ಟ್ರಾಫಿಕ್ ಜಾಮ್ ಆಗಿಬಿಡ್ತು, ಬಸ್ಸಲ್ಲೇ ಹೋದರೆ ತುಂಬಾ ತಡವಾಗಿಬಿದುತ್ತೆ, ಅಂದುಕೊಂಡು ಮಾರ್ಗ ಮಧ್ಯೆ ಇಳಿದುಕೊಂಡು, ಟ್ಯಾಕ್ಸಿ ಮಾಡಿಕೊಂಡು ಬಂದೆ, ಅದರೂ ಲೇಟಾಯ್ತು ಸಾರಿ ಎಂದರು. ಈ ವಿವರಣೆಯನ್ನು 'ಅವರಿಂದ' ಕೇಳಿ ತಿಳಿದ ನಂತರವೂ 'ನಮ್ಮ' ತಂದೆ ನೇರವಾಗಿ 'ಅವರನ್ನು' "ನೀವು ಜೀವನದಲ್ಲಿ ಏನಾಗಬಯಸಿದ್ದೀರಿ"?/ನಿರ್ಧರಿಸಿದ್ದೀರಿ? ಎಂದು ಕೇಳಿದರು. 'ಅವರು' ತಕ್ಷಣವೇ 'ಕಮ್ಯೂನಿಸ್ಟ್ ಪಕ್ಷ ಸೇರಿ 'ರಾಜಕಾರಣಿ' ಆಗಬೇಕು, ಮತ್ತು ಒಂದು 'ಅನಾಥಾಶ್ರಮ' ಆರಂಭಿಸಬೇಕು ಅಂತಿದೀನಿ ಅಂದರು.

ಆಗ 'ನಮ್ಮ' ತಂದೆ'ಯವರು, ಕ್ಷಮಿಸಿ, ಕಮ್ಯೂನಿಸ್ಟ್ರು ದೇಶದ ಉದ್ಧಾರ ಮಾಡಲು ಹೋಗಿ, ತಮ್ಮ ಸಂಸಾರವನ್ನೇ ಮರೆತುಬಿಡುತಾರೆ, ಅನ್ನೋದು ನನ್ನ ನಂಬಿಕೆ ,ಇದಲ್ಲದೆ ಜೊತೆಗೆ 'ನೀವು' ಬೇರೆ, 'ಅನಾಥಾಶ್ರಮ' ಶುರು ಮಾಡ್ತೀನಿ, ರಾಜಕೀಯ ಸೇರ್ತೀನಿ ಎಂದೆಲ್ಲ ಹೇಳ್ತಿದೀರ ಇದೆ ನಿಜವಾದರೆ, 'ನನ್ನ' ಮಗಳನ್ನು 'ನಿಮಗೆ' ಕೊಡಲಾರೆ, ಒಂದು ಒಳ್ಳೆಯ ನೌಕರಿ ಹಿಡಿಯಿರಿ, ಆರ್ಥಿಕವಾಗಿ ಸೆಟ್ಟಲ್ ಆಗಿ ಆಗ ಖಂಡಿತ ಮಾಡುವೆ ಮಾಡಿಕೊಡುತ್ತೇನೆ ಅಂದರು ಅಪ್ಪ.

ಆ ಮಾತಿಗೆ 'ಅವರು' ಒಪ್ಪಲಿಲ್ಲ, ಅತ್ತ ನಮ್ಮ ತಂದೆಯೂ ಸೋಲಲಿಲ್ಲ, ಹೀಗೆ ಮೂರು ವರ್ಷ ಕಳೆಯಿತು, ಒಂದು ಖುಷಿಯೆಂದರೆ, 'ನಮ್ಮ' ಗೆಳೆತನ ಆಗಲೂ ಚೆನ್ನಾಗೇ ಇತ್ತು. ಈ ಮಧ್ಯೆ ಊರಿಗೆ ಬಂದಾಗ ಅಪ್ಪನಿಗೆ ಹೇಳಿದ್ದೆ,'ನಿನ್ನ ಆಶಿರ್ವಾದ ಪಡೆಯದೆ ಮದುವೆಯಾಗಲ್ಲ ಕಣಪ್ಪ, ಯೋಚಿಸಬೇಡ'..... ಅಪ್ಪ ತಕ್ಷಣವೇ ಹೇಳಿದರು, 'ಅವರಿಗೆ' ಒಂದು ಒಳ್ಳೆ ಕೆಲಸ ಹುಡುಕಲು ಹೇಳು, ನಾನೇ ನಿಂತು ಮಾಡುವೆ ಮಾಡಿಕೊಡುತ್ತೇನೆ. ಅಂತೂ ೧೯೭೭ರಲ್ಲಿ ಬಾಂಬೆಯ 'ಪಾಟ್ನಿ' ಕಂಪ್ಯೂಟರ್ಸ್ ನಲ್ಲಿ ಜನರಲ್ ಮ್ಯಾನೇಜರ್ ಹುದ್ದೆಗೆ 'ಅವರು' ಸೇರಿಕೊಂಡರು.

ಕೆಲವೇ ತಿಂಗಳುಗಳ ನಂತರ, 'ಅವರನ್ನು' ತರಬೇತಿಗಾಗಿ ಅಮೆರಿಕಾಕ್ಕೆ ಕಲಿಸಲು ಕಂಪನಿ ನಿರ್ಧರಿಸಿತ್ತು. ಆಗ 'ಅವರು' 'ನನಗೆ' ಬೇಗ ಮದುವೆಯಾಗೋಣ ,ಇಬ್ಬರೂ ಅಮೆರಿಕಾಕ್ಕೆ ಹೋಗೋಣ ಎಂದರು. ಆ ವೇಳೆಗೆ ನಮ್ಮ ತಂದೆ ಕೂಡ 'ಮನಸ್ಸು' ಬದಲಿಸಿ, ಮದುವೆಗೆ ಸಮ್ಮತಿಸಿದರು.( ಆಗ 'ಅವರಿಗೆ' ಕೆಲಸ ಸಿಕಿತ್ತಲ್ಲ ಅದಕ್ಕೆ!) ಸ್ಕ್ರಾಪ್ ಪೋಸ್ಟ್ ಮಾಡಿ ರದ್ದುಮಾಡು ೧೯೭೮ರ ಫೆಬ್ರುವರಿ ೧೦ ರಂದು ಬೆಂಗಳೂರಿನ ಜಯನಗರದಲ್ಲಿದ್ದ 'ಅವರ' ಮನೆಯಲ್ಲಿ 'ನಮ್ಮ' ಮದುವೆ ಆಗೇ ಹೋಯ್ತು. ಜೀವನದಲ್ಲಿ ಮೊತ್ತ-ಮೊದಲ ಬಾರಿಗೆ 'ನಾನು' ರೇಷ್ಮೆ ಸೀರೆ ತೊಟ್ಟಿದ್ದೆ ಆಗ! ಮದುವೆಗೆ ತಗುಲಿದ ಒಟ್ಟು ಖರ್ಚು ಎಷ್ಟು ಗೊತ್ತೇ? ೮೦೦ ರೂಪಾಯಿಗಳು ಮಾತ್ರ.

'ನಾನು, ಮತ್ತು 'ಅವರು' ತಲಾ ೪೦೦ ರೊಪಾಯಿ ಹಾಕಿ 'ಖರ್ಚು' ಹಂಚಿಕೊಂಡೆವು. ಅಮೆರಿಕಾದಿಂದ ಮರಳಿ ಬರುವ ವೇಳೆಗೆ ಭಾರತದಲ್ಲಿ 'ಕಂಪ್ಯೂಟರ್ ಕ್ರಾಂತಿ' ಆರಂಭವಾಗಿತ್ತು. 'ಅವರು' ೧೯೮೧ ರಲ್ಲಿ, ತಮ್ಮ ನೌಕರಿಗೆ ರಾಜೀನಾಮೆ ನೀಡಿ, '೭ ಅಕ್ಷರದ', ಹೆಸರಿನ ಸಂಸ್ಥೆ ಹುಟ್ಟು ಹಾಕಿದರು. ಆಗ ಕೂಡ 'ಅವರ' ತಲೆ ತುಂಬಾ ಐಡಿಯಾ ಇದ್ದವೇ ಹೊರತು, ಬಂಡವಾಳ ಹೂಡಲು 'ಹಣ' ಇರಲಿಲ್ಲ. ಯಾವುದೇ ವ್ಯವಹಾರ ಮಾಡಿದ ಅನುಭವವೇ ಇರಲಿಲ್ಲ, ಆದರೆ 'ಅವರು' ಗೆದ್ದೇ ಗೆಲ್ತಾರೆ ಎಂದು 'ನನ್ನ' ಒಳ ಮನಸ್ಸು ಹೇಳುತ್ತಿತ್ತು.

ತಕ್ಷಣವೇ 'ಸಂಕಟದ' ಸಂದರ್ಭಕ್ಕೆ ಅಂತಾ ಕೂಡಿಟ್ಟಿದ್ದ ೧೦,೦೦೦ ರೂಪಾಯಿಗಳನ್ನ, 'ಅವರ' ಕೈಯಲ್ಲಿಟ್ಟು, 'ಇದು ಬಂಡವಾಳ ಅಂದುಕೊಳ್ಳಿ, ನಿಮ್ಮ ಕನಸುಗಳೆಲ್ಲ ನನಸಾಗಲಿ, ಶ್ರದ್ಧೆಯಿಂದ ಕೆಲಸ ಮಾಡ್ತಾ ಹೋಗಿ, ಖಂಡಿತ ಒಳ್ಳೆದಾಗುತ್ತೆ' ಎಂದೆ. 'ಆರು ಮಂದಿ ಸಮಾನ ಮನಸ್ಕರು' ಹಾಗೂ 'ಸಮಾನ ವಯಸ್ಕರೊಂದಿಗೆ' 'ಅವರು' ಕೆಲಸ ಆರಂಬಿಸಿದರು. ಅವತ್ತಿಗೆ 'ಪುಣೆಯಲ್ಲಿ' 'ನಾವು' ವಾಸವಿದ್ದ 'ಪುಟ್ಟ' ಮನೆಯೇ ಈ '೭ ಅಕ್ಷರದ' ಕಂಪನಿಯ ಹೆಡ್ ಆಫೀಸ್. ಮುಂದೆ 'ನಾನು' ಟೆಲ್ಕೋ ದ ನೌಕರಿಗೆ ರಾಜೀನಾಮೆ ನೀಡಿ , ಈ '೭ ಅಕ್ಷರದ' ಕಂಪನಿಯ ಬಳಗಕ್ಕೆ ಸೇರಿದೆ.

 

'ನಾನು' ಅಲ್ಲಿ 'ಕ್ಲರ್ಕ್,ಕಂ ,ಕುಕ್, ಕಂ ಪ್ರೋಗ್ರಾಮರ್' ಕಂ ಹೆಲ್ಪರ್ ಆಗಿದ್ದೆ. ಅದು 'ಉತ್ಸಾಹದ ವಯಸ್ಸು', ಹಗಲಿರುಳೆನ್ನದೆ ಎಲ್ಲರೂ ದುಡಿದರು, ಪರಿಣಾಮ ೧೯೮೩ ರಲ್ಲಿ, ಬೆಂಗಳೂರಿನ ಮೈಕೋ ಫಾಕ್ಟೊರಿಗೆ ಬಿಡಿಬಾಗಗಳನ್ನು ಒದಗಿಸುವ ಗುತ್ತಿಗೆ ಸಿಕ್ಕಿತು. ಈ ಎಲ್ಲ ಬೆಳವಣಿಗೆಯಿಂದ ಖುಷಿಯಾದ 'ನಮ್ಮ' ತಂದೆ , 'ಅವರಿಗೆ' ಒಂದು 'ಸ್ಕೂಟರ್ ' ಅನ್ನು ಕಾಣಿಕೆಯಾಗಿ ನೀಡಿದರು.. ಮುಂದೆ 'ಯಶಸ್ಸಿನ ಒಂದೊಂದೇ ಮೆಟ್ಟಿಲನ್ನು ಹತ್ತಿದ ನಂತರ, ಕಂಪನಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದ 'ಎನ್.ಎನ್' ಅವರು 'ಕಂಪನಿಯ ಯಶಸ್ಸಿಗೆ 'ನನ್ನ'( ಅಂದರೆ ಎಸ್.ಎಂ) ಕೊಡುಗೆ ದೊಡ್ಡದೆಂದು, ಅದಕ್ಕಾಗಿ 'ನನ್ನನ್ನೂ' ಕಂಪನಿಯ ನಿರ್ದೇಶಕರೆಂದು ಸೇರಿಸಿಕೊಳ್ಳೋಣ ಎಂದರು. ಅದಕ್ಕೆ 'ತಕ್ಷಣವೇ' ವಿರೋಧಿಸಿದ 'ಅವರು' ....... 'ಸಾರೀ' ಅದಕ್ಕೆ 'ನನ್ನ' ವಿರೋಧವಿದೆ , ಯಾವುದೇ ಕಂಪನಿ ಯಲ್ಲಾಗಲಿ ಗಂಡ-ಹೆಂಡತಿ ಇಬ್ಬರೂ ಒಟ್ಟೊಟ್ಟಿಗೆ ,ದೊಡ್ಡ ಹುದ್ದೆಗಳಲ್ಲಿ ಇರಬಾರದು ಅಂದುಬಿಟ್ಟರು. ಈ ಮಾತಿಂದ 'ನನಗೆ' ಶಾಕ್' ಆಯ್ತು. ಏಕೆಂದರೆ ಬಂಡವಾಳ ಹಾಕಿದ್ದವಳೇ 'ನಾನು' ಅಂಥ 'ನನಗೇ' ಕಂಪನಿಯಲ್ಲಿ ಪ್ರವೇಶವಿಲ್ಲ ಅಂದರೆ?....

 

'ನಾನು' ಹೀಗೆ ಯೋಚಿಸ್ತಿದ್ದಾಗಲೇ ಬಳಿ ಬಂದ 'ಅವರು' ,....... 'ಹೌದು ನಾನು ಹೇಳ್ತಿರೋದು ಸರಿಯಾಗೇ ಇದೆ, ಕಂಪೆನಿಗೆ ಸೇರಿದವರಿಂದ ನಾನು ಶೇ ೧೦೦ ರಸ್ತು 'ಶ್ರಮ' ಬಯಸುತ್ತೇನೆ. 'ನಾವಿಬ್ಬರೂ' ಒಂದೇ ಕಂಪೆನಿಯಲ್ಲಿದ್ದರೆ, "ಅಯ್ಯೋ ನನ್ನ ಗಂಡ ಮಾಡ್ತಾನೆ ಬಿಡು ಅಂತ ನೀನು, ನನ್ನ ಹೆಂಡಿ ಮಾಡ್ತಾಳೆ ಬಿಡು ಅಂತಾ ನಾನು 'ಉಡಾಫೆ' ಮಾಡಬಹುದು, ಹಾಗಾದಾಗ ಕಂಪನಿ ಬೆಳೆಯುವುದಿಲ್ಲ, 'ನನ್ನ' ಮಾತಿಂದ 'ನಿಂಗೆ' ಬೇಜಾರಾಗಿದೆ ಅಂತ ಗೊತ್ತು , ಆದರೂ 'ಸಾರೀ' ಅಂದರು. , ನನತರ 'ನಾನು' ಯೋಚಿಸಿದಾಗ ಅದೂ ಸರಿ ಅನ್ನಿಸಿತು.

ಪ್ರಿಯ ಸಂಪದ ಓದುಗ ಮಿತ್ರರೇ, ಇದು 'ಸುಧಾ -ನಾರಾಯಣ ಮೂರ್ತಿ' ಅವರ ಲವ್ ಸ್ಟೋರಿ, ಇವತ್ತು ಸುಧಾಮೂರ್ತಿ - ನಾರಾಯಣ ಮೂರ್ತಿ ಅವರನ್ನು , ಆರಾಧಿಸುವವರು, ವಿರೋಧಿಸುವವರೂ ಇದ್ದಾರೆ. ಅದು ಅತ್ಲಾಗಿರಲಿ, ಆದರೆ ಇಡೀ ದೇಶವೇ ಹೆಮ್ಮೆ ಪಡುವಂತ ಸಂಸ್ಥೆ ಕಟ್ಟುವ ಮುನ್ನ ಅವರೂ ನಮ್ಮ - ನಿಮ್ಮಂತೆಯೇ 'ಹಗಲುಗನಸು' ಕಂಡರೂ, ಸಂಕಟದಲ್ಲಿ ಬೆಂದರು, ಮುಂದೆ ಅದೆಸ್ಟೋ ವರ್ಷಗಳ ನಂತರ ಸಂತೋಷದಲ್ಲಿ ಮಿಂದರು, ಎಂದು ವಿವರಿಸುವ, ಕಷ್ಟ ಪಟ್ಟರೆ, 'ಏನನ್ನೂ' ಬೇಕಾದರೂ ಸಾಧಿಸಬಹುದು ಎಂದು ಹೇಳುವ ಸಲುವಾಗಿ ಸುಧಾಮೂರ್ತಿ ಅವರ ಆತ್ಮಚರಿತ್ರೆಯಲ್ಲಿದ್ದ ಈ ವಿವರಣೆಯನ್ನು ಇಲ್ಲಿ ನೀಡಿದ್ದೇನೆ.

ಈ ಸ್ಟೋರಿ ಹೇಗಿದೆ?

ನಿಮಗೆ ಇದನ್ನು ಓದಿ ಏನನ್ನಿಸಿತು?

ಖಂಡಿತ ತಿಳಿಸ್ತೀರಲ್ಲ.

ಇದನ್ನು ೧೬ ಫೆಬ್ರುವರಿ ೨೦೦೯ ರ ವಿಜಯ ಕರ್ನಾಟಕದ ಸಿಂಪ್ಲಿ ಸಿಟಿ ಪೇಜ್ನಲ್ಲಿ ಪ್ರಕಟಿಸಿದ್ದರು.

ಇದನ್ನು ಆ ದಿನಪತ್ರಿಕೆಗಾಗಿ ಬರೆದವರು, ಅಲ್ಲಿ ಇದೆ ತರಹದ ಎಸ್ಟೊಂದು 'ಬರಹ' ಗಳನ್ನೂ ಬರೆದು ಓದುಗರ ಮನ ಗೆದ್ದಿರುವ ನಮ್ಮ ಪ್ರೀತಿಯ ಎಂ.ಆರ್ .ಮಣಿ ಕಾಂತ್ ಅವರು..(armanikanth@yahoo.co.in) ಮೂಲ ಬರಹದ ಕತೃ, ಸುಧಾಮೂರ್ತಿಯವರಿಗೂ, ಮತ್ತು ಪತ್ರಿಕೆಗೆ ಬರೆದ ಎಂ.ಆರ್ .ಮಣಿ ಕಾಂತ್ ಅವರಿಗೂ ನಾನು ಅಭಾರಿ.

ಇನ್ನು ನಾನು ಈ ಬರಹದಲ್ಲಿ ಎಲ್ಲಿಯೂ ಯಾರೊಬ್ಬರ (ಸುಧಾಮೂರ್ತಿ ಗೆಳೆಯ ಪ್ರಸನ್ನ ಅವರನ್ನು ಬಿಟ್ಟು) ಹೆಸರನ್ನು ಉದ್ದೇಶಪೂರ್ವಕವಾಗಿ ಹೇಳಿಲ್ಲ., ಅದು ಓದುಗ ಮಿತ್ರರ ಕುತೂಹಲ ಇಮ್ಮಡಿ ಮಾಡಲು ಮಾತ್ರ. ಇದನ್ನು ಈಗಾಗಲೇ, ತುಂಬಾ ಜನ ಓದಿರಬಹುದು, ಇಲ್ಲ ಕೇಳಿರಬಹುದು, ಆದರೆ ಇಂಡೋ ನಾಳೆ ನಾವು ಓದಿದ ಪೇಪರ್ ಹರಿದಾಕಬಹುದು, ಬಿಸಾಕಬಹುದು, ಆದರೆ, ಈ ಸಂಪದದಲ್ಲಿ, ಯಾವುದಾದರೊಂದು ಬರಹ ಬರೆದೆದರೆ ಅದು ಶಾಶ್ವತವಾಗಿ ಸ್ಟೋರ್ ಆಗಿಬಿಡುತ್ತದೆ ಅಂತ ಓದಿದ್ದೇನೆ, ಅದಕ್ಕೆ ಇದನು ಇಲ್ಲಿ ಹಾಕಿದ್ದೇನೆ..

ನಾನು ಈ ಬರಹದಲ್ಲಿ ಉಪಯೋಗಿಸಿರುವ , ನಾನು ಎಂದರೆ ಸುಧಾಮೂರ್ತಿ, ಎಂತಲೂ, ಅವರು ಎಂದರೆ ನಾರಾಯಣ ಮೂರ್ತಿ ಎಂತಲೂ, ಹಾಗೂ ಎನ್ ಎನ್ ಎಂದರೆ ನಂದನ್ ನಿಲೇಕಣಿ ಅಂತಲೂ ಇನ್ನೊಮ್ಮೆ ಓದಿಕೊಳ್ಳಬೇಕಾಗಿ ನನ್ನ ವಿನಂತಿ..

================================================================================

>>>ಇದನ್ನು ನಾ ಬರೆದದ್ದು : February 23, 2009 - 2:22pm  ರಂದು

ಪ್ರಕಟ ಆಗಿರಲಿಲ್ಲ...

ಈಗ ಮತ್ತೊಮ್ಮೆ ಸೇರಿಸಿರುವೆ..

 

Rating
No votes yet

Comments

ಬಹಳ ದಿನಗಳ ನಂತರ ನಿಮ್ಮೆಲ್ಲರ ಪ್ರತಿಕ್ರಿಯೆಗಳನ್ನು ನೋಡಿ ಮರು ಪ್ರತಿಕ್ರಿಯಿಸುತ್ತಿರುವೆ. ಮೊದಲ ಸಾರಿ ಬರೆದಾಗ(ಕೆಲ ವರ್ಷಗಳ ಹಿಂದೆ) ಇದೇನು ಅಸ್ತು ಗಮನಕ್ಕೆ ಬಿದ್ದಿರಲಿಲ್ಲ. ಈಗ ನಿಮ್ಮೆಲ್ಲರನ್ನು ಮುಟ್ಟಿದ್ದು ತಟ್ಟಿದ್ದು ಖುಷಿ ತಂತು...
ಸ್ಪೂರ್ತಿ ಕೊಡುವ ಸತ್ಯ ಘಟನೆ ಅನ್ಯೋನ್ಯ ಜೋಡಿ. ದಾಂಪತ್ಯ.

ಪ್ರತಿಕ್ರಿಯಿಸಿದ ಸರ್ವ ಸಂಪದಿಗರಿಗೆ ನನ್ನಿ
ಶುಭವಾಗಲಿ..

\|