ಗಜಲ್

ಗಜಲ್

ಕವನ

 ಆರಲಿಲ್ಲ ನೋವು ಗಾಳಿ ಬೀಸಿತ್ತು ಸಾಕಿ,

ತಣಿಯಲಿಲ್ಲ ಎದೆ ಗಾಳಿ ಬೀಸಿತ್ತು ಸಾಕಿ.

 

ಓದಡೋಡಿ ಬಂದ ನೆನಪುಗಳೇ ಗುಟುಕಾದವು ಜೀವಕ್ಕೆ,

ಹನಿಯಲಿಲ್ಲ ಮೋಡ ಗಾಳಿ ಬೀಸಿತ್ತು ಸಾಕಿ,

 

ಶ್ರಾವಣದ ಸಂಜೆಗಳಿಗೆ ನನ್ನ ಕ್ಷಣಗಳ ಶಾಪಗಳಿವೆ,

ತಿಳಿಯಾಗಲಿಲ್ಲ ಬಾನು ಗಾಳಿ ಬೀಸಿತ್ತು ಸಾಕಿ.

 

ನೆಪಗಳನ್ನೆ ಸತ್ಯ ಎಂದುಕೊಂಡಿದ್ದಿದೆ ಈ ಮನ

ದಕ್ಕಲಿಲ್ಲ ಹನಿ ಗಾಳಿ ಬೀಸಿತ್ತು ಸಾಕಿ

 

ಹೀಗೆಯೇ ಅಲೆದಾಯ್ತು ಮೋಡ ಅಲೆಮಾರಿ ಎಂದು

ಬಿರಿಯಲಿಲ್ಲ ಹೂ ಗಾಳಿ ಬೀಸಿತ್ತು ಸಾಕಿ

Comments