ಗೊಂದಲವಿದೆ, ಗೆದ್ದವರಾರು!

Submitted by dayanandac on Wed, 08/29/2012 - 20:13
ಬರಹ

ಸುತ್ತಲೊ ಜನಸ್ತೋಮ ಆತನದೇ


ಹೆಸರ ಕೊಗುತ್ತಿರಲು, ಆತ


ಸೋಲುತ್ತಾನೆ,


ಬದುಕಿನಲ್ಲಿ ಜಯಿಸುವ ಹಂಬಲಕ್ಕಾಗಿ


ಹಣಕ್ಕೆ ತನ್ನನೇ ತಾನು ಮಾರಿಕೊಂಡದ್ದಕ್ಕಾಗಿ


ಮೊಣಕಾಲೊರಿ ಬಿಕ್ಕುತ್ತಿದ್ದಾನೆ,


ಸಹ ಓಟಾಗರ ಗುರಿಯ ಗೆರೆ ದಾಟಿದ್ದಕ್ಕಾಗಿ,


ಮೇಲಾಗಿ  ಆತ ಜಯಿಸಿದ್ದಕ್ಕಾಗಿ, ಆಟ ಸೋತಿದ್ದಕ್ಕಾಗಿ


ಸತ್ತಿದ್ದರೊ ಸರಿಯೇ ಗೌರವಯುತವಾಗಿ


ಮಾಡಿದ ತಪ್ಪಿನರಿವಾಗಿ


ಅಪ್ಪಟ ಅಭಿಮಾನಿಗಳ ಮನ ಘಾಸಿಗೊಳಿಸಿ, ಕಣ್ಣೀರು ತರಿಸಿದ್ದಕ್ಕಾಗಿ


ಹೀಗಾಗಿ, ಮಾತುಗಳು ಒಂದೊಂದಾಗಿ


ನಿಧಾನವಾಗಿ, ಆತನಿಂದ ಕಣ್ಮರೆಯಾಗಿ


ಮೌನ ಮಾತಿಗಿಳಿದಿದೆ, ಬದುಕು


ಭಂಗವಾಗಿದೆ, ಆತನಿಂದ ಅತನ ವಿಮುಖಗೊಳಿಸಿದೆ


ದಿನಾ ದಿನಾ ನಿಧಾನವಾಗಿ ಕೊಲ್ಲುತ್ತಿದೆ;


 


ಅದರೆ, ಆತನ ಆ ಸೋಲು


ಮಡದಿಯ ರೋಗ ಗುಣಪಡಿಸಿದೆ


ಅಪ್ಪನಿಗೆ  ಅಮ್ಮನಿಗೆ ಆಸರೆಯಾಗಿ


ತಂಗಿಯರಿಗೆ ಬದುಕ ಪುನರ್ನಿರ್ಮಿಸಿದೆ


ಮಕ್ಕಳಿಗೆ ಭವಿಶ್ಯದ ನಿಧಿಯಾಗಿದೆ


ಅನಾಥರಿಗೆ ಆಶ್ರಯ ಒದಗಿಸಿದೆ


ಸೋಲು ಇಲ್ಲಿ ಗೆದ್ದಿದೆಯಾ....!


ಇಲ್ಲಿ ಗೊಂದಲವಿದೆ, ಗೆದ್ದವರು ಯಾರು?!


 


 


 


 


 

Comments