'ಲವ್ ಲೆಟರ್ ' ರಾದ್ದಾಂತ!!

'ಲವ್ ಲೆಟರ್ ' ರಾದ್ದಾಂತ!!

ಬರಹ
ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ಹೊಲಗಳ ಮಧ್ಯೆದಿಂದ ಹಾದು ನದಿಯನ್ನು ಈಜಿಕೊಂಡು ಒದ್ದೆ ಬಟ್ಟೆಯನ್ನು ಪಂಪು ಶೆಡ್ಡಿನಲ್ಲಿಟ್ಟು. 'ಶ್ರೀದೇವಿ' ಬಸ್ಸನೇರಿ ಖಛೇರಿಗೆಂದು ಮೂಡಬಿದ್ರೆಗೆ ಹೊರಟೆ. ದಿನವೂ ಒಂದು ಸ್ಮೈಲ್ ಕೊಟ್ಟು ಟಿಕೆಟ್ ಕೊಡುವ ಕಂಡೆಕ್ಟರ್ ಟಿಕೆಟ್ ಕೊಟ್ಟು ಹಣ ಪಡೆದು ಕೊಂಡ. ಬಸ್ಸು ಮುಂದೆ ಸಾಗುತ್ತಿದ್ದಂತೆ ಅಂಗಡಿಯಲ್ಲಿ ಪೇಪರ್ ಪಡಕೊಂಡು ಟೈಮ್ ಪಾಸಿಗಾಗಿ ಓದುತ್ತಾ ಇದ್ದೆ. ನನ್ನ ಒಂದು ಘಂಟೆಯ ಪ್ರಯಾಣದಲ್ಲಿ ಪೇಪರ್ ಬಿಟ್ಟರೆ ಬೇರೇನೂ ನನಗೆ ಕಾಣದು... ಬೆಳಗ್ಗಿನ ಸಮಯವಾದ್ದರಿಂದ ಶಾಲಾ ಮಕ್ಕಳಿಂದ ಬಸ್ಸು ತುಂಬಿ ತುಳುಕುತ್ತಿತ್ತು.. ಮಕ್ಕಳು ಫುಟ್ ಬೋರ್ಡಿನಲ್ಲೂ ನೇತಾಡುತ್ತಿದ್ದರು. 'ಕಡಲ ಕೆರೆ' ಎಂಬ ಊರು ಬಂದಾಕ್ಷಣ ಬಸ್ಸು ನಿಂತಿತು. ಹೊರಗೆ ನೋಡಿದರೆ. ಹಲವಾರು ಯುವಕರು ಬಸ್ಸನ್ನು ಅಡ್ಡ ನಿಂತು ನಿಲ್ಲಿಸಿದ್ದಾರೆ. ಪೆಟ್ರೋಲ್ ರೇಟು ಜಾಸ್ತಿಯಾಗಿದೆ.. ಬಸ್ಸಿನ ರೇಟು ಜಾಸ್ತಿಯಾದ್ದರಿಂದ ಇವರ ಸ್ಟ್ರೈಕೋ ಏನೋ ಎಂದು ತಿಳಿದು.. ಪೇಪರ್ನತ್ತ ಕಣ್ಣು ಹಾಯಿಸಿದೆ... ಇತ್ತ ನಮ್ಮ ಕಂಡೆಕ್ಟರ್ ನೆರೆದ ಜನರತ್ತ ಸಾಗಿದ.. ಎಲ್ಲರೂ ಅವನನ್ನು ಸುತ್ತುವರಿದರು.. ನೋಡು ನೋಡುತ್ತಿದ್ದಂತೆಯೇ ಮಾತು ತಾರಕಕ್ಕೇರಿತು.. ನೆರೆದ ಜನರು ಕಂಡೆಕ್ಟರನನ್ನು ಹಿಗ್ಗಾ ಮುಗ್ಗಾ ಹೊಡೆಯಲಾರಂಭಿಸಿದರು.. ಇನ್ನೊಂದು ಮೂಲೆಯಲ್ಲಿ ಹುಡುಗಿಯೊಂದು ಈ ದೃಶ್ಯವನ್ನು ನೋಡುತ್ತಾ ನಿಂತಿತ್ತು.. ೩-೪ ನಿಮಿಷದ ನಂತರ ಕಂಡೆಕ್ಟರ ನಮ್ಮ ಬಸ್ಸು ಹತ್ತಿದ. ಬಸ್ಸು ಚಲಿಸಿತು. ಬಸ್ಸು ನಿಂತಾದ ನಂತರ ಡ್ರೈವರನಲ್ಲಿ ವಿಷಯವೇನೆಂದು ಕೇಳಿದೆ.. ಈ ಕಂಡೆಕ್ಟರ ಆ ಹುಡಿಗಿಗೆ ಪ್ರೇಮ ಪತ್ರವನ್ನು ಹಿಂದಿನ ದಿನ ಕೊಟ್ಟಿದ್ದನಂತೆ.. ಆ ಹುಡಿಗಿ ತನ್ನ ಅಣ್ಣನಲ್ಲಿ ಹೇಳಿ ಊರ ಯುವಕರನ್ನು ಸೇರಿಸಿ ಈ ಕಂಡಕ್ಟರನ್ನ್ನು ಹಳಿದು ಹೊಡೆದರಂತೆ... ಈ ಸನ್ನಿವೇಶ ಯಾವುದೋ ಒಂದು ಸಿನಿಮೀಯ ದೃಶ್ಯದಂತ ಗೋಚರಿಸಿತ್ತು. ಬಸ್ಸಿನೊಳಗಿಂದ ಕೆಲವು ಹುಡಿಗಿಯರು ಹೇಳುತ್ತಿದ್ದುದು ಕೇಳಿಸಿತು " ನಾಳೆಯಿಂದ ಈ ಬಸ್ಸಿನಲ್ಲಿ ನಾನು ಬರಲ್ಲಪ್ಪ"... ಪ್ರಕಾಶ್ ಶೆಟ್ಟಿ ಉಳೆಪಾಡಿ www.prakashaka.com