ಈ "ರಾಜಕೀಯ ಆತ್ಮಹತ್ಯೆ' ಏಕೆ?

ಈ "ರಾಜಕೀಯ ಆತ್ಮಹತ್ಯೆ' ಏಕೆ?

ಬರಹ

 ಸಂಸತ್ತು ಹಲವಾರು ಮಹತ್ವಪೂರ್ಣ ಮಸೂದೆಗಳನ್ನು, ಚರ್ಚೆ ಅಥವಾ ಪ್ರತಿರೋಧವಿಲ್ಲದೆ ಠರಾವು ಮಾಡುತ್ತಿದೆ. ಈ ಪೈಕಿ ಕೆಲವಾದರೂ, ಹಾಗೆನಿಸಿದರೂ, ನಿಜವಾಗಿ ಸೀದಾ-ಸಾದಾ ಇರದಿರಬಹುದು. ಅವುಗಳಲ್ಲಿರಬಹುದಾದ ಓರೆ-ಕೊರೆಗಳನ್ನೂ, ರಾಜಕೀಯ ದುರುದ್ದೇಶಗಳನ್ನೂ, ಸದನದ ಮೂಲಕವೇ, ಮಹಾಜನತೆಯ ಮನಸ್ಸಿಗೆ ತರುವುದು ಪ್ರತಿಪಕ್ಷಗಳ ಕೆಲಸ. ಆದರೆ ಆದರೆ ಸಂಸತ್ತಿನ ಮುಖ್ಯ ವಿರೋಧ ಪಕ್ಷ, ಬಿಜೆಪಿ, ಈ ಜವಾಬ್ದಾರಿಯಿಂದ, ಅಕ್ಷರಶಃ ಓಡಿಹೋಗುತ್ತಿದೆ.
 ಪಕ್ಷದ ಹಲವಾರು ಮುಖಂಡರ ವೈಯಕ್ತಿಕ ರಾಜಕೀಯ ನಿರಾಸೆಯಿಂದಲೂ ಈ ಬೇಜವಾಬ್ದರಿಕೆ ನಡೆಯುತ್ತಿರಬಹುದು. ಅವರಿಗೆ ಪಕ್ಷದ ಭವಿಷ್ಯದ ಬಗ್ಗೆಯೇ ಕಳಕಳಿ ಇಲ್ಲದಿರಬಹುದು. ಆದರೆ ಕೇವಲ ಮತಾಂಧ ಬಾಲಿಶ ಜನತೆಯಷ್ಟೇ ಅಲ್ಲದೆ, ಪ್ರಜಾಸತ್ತೆಯ ಉಳಿವಿನ ಕಾರಣಕ್ಕಾಗಿಯೂ ಬಿಜೆಪಿಗೆ ಬೆಂಬಲ ಕೋರುವ ವಿವೇಕಶಾಲೀ ಮತದಾರರು ಸಹ ಇನ್ನೂ ಇದ್ದಾರೆಂಬುದನ್ನು ಪಕ್ಷದ ಮುಖಂಡತ್ವ (ಅಂಥದೊಂದು ಇರುವುದಾದರೆ?) ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲಿ.
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet