ನನ್ನ ಪ್ರೀತಿಯ ಹೃದಯ

ನನ್ನ ಪ್ರೀತಿಯ ಹೃದಯ

ಕವನ

ನನ್ನ ಪ್ರೀಯ ಹೃದಯ ಹೂವಾಗಿ ಅರಳಲಿ


ಎಂದೆಂದು ಬಾಡದ ಚೆಲುವಿನತಂದೆ ಅರಳಲಿ


ನನ್ನ ಪ್ರಿತಿಯ ಹೃದಯಕ್ಕೆ ಕಷ್ಟಗಳೆ ಎಂದೆಂದು ಬಾರದಿರಲಿ


ನನಗೆ ಕಷ್ಟಗಳೆಲ್ಲ  ಬರಲಿ  ನಾ ಸಹಿಸಿಕೊಳ್ಳುವೆ ನಾನಿಲ್ಲಿ.


 


ಕನಸ್ಸಿನ ಹೃದಯ ಕನಸಾಗದಿರಲಿ ನನಸಾಗಲಿ


ಮನಸ್ಸಲ್ಲಿ ಮನೆ ಮಾಡಿ ಮನಸ್ಸು ಕೊಟ್ಟುವಳಿಲ್ಲಿ


ಮಿಡಿಯುತ್ತಿದೆ ಪ್ರೀತಿಯ ಹೃದಯ ಪ್ರೀತಿಗಾಗಿ


ಹಗಳಿರುಳೆನ್ನದೆ ಮನಸ್ಸು ಕಾಯುತ್ತಿದೆ ಅವಳ ಪ್ರೀತಿಗಾಗಿ


 


ನನ್ನ ಪ್ರೀತಿಯ ಹೃದಯ ಹೂವಾಗಿ ಅರಳಲಿ


ಪ್ರೀತಿಯ ಹೃದಯಕ್ಕಾಗಿ  , ಹೃದಯದಿಂದಲೆ ಪ್ರೀತಿ


ಹೃದಯದಿಂದಲೆ  ಸುರುವಾಗಿದೆ, ಹೃದಯ ಹೃದಯಗಳ ಪ್ರಿತಿ


ಮನಸ್ಸು ಮಾಡಿ ಕನಸ್ಸು ಕಟ್ಟಿ ಚಿಗುರೊಡೆದು ಕಂಪ ಸುಸ್ಯಾವ.


 


ಓಲವು ತುಂಬಿದೆ ಗೆಳತಿ ಪ್ರೀತಿಯ ಓಲೆಯ ದಿನನಿತ್ಯ ಬರೆಯುತ್ತಾ


ಪ್ರೀತಿಯಲ್ಲಿ ತೇಲಿ ತೇಲಿ ಹಂಬಲಿಸುತ್ತಿದೆಯೆಲ್ಲ ಹೃದಯ ಒಂದಾಗಲಿಲ್ಲಿ


ಯಾರಿಗೂ ಹೇಳದೆ ಕೇಳದೆ ಸುರುವಾಗಿದೆಯೆಲ್ಲ ಈ ಮನಸ್ಸಲ್ಲಿ ಈ ಪ್ರೀತಿ


 ನನ್ನ ಪ್ರೀತಿಯ ಹೃದಯ ಆ ಪ್ರೀತಿಯ ಹೃದಯಕ್ಕಾಗಿ ಕಾಯುತ್ತಿದೆಯಲ್ಲ.


 


                                                                                       - ಹೆಚ್.ವಿರುಪಾಕ್ಷಪ್ಪ ತಾವರಗೊಂದಿ

Comments