ನನ್ನ ಬಸವ ಸಮಿತಿ ಶಾಲೆ ಭಂಕುರ್ ಶಹಾಬಾದ್ ಚಿತ್ತಾಪುರ್, ಗುಲ್ಬರ್ಗ, ಕರ್ನಾಟಕ, ಭಾರತ
ನನ್ನ ಬಸವ ಸಮಿತಿ ಶಾಲೆ ಭಂಕುರ್ ಶಹಾಬಾದ್
ಇದು ಎಲ್ಲ ನನ್ನ ಆಡಳಿತ ಮಂಡಳಿಯವರಿಗೆ,ಗುರುಗಳಿಗೆ ಹಾಗು ನಮ್ಮ ಶಾಲೆಯಲ್ಲಿ ಕಲಿತ ಮತ್ತು ಕಲೆಯಿತ್ತಿರುವ ಸಹಪಾಠಿಗಳಿಗೆ ಅರ್ಪಣೆ
ನಾನು ಕಲಿತ ಶಾಲೆ ಬಸವ ಸಮಿತಿ
ಅಲ್ಲಿ ಎಲ್ಲರು ಇರುತ್ತಿದ್ದರು ಮೀರದೆ ಅವರವರ ಮಿತಿ
ಇರುತ್ತಿರಲ್ಲಿಲ್ಲ ನಮಗೆ ಯಾವುದೇ ಭೇದ ಭಾವದ ರೀತಿ
ಶಾಲೆಯಲ್ಲಿ ಗುರುಗಳು ಹೇಳುತ್ತಿದ್ದರು ನಾವೆಲ್ಲಾ ಒಂದೇ ಜಾತಿ
ಅಲ್ಲಿ ಕಲಿತೆವು ನಾವು ಕೊಡುವದು ಹಿರಿಯರಿಗೆ ಹಾಗು ಕಿರಿಯರಿಗೆ ಒಳೇಯ ಸಂಸ್ಕೃತಿ
ಆಡುತ್ತಿದ್ದೆವು ನಾವು ಆಟ ಮರಕೋತಿ
ಕಮ್ಮಿ ಇರುತ್ತಿರಲಿಲ್ಲ ನಾವು ಯಾವುದೇ ರೀತಿ
ನೋಡು ನೋಡುವಷ್ಟರಲ್ಲಿ ಬಂದೆವು ನಾವು ಹತ್ತನೇಯ ತರಗತಿ
ಆಡಳಿತ ಮಂಡಳಿಯವರ ರೀತಿ ಗುರುಗಳ ಭೀತಿ ನಮ್ಮನ್ನು ಬೆಳೆಸಿತು ಒಳೇಯ ಸಂಸ್ಕ್ರತಿ
ಆ ದಿನ ಬಂದ್ದಿತ್ತು ನಮಗೆ ಕಲಿತ ಶಾಲೆ ಬಿಟ್ಟು ಹೋಗುವ ಸಂಗತಿ
ದಿನವಿಡೀ ಶಾಲೆಯಲ್ಲಿ ಒಂದು ಥರಹದ ಪರಿಸ್ಥಿತಿ
ಆ ದಿನ ಮೀರಿತು ನಮ್ಮೇಲ್ಲರ ಕಣ್ಣೀರಿನ ಮಿತಿ
ಹೊರೆಟೆವು ನಾವು ಶಾಲೆಗೆ,ಆಡಳಿತ ಮಂಡಳಿಯವರಿಗೆ ಮತ್ತು ಗುರುಗಳಿಗೆ ನಮಸ್ಕರಿಸಿ
ನೆನೆದೆವು ಬಾಲ್ಯದ ರೀತಿ ಶುರುವಾಯಿತು ಕಾಲೇಜಿನ ಭೀತಿ
ಕೋನೆಗೆ ಎಲ್ಲರು ಹೇಳಿದೆವು
"ಓ ಬಸವ ಸಮಿತಿ ನಾವು ಮರೆಯುವದಿಲ್ಲ ನೀನು ನಮಗೆ ಕಲಿಸಿ ಕೊಟ್ಟ ರೀತಿ,ನೀತಿ ಹಾಗು ಸಂಸ್ಕೃತಿ ಓ ಬಸವ ಸಮಿತಿ"
ಇಂತಿ ನಿಮ್ಮ ಕಿರು ಕವಿ ಸಿದ್ದರಾಮ ಏನ್. ಕೊರಪಳ್ಳಿ
ಭಂಕುರ್, ಶಹಾಬಾದ್, ಚಿತ್ತಾಪುರ್, ಗುಲ್ಬರ್ಗ, ಕರ್ನಾಟಕ ಭಾರತ
Comments
ಉ: ನನ್ನ ಬಸವ ಸಮಿತಿ ಶಾಲೆ ಭಂಕುರ್ ಶಹಾಬಾದ್ ಚಿತ್ತಾಪುರ್, ಗುಲ್ಬರ್ಗ, ...