ದಿನದ ವಿಶೇಷ.

ದಿನದ ವಿಶೇಷ.

 ದಿನದ ವಿಷೇಶ.

ದಿನದಲ್ಲೇನೋ ಬೇಸರ.ನಿರೀಕ್ಷೆ ಯಾವತ್ತೂ ಮನಸಿಗೆ ನೋವುಂಟು ಮಾಡುತ್ತದೆ. ದಿನಾ ನಾವು ಏನನ್ನು ಮಾಡುತ್ತಾ ಹೋದರೂ ಯಾವುದಾದರೂ ಒಂದು ಎಕ್ಸ್ ಪೆಕ್ಟೇಶನ್ ಇರುತ್ತೆ .ಆದರೆ ನಮ್ಮ ಎಕ್ಸ್ ಪೆಕ್ಟೇಶನ್ ನಂತೆ ಎಲ್ಲವೂ ನಡೆಯುವುದಿಲ್ಲ.ಎಕ್ಸ್ ಪೆಕ್ಟೇಶನ್ ಎಂಬುದು ನಮಗೆ ಎಕ್ಸಪೀರಿಯೆನ್ಸ್ ಆಗಿಬಿಡುತ್ತೆ.ಅದರಿಂದ ಜೀವನದಲ್ಲಿ ಒಂದು ಪಾಠ ಕಲಿತಿರುತ್ತೇವೆ.
ಪರಿಸರ ,ಕೆರೆ, ಪಕ್ಷಿ ಕುರಿತ ಛಾಯಾ ಚಿತ್ರ ಪ್ರದರ್ಶನ.ಫೋಟೋಗಳಿಗೆ 'ಶೀರ್ಷಿಕೆ'  ಬರೆಯಲು ನನಗೂ ಹೇಳಿದಾಗ ಸಂತೋಷóವಾಯ್ತು.ನನ್ನ ಸ್ನೇಹಿತರು ಅದರಲ್ಲೂ ಕವಿಗಳಾದವರು ಒಳ್ಳೆ ಕ್ಯಾಪ್ಶನ್ ಕೊಡ್ತಾರೆ ಅಂತ ಅವರಿಗೆ ಬೇಡಿ ಬರೆಸಿದ್ದು ಆಯ್ತು.
ಮುಂಚಿತವಾಗೇ ತೀರ್ಮಾನಗೊಂಡ ಕಾರ್ಯಕಾರಿ ಸಮಿತಿಯ ಸದಸ್ಯರ ಶೀರ್ಷಿಕೆಗಳೆ ಪ್ರಮುಖ ಫೋಟೋಗಳಿಗೆ ಆಯ್ಕೆಯಾದರೂ,ನಂತರದಅನೇಕ ಚಿತ್ರಗಳಿಗೆ ಉಳಿದವುಗಳನ್ನು ಬಳಸುವರೆಂಬ ಸಮಾಧಾನವಿತ್ತು.ಅವೆಲ್ಲವೂ ಕಸದಬುಟ್ಟಿಗೆ ಎಸೆಯಲ್ಪಟ್ಟಾಗ ಶೀರ್ಷಿಕೆ ಬರೆದವರಿಗೆ ಉತ್ತರಕೊಡುವುದು ಹೇಗೆ?ನಮ್ಮ
ಪ್ರಯತ್ನ,ಸಮಯ,ಉತ್ಸಾಹ ಎಲ್ಲವೂ ವ್ಯರ್ಥ.  ಇದನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡಲು ಸಾಧ್ಯವೆ?ಶೀರ್ಷಿಕೆಗೋಸ್ಕರವಾದರೂ ನಾನು ನನ್ನ ಆಲೋಚನೆಯನ್ನು ವಿಭಿನ್ನವಾಗಿ ಹರಿಬಿಟ್ಟೆ. ಸಮಯವನ್ನು ಸದುಪಯೋಗ ಮಾಡಿದೆ.ಇದರಿಂದ ಕಲಿತೆ?ಇದು ಸಾಧ್ಯ!ಕಷ್ಟ ಸಾಧ್ಯ! ಮೊದಲಿಗೆ ಮನಸ್ಸಿಗೆ ಬೇಸರವಾಗುವುದು ಸಹಜ.ನಂತರದಲ್ಲಿ ನಮ್ಮ ಆಲೋಚನಾ ಸಾಮಥ್ರ್ಯ ಹೆಚ್ಚಿದಂತೆ ಇದೂ ಸರಿ ಎಂಬುದನ್ನು ಒಪ್ಪುತ್ತೇವೆ. ನಮ್ಮ ಯುವ ಪೀಳಿಗೆಯ ಆಸಕ್ತಿಗೆ , ಅವರು ಸತ್ಕಾರ್ಯ ಮಾಡಲು ಹೊರಟಾಗ ಅವರ ಉತ್ಸಾಹಕ್ಕೆ ತಣ್ಣಿರೆರಚುವ ಕೆಲಸ ಬೇಡ.ಇಂದಿನ ಯುವಕರೇ ನಾಳಿನ ಪ್ರಜೆಗಳು.ನಾವು ಹಿಂದೆ ನಿಂತು ಅವರು ಮುಂದಿನಸಾಲಿಗೆ ಬರುವಂಥಹ ಮಾರ್ಗದರ್ಶನ ನೀಡೋಣ.ನಮ್ಮ ನಮ್ಮಲ್ಲೇ ದ್ವೇಷ,ಅಸೂಯೆ, ಕೀಳರಿಮೆ ಬೇಡ.ಆದದ್ದೆಲ್ಲಾ ಒಳಿತೇ ಆಯಿತು ಎಂಬ ದಾಸರವಾಣಿ ನೆನೆಪಿದೆಯಲ್ಲವೇ?
ನಮಗೆಷ್ಡು ಸಲ್ಲಬೇಕೋ ಅಷ್ಟೇ ಸಲ್ಲುವುದು.
ಈಸಬೇಕು,ಇದ್ದು ಜೈಸಬೇಕು.
ಈ ನಿದರ್ಶನ ಈ ಉದಾಹರಣೆ ತಿಳಿಸುತ್ತದೆ - .ಪ್ರತೀ ಹಂತದಲ್ಲೂ ನಮಗೆ ಬ್ರೇಕ್ ಹಾಕುವವರು ಇದ್ದೇ ಇರುತ್ತಾರೆ.ಇದುವೇ ಜೀವನ.
 
Rating
No votes yet

Comments