ದೊಡ್ಡವರ ದಾರಿ

ದೊಡ್ಡವರ ದಾರಿ

ಒಮ್ಮೆ ಬಿಲ್ ಗೇಟ್ಸ್ ಊಟಕೆಂದು ಒಂದು ಸುಪ್ರಸಿದ್ದ ಹೋಟೆಲ್ಲಿಗೆ ಹೋಗಿದ್ದ. ಊಟ ಮುಗಿಸಿದ ನಂತರ ಹಣ ಪಾವತಿಸುವ ಮುನ್ನ ವೆಟೆರಿಗೆ ಐದು ಡಾಲರ್ ಟಿಪ್ಸ್ ಕೊಟ್ಟ. ವೇಟರ್ ಗೇಟ್ಸ್ ನನ್ನು ಆಶ್ಚರ್ಯದಿಂದ ನೋಡಿದ.
ಗೇಟ್ಸ್ ಆತನನ್ನು ನೋಡಿ " ಏಕೆ ? ಹೀಗೆ ಆಶ್ಚರ್ಯದಿಂದ ನೋಡುವೆ ? " ಎಂದು ವಿಚಾರಿಸಿದ.
" ಏನಿಲ್ಲ, ನಿನ್ನೆ ನಿಮ್ಮ ಮಗ ಈ ಹೋಟೆಲ್ಲಿಗೆ ಬಂದಿದ್ದರು. ಅವರೂ ಊಟದ ನಂತರ ನನಗೆ ಐದುನೂರು ಡಾಲರ್ ಟಿಪ್ಸ್ ಕೊಟ್ಟರು. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯ ಮಗನೆ ನನಗೆ ಐದುನೂರು ಡಾಲರ್ ಕೊಟ್ಟಿರಬೇಕಾದರೆ, ಇನ್ನು ಈ ಜಗತ್ತಿನ ಶ್ರೀಮಂತ ವ್ಯಕ್ತಿಯೇ ಇಲ್ಲಿ ಬಂದು ಕೇವಲ ಐದು ಡಾಲರ್ ಟಿಪ್ಸ್ ಕೊಟ್ಟರೆ ಆಶ್ಚರ್ಯವಾಗುವುದಿಲ್ಲವೇ?" ಎಂದು ಸಮಾಧಾನಗಾಗಿ ಹೇಳಿದ.
ಅಷ್ಟೇ ಸಮಾಧಾನವಾಗಿ ಕೇಳಿಸಿಕೊಂಡ ಗೇಟ್ಸ್ " ನನ್ನ ಮಗ ಈ ಜಗತ್ತಿನ ಅತ್ಯಂತ ಶ್ರೀಮಂತನ ಮಗ. ಅವನಿಗೆ ಐದುನೂರು ಡಾಲರ್ ಕೊಡಲು ಆಗುತ್ತದೆ. ಆದರೆ ನಾನು ಒಬ್ಬ ಬಡ ಸೌದೆ ಒಡೆಯುವವನ ಮಗ. ನನ್ನ ಕೈಲಿ ಅಷ್ಟೊಂದು ಟಿಪ್ಸ್ ಕೊಡಲು ಹೇಗೆ ಸಾಧ್ಯ? " ಎಂದು ಉತ್ತರಿಸಿದ.

Comments

Submitted by kavinagaraj Fri, 09/28/2012 - 09:40

ನಾನು ಎಷ್ಟು ಕಷ್ಟಪಟ್ಟೆ ಎಂದು ಮಕ್ಕಳಿಗೆ ಹೇಳ ಹೋದರೆ ಅವರು ಹೇಳುವುದೂ ಈ ರೀತಿಯ ಉತ್ತರವನ್ನೇ!! "ನಿಮ್ಮಪ್ಪನಿಗೆ ಅನುಕೂಲವಿರಲಿಲ್ಲ, ನಮ್ಮಪ್ಪನಿಗೆ ಅನುಕೂಲವಿದೆ" ಅಂತ!! ಧನ್ಯವಾದ, ಪ್ರಕಾಶರೇ.