'ಮುಂಬೈನ ಮೈಸೂರ್ ಅಸೋಸಿಯೇಶನ್, ನಲ್ಲಿ ಗೌರಿ ಗಣೇಶನ ವಿಸರ್ಜನೋತ್ಸವ ಅತ್ಯಂತ ಸಂಭ್ರಮದಿಂದ ಜರುಗಿತು !

'ಮುಂಬೈನ ಮೈಸೂರ್ ಅಸೋಸಿಯೇಶನ್, ನಲ್ಲಿ ಗೌರಿ ಗಣೇಶನ ವಿಸರ್ಜನೋತ್ಸವ ಅತ್ಯಂತ ಸಂಭ್ರಮದಿಂದ ಜರುಗಿತು !

ಒಂದು ವಾರ, ಗೌರಿ ಗಣಪತಿಯ ಪೂಜೆಯ ಬಳಿಕ, ೨೩ ರಂದು, ವಿಸರ್ಜನೆ ಮಾಡಲಾಯಿತು.

My. Assn. Ganesh visarjan, 230912(HP) 015.JPG

My. Assn. Ganesh visarjan, 230912(HP) 017.JPG

My. Assn. Ganesh visarjan, 230912(HP) 016.JPG

ಪ್ರತಿವರ್ಷದ ತರಹ ಈ ವರ್ಷವೂ 'ಮುಂಬೈನ ಮೈಸೂರ್ ಅಸೋಸಿಯೇಷ'ನ್ ನಲ್ಲಿ ''ಗೌರೀ ದೇವಿ ಮತ್ತು ಗಣೇಶನ ಪೂಜೆ ಪುನಸ್ಕಾರಗಳು' ನಡೆದಿದ್ದು, ಇದೇ ೨೦೧೨ ರ, ಸೆಪ್ಟೆಂಬರ್ ೨೩, ರವಿವಾರದಂದು, 'ಗಣಪತಿ ವಿಸರ್ಜನೆ'ಯನ್ನು ಅತ್ಯಂತ ಸಮರ್ಪಕ ಪೂಜಾ ವಿಧಿ ವಿಧಾನಗಳಿಂದ ನೆರವೇರಿಸಲಾಯಿತು. ಅಸೋಸಿಯೇಷನ್ ಸದಸ್ಯರು ಅತಿ ಹೆಚ್ಚು ಸಂಖ್ಯೆಯಲ್ಲಿ ಬಂದು ಭಾಗವಹಿಸಿ 'ಗೌರೀ ದೇವಿ ಮತ್ತು ಗಣೇಶನ ಕೃಪೆಗೆ ಪಾತ್ರರಾದರು'.

ಅಸೋಸಿಯೇಷನ್ ನ ಸದಸ್ಯ ಸದಸ್ಯೆಯರು ಗಣಪತಿಯ ಉತ್ಸವದ ಹಾದಿ ನೋಡುತ್ತಿದ್ದಾರೆ.

 

ಸಮಾರಂಭದಲ್ಲಿ ಹಾಜರಿದ್ದ ಗಣ್ಯರು :

*  ಶ್ರೀಮತಿ/ಶ್ರೀ. ರಾಮಭದ್ರ, (ಅಧ್ಯಕ್ಷರು)

*  ಶ್ರೀಮತಿ/ಶ್ರೀ. ನಾರಾಯಣ ಜಾಗಿರ್ದಾರ್, (ಉಪಾದ್ಯಕ್ಷ)

*  ಶ್ರೀ. ಕೆ. ಮಂಜುನಾಥಯ್ಯ,

*  ಪದ್ಮನಾಥ ಶೆಟ್ಟಿ,

*  ಡಾ. ಮಂಜುನಾಥ್,

*  ಭವಾನಿ,

*  ಶ್ರೀ. ಮಂಜು ದೇವಾಡಿಗ,

*  ಚಿ. ಜ್ಯೋತಿ ದೇವಾಡಿಗ,

*  ಶ್ರೀ. ಮೇದಾರ್, ಹಾಗು ಮತ್ತಿತರರು.

ಮಾಟುಂಗಾದ ಮಹೇಶ್ವರಿ ಉದ್ಯಾನ್ ಬಳಿ ...

My. Assn. Ganesh visarjan, 230912(HP) 025.JPG

ಮೂರ್ತಿಗಳನ್ನು ದಾದರ್ ಚೌಪಾತಿ ಕಡೆ ಕರೆದೊಯ್ಯಲ್ಲಾಗುತ್ತಿದೆ.

My. Assn. Ganesh visarjan, 230912(HP) 019.JPG

ಸನ್, ೨೦೧೨ ರ, ಸೆಪ್ಟೆಂಬರ್, ೨೩, ರವಿವಾರದ ಬಿಳಿಗ್ಯೆ ೧೦ ಗಂಟೆಗೆ ಸರಿಯಾಗಿ 'ಮಾಟುಂಗಾದ ಶಂಕರಮಠದ ಹಿರಿಯ ವಾದಿಯಾರ್' ಗಳಿಂದ, ಗಣಪತಿಗೆ ಮಂತ್ರಘೋಷಗಳ ವಿಧಿನಡೆಯಿತು.

ತದನಂತರ, 'ಶ್ರೀ. ಹನುಮಾನ್ ಶಾಸ್ತ್ರಿಗಳು' ವಿಧಿವತ್ತಾಗಿ ಶ್ರೀ/ಶ್ರೀಮತಿ. ರವಿ ದಂಪತಿಗಳಿಂದ 'ಗೌರೀ ದೇವಿ ಮತ್ತು ಗಣೇಶನ ಪೂಜೆ' ಮಾಡಿಸಿದರು. ಅನೇಕ ಸದಸ್ಯರು ಸುಶ್ರಾವ್ಯವಾಗಿ ದೇವರ ನಾಮಗಳನ್ನು ಹಾಡಿ ದೇವರನ್ನು ಸ್ತುತಿಸಿದರು. ಅಸೋಸಿಯೇಷನ್ ನ ಯುವ ಕಲಾವಿದ, ಶ್ರೀ. 'ಪದ್ಮನಾಭ ಶೆಟ್ಟಿ'ಯವರ ಗೀತೆ ತುಂಬಾ ಮುದಕೊಟ್ಟಿತು. ಹಾಗೆಯೇ, ಪುಟ್ಟ ಮಕ್ಕಳು ಸಹಿತ ತಮಗೆ ಬಂದ ದೇವರ ಸ್ತುತಿಗಳನ್ನು ಪ್ರಸ್ತುತಪಡಿಸಿದರು.

'ಶ್ರೀಮತಿ. ಶ್ಯಾಮಲಾರಾಧೇಶ್ ', ಸುಂದರ ಗೀತೆಗಳನ್ನು ಪ್ರಸ್ತುತಪಡಿಸಿದರು. 'ಡಾ ಮಂಜುನಾಥ್', ಹಾಡಿದ,  ನಮ್ಮೆಲ್ಲರ ಅತ್ಯಂತ ಪ್ರಿಯ ಗೀತೆ,

'ಅವ್ವನಿನ್ನ ಮೊಗ ಚೆಂದ, ಮೊಗ್ಗಿನ ಜಡೆ ಚೆಂದ.. ದೊಂದಿಗೆ ಪೂಜೆ ಮುಕ್ತಾಯವಾಯಿತು.

ಇದಲ್ಲದೆ ಗಣೇಶನನ್ನು ವಿಸರ್ಜನೆಗಾಗಿ ಕೊಂಡೊಯ್ಯುವ ಉತ್ಸವದಲ್ಲಿ ದಾರಿಯುದ್ದಕ್ಕೂ ಅತ್ಯುತ್ತಮ ಕನ್ನಡದ ಪಾರಂಪಾರಿಕ ಗೀತೆಗಳನ್ನು ಮಂಜುನಾಥ್ ಹಾಡಿದರು. 'ಶ್ರೀ. ಜನಾರ್ಧನ್' ರವರ, 'ಗಣಪತಿ ಬಪ್ಪ ಮೋರ್ಯಾ, ಪುಡ್ಚ್ಯಾ ವರ್ಷಿ ಲುಕರ್ ಯಾ,' ಎನ್ನುವ  ಮೇರುದನಿಯ 'ನಾರ' ಎಲ್ಲರನ್ನು ಹುರಿದುಮ್ಬಿಸುತ್ತಿತ್ತು !