ಇದೀಗ ಇವರು ನೈಜ ಶ್ರೀಚರಣರಾದಾರು

ಇದೀಗ ಇವರು ನೈಜ ಶ್ರೀಚರಣರಾದಾರು

Comments

Submitted by partha1059 Tue, 09/25/2012 - 14:43

ಅದುವೆ ಭಾರತದ ಆತ್ಮಶಕ್ತಿ , ಇಲ್ಲಿ ಯಾವಾಗಲು ಹಾಗೆಯೆ ಯುದ್ದಭೂಮಿಯ ನಡೆವೆ ಅರ್ಜುನನ ಎದೆಯಲ್ಲಿ ವೈರಾಗ್ಯ ಹುಟ್ಟುತ್ತದೆ , ಯುದ್ದವನ್ನು ಗೆದ್ದ ಯುದ್ದಭೂಮಿಯ ನಡೆವೆ ಅಶೋಕನೆಂಬ ರಾಜನು ಹುಟ್ಟುತ್ತಾನೆ, ಗೆಲುವಿನ ಉತ್ತುಂಗದ ಅನುಭವದಲ್ಲಿರುವಾಗಲೆ ವೈರಾಗ್ಯ ಧರಿಸುವ ಬಾಹುಬಲಿ (ಗೋಮಟೇಶ್ವರರು) ಗಳು ಹುಟ್ಟುತ್ತಾರೆ , ಧರ್ಮಭೂಮಿಯೊ ಕರ್ಮಭೂಮಿಯೊ ಇಲ್ಲಿ ಸದಾ ಜನಮನ ತಿದ್ದಲು ಮಾದರಿಯೊಂದು ಹುಟ್ಟುತ್ತಲೆ ಇರುತ್ತದೆ ಆದರು ಸಮಾಜ ಹಾಗೆಯೆ ಮುಂದುವರೆಯುತ್ತ ಇರುತ್ತದೆ (((:

Submitted by ಆರ್ ಕೆ ದಿವಾಕರ Tue, 09/25/2012 - 17:48

ಶರಣರು ಮುಂದೇನು ಮಾಡುತ್ತಾರೆನ್ನುವುದರ ಮೇಲೆ ಸಾತ್ವಿಕರ ಭರವಸೆ ನಿಂತಿದೆ.

Submitted by ಆರ್ ಕೆ ದಿವಾಕರ Thu, 09/27/2012 - 10:59

ಅಂತಹ ಗುರು ಅಕಸ್ಮಾತ್ ಸಿಕ್ಕಿದರೆ, ಅಂಟದ ವೈರಾಗ್ಯ Confirm ಆದರೆ ಅವರಿಂದ ಮಾರ್ಗದರ್ಶನ ಪಡೆಯಲು, ಆಣತಿ ಪಾಲಿಸಲು ಸಂಪನ್ನ ಶಿಷ್ಯವರ್ಗ (ಅದು ಬೆರಳೆಣಿಕೆ ಸಂಖ್ಯೆಯದೇ ಅದರೂ) ಸಜ್ಜಾಗಬೆಕಲ್ಲವೇ? ಅಂತಹ ನೈತಿಕ ಧೈರ್ಯ ಗುರುವಿಗಾಗಲೀ, ಶಿಷ್ಯಗಣಕ್ಕಾಗಲೀ ನಿಜವಾಗಿ ಇರಬಹುದೇ?

Submitted by Prakash Narasimhaiya Fri, 09/28/2012 - 10:42

In reply to by ಆರ್ ಕೆ ದಿವಾಕರ

ಆತ್ಮೀಯ ದಿವಾಕರ,
ಅಂತಹ ನೈತಿಕ ದೈರ್ಯ ಖಂಡಿತಾ ಇಬ್ಬರಲ್ಲೂ ಇದೆ. ಅಂತಹ ಗುರು ಶಿಷ್ಯರು ಬೆಳಕಿಗೆ ಬರುವುದು ಕಡಿಮೆ.
ಪ್ರಕಾಶ್

ಬರಹ

ಇತ್ತೀಚಿನ ದಿನಗಳಲ್ಲಿ ಹದಗೆಟ್ಟು, ಹೊಲಸುಗೊಂಡಿರು ’ಮಠ ವ್ಯವಸ್ಥೆ’ಯಲ್ಲಿದ್ದುಕೊಂಡೂ ಗೌರವಾನ್ವಿರಾಗಿರುವ ತರಳಬಾಳು ಶಿವಾಚಾರ‍್ಯ ಸ್ವಾಮಿಗಳು, ಏಕಾಏಕೀ ಪೀಠತ್ಯಾಗದ ಮಾತನಾಡಿದ್ದಾರೆ; ಕಪಟ ರಾಜಕಾರಣಿಗಳು ಈ ಬಗ್ಗೆ ಕೃತಕ ಕಣ್ಣೀರನ್ನೂ ಸುರಿಸಿದರಂತೆ.
ಕಪಟ-ಕೃತಕಗಳಿಂದ ಮುಕ್ತಿ ಬಯಸಿಯೇ ಶ್ರೀಗಳು, ಮಠವೆಂಬ ಭ್ರಷ್ಟ ವ್ಯವಸ್ಥೆಯಿಂದ ನಿಜ ವಿರಕ್ತಿ ತಳೆದಿದ್ದರಂತೂ, ಅದು ಅಲ್ಪಸಂಖ್ಯ ಸಜ್ಜನವರ್ಗದ ಅದೃಷ್ಟವೇ ಸರಿ. ಅಂಥವವರಿಗೆ, ಸಿರಿಗೆರೆ ಶರಣರು, ’ಪೃಥ್ವಿಯಂತಹ ಭಕ್ತ; ಉದಕದಂತಹ ಮಾಹೇಶ್ವರ; ಅಗ್ನಿಯಂತಹ ಪ್ರಸಾದಿ, ವಾಯುವಿನಂತಹ ಪ್ರಾಣಲಿಂಗಿ; ಅಕಾಶದಂತಹ ಶರಣ; ಚಂದ್ರನಂತಹ ನೇಮಸ್ಥ; ಸೂರ‍್ಯನಂತಹ ಅನುಭಾವಿ; ಆತ್ಮನಂತಹ ಐಕ್ಯ ಸ್ಥಲಗಳನ್ನು, ಸ್ವ-ದೃಷ್ಟಾಂತದಿಂದ ತೋರಿಕೊಟ್ಟರೆ, ಮನುಷ್ಯ ಸಮಾಜ ಧನ್ಯವಾದೀತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet