ಸರ್ವರ್ ಡೌನು

ಸರ್ವರ್ ಡೌನು

ನಾನರಿಯೆನು ಇಂದೇಕೋ ಆಯಿತು ಈ ಸರ್ವರ್ ಡೌನು
ಏಕಾಯಿತೋ ಮುಂದು ಮುಂಜಾವಿನಲಿ ಈ ಪವರು ಕಟ್ಟು
ಈ ಮೆಮೊರಿಯ ಇಂದೇಕೋ ತುಂಬಿತು ಕೆಡು ಕೆಟ್ಟ ವೈರಸು
ಹಾರ್ಡು ದಿಸ್ಕನ್ನು ಫಾರ್ಮ್ಯಾಟೇಕೆ ಮಾಡಿಸಿತು, ಮತಿಯನ್ನು ಏತಕೆ ಕೆಡಿಸಿಬಿಟ್ಟಿತು

ಸುಡುವಂಥ ನೆನಪುಗಳೂ, ಬಾಡಿಬಿಟ್ಟ ಕನಸುಗಳೂ
ಇರುಳ ಕನವರಿಕೆಗಳೂ, ಕರಟಿದೆಲ್ಲಾ ಬಯಕೆಗಳೂ
ಇನ್ನಿಲ್ಲದೆ ಮತ್ತೊಮ್ಮೆ ಕಾಡಿರಲು ಒಳಗಣ ಬ್ಯಾಟರಿ ಏಕೋ ವೀಕಾಯಿತು

ನಾನರಿಯೆನು ಇಂದೇಕೋ ಆಯಿತು ಈ ಸರ್ವರ್ ಡೌನು
ಏಕಾಯಿತೋ ಮುಂದು ಮುಂಜಾವಿನಲಿ ಈ ಪವರು ಕಟ್ಟು
ಈ ಮೆಮೊರಿಯ ಇಂದೇಕೋ ತುಂಬಿತು ಕೆಡು ಕೆಟ್ಟ ವೈರಸು
ಹಾರ್ಡು ದಿಸ್ಕನ್ನು ಫಾರ್ಮ್ಯಾಟೇಕೆ ಮಾಡಿಸಿತು, ಮತಿಯನ್ನು ಏತಕೆ ಕೆಡಿಸಿಬಿಟ್ಟಿತು

ಆದರೂ
ನಾನರಿಯೆನು ನಿನ್ನೆ ಮೊನ್ನೆಯಿಂದಲೇ ಏತಕೋ ಎಲ್ಲವೂ ಬದಲಾಯಿತು
ಏಕಾಯಿತೋ ಮುಂದು ಮುಂಜಾವಿನಲಿ ಈ ಭಾವಪಲ್ಲಟ

ಸೊಗಸಾದ ನೆನಕೆಗಳೂ, ಚಿಗಿತ ಹೊಂಗನಸುಗಳೂ
ತುದಿಗಣ್ಣ ನೋಟಗಳೂ, ನನೆದ ನಲ್ಬಯಕೆಗಳೂ
ಎಡೆ ಬಿಡದಲೇ ಮತ್ತೊಮ್ಮೆ ಮೂಡಿರಲು ಒಳಗಣ ಬ್ಯಾಟರಿ ಚಾರ್ಜ್ ಆಯಿತು

ನಾನರಿಯೆನು ನಿನ್ನೆ ಮೊನ್ನೆಯಿಂದಲೇ ಏತಕೋ ಎಲ್ಲವೂ ಬದಲಾಯಿತು
ಏಕಾಯಿತೋ ಮುಂದು ಮುಂಜಾವಿನಲಿ ಈ ಭಾವಪಲ್ಲಟ
ನಾನರಿಯದೆ ಒಮ್ಮೆಗೇ ಹೇಗೋ ಸರ್ವರು ಮತ್ತೊಮ್ಮೆ ಆನಾಯಿತು
ಹೇಗಾಯಿತೋ ಮುಂದು ಮುಂಜಾವಿನಲಿ ಯುಪಿಎಸ್ಸು ಬ್ಯಾಕಪ್

ಹೀಗೇತಕೋ
ನಾನರಿಯೆನು ನಿನ್ನೆ ಮೊನ್ನೆಯಿಂದಲೇ ಏತಕೋ ಎಲ್ಲವೂ ಬದಲಾಯಿತು
ಏಕಾಯಿತೋ ಮುಂದು ಮುಂಜಾವಿನಲಿ ಈ ಭಾವಪಲ್ಲಟ

-------
ಕವಿತೆಯಲ್ಲ ಹಾಡುಗಬ್ಬವಿದು;
ಪಂಡಿತನು ನಾನಲ್ಲ ಪಾಂಡಿತ್ಯದ ಹಂಗೆನಗಿಲ್ಲ,
ವಿನಾಕಾರಣ ವ್ಯಾಕಾರಣ ದೋಷಗಳ ಹುಡುಕುವವರಿಂದೆನ್ನ ಕಾಪಾಡು ತಂದೆಯೇ!

Rating
No votes yet

Comments

Submitted by ಗಣೇಶ Tue, 09/25/2012 - 23:35

ಸಂಪದ ನಿರ್ವಾಹಕರ ಸೂಚನೆ ಏನೋ ಇರಬಹುದು ಎಂದು ಕ್ಲಿಕ್ ಮಾಡಿದೆ! ಕವನ ಚೆನ್ನಾಗಿದೆ. ಕೊನೆಯಲ್ಲಿ ಶಿಷ್ಯನ "ವ್ಯಾಕಾರಣ" ಪದವನ್ನೇ ಉಪಯೋಗಿಸಿದ್ದೀರಿ :)

Submitted by makara Wed, 09/26/2012 - 07:05

ಹೋಗಲಿ ಬಿಡಿ ನಿಮ್ಮ‌ ಮೂಡು ಡೌನಾಗಿ ಮತ್ತೆ ರೀಚಾರ್ಜು ಆದ0ತೆ ಮತ್ತೆ ನಮ್ಮ‌ ಮೂಡೂ ಈ ಕವನ‌ ಓದಿ ರೀಚಾರ್ಜು ಆಯಿತು.
ಪ0ಚ್
ವ್ಯಾಕರಣ‌ ದೋಷಗಳನ್ನು ವಿನಾಕಾರಣ‌ ಹುಡುಕುವವರಿ0ದ‌ ನನ್ನನ್ನು ಕಾಪಾಡು ಎ0ದಿದ್ದೀರ‌.., ಅದು ಕೆಲವೊ0ದು ಸ್ಥಳಗಳಲ್ಲಿ
ಇಲ್ಲಿ ಮೂತ್ರ‌ ವಿಸರ್ಜನೆ ಮಾಡಬೇಡಿ ಎ0ದು ಬರೆದು ಅದನ್ನು ಮಾಡುವವರಿಗೆ ಅದನ್ನು ನೆನಪು ಮಾಡಿಕೊಟ್ಟ0ತೆ ಆಯಿತು :))

Submitted by ksraghavendranavada Wed, 09/26/2012 - 09:27

ಹಹಹ... ಸಕ್ಕತ್.. ಕೃಷ್ಣಪ್ರಕಾಶರೇ...
ಸರ್ವರ್ ಡೌನಾಗಿ.. ಬ್ಯಾಟರಿ ಫೇಲಾಗಿ ರೀಚಾರ್ಜೂ ಆಯಿತು! ಅದಕ್ಕೆ ಕೊನೆಯಲ್ಲಿ ಎಚ್ಚರಿಕೆ ಆಗಿದ್ದು!!
ಚೆನ್ನಾಗಿದೆ..
ಆಫ್..ಆನ್..ಆಫ್..ಆನ್..ಆನ್...
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

Submitted by Chikku123 Wed, 09/26/2012 - 11:44

:) :)

Submitted by venkatb83 Wed, 09/26/2012 - 17:52

"ಕವಿತೆಯಲ್ಲ ಹಾಡುಗಬ್ಬವಿದು;
ಪಂಡಿತನು ನಾನಲ್ಲ ಪಾಂಡಿತ್ಯದ ಹಂಗೆನಗಿಲ್ಲ,
ವಿನಾಕಾರಣ ವ್ಯಾಕಾರಣ ದೋಷಗಳ ಹುಡುಕುವವರಿಂದೆನ್ನ ಕಾಪಾಡು ತಂದೆಯೇ!"

ವಿಮರ್ಶಕರು ಅವರ ಹಂಗೇಕೆ? ಪದ್ಯ ಗದ್ಯ ಎಂದರೂ ಸರಿಯೇ
ಒಟ್ನಲ್ಲಿ ಸಖತ್ ಆಗಿದೆ...
ಸದ್ಯದ ಕಾಲಕ್ಕನುಗುಣವಾಗಿ ಮತ್ತು ಸಂಪದ ನಿರ್ವಹಣೆಯ ಈ ಸಮಯದಲ್ಲಿ ನಿಮ್ಮ ಶೀರ್ಷಿಕೆ ನನಗೆ ಎಲ್ರಂತೆ ಇದು ಆ ಕುರಿತೇ ಇರ್ಬೇಕು ಅನ್ಸಿತು..!

ನನ್ನಿ

ಶುಭವಾಗಲಿ

\|

Submitted by kpbolumbu Fri, 09/28/2012 - 16:52

ಧನ್ಯವಾದಗಳು ಭಲ್ಲೆ, ಗಣೇಶ್, ಮಕರ, ನಾವಡರು, ಚಿಕ್ಕು ಮತ್ತು ವೆಂಕಟ್.

ಗಣೇಶ್,
ತಮ್ಮ ಪದವನ್ನು ಉಪಯೋಗಿಸಿದ್ದಾದ ಮೇಲೆ ಯಾರು ಗುರು, ಯಾರು ಶಿಷ್ಯನೆಂಬ ಅನುಮಾನವಂತೂ ಇದೆ.