ಮಾಯಾ ಭ್ರಮೆ (ಶ್ರೀ ನರಸಿಂಹ 49)

ಮಾಯಾ ಭ್ರಮೆ (ಶ್ರೀ ನರಸಿಂಹ 49)

 


ಭೂಮಿಗಳತೆ ಮಾಡಿ ನನ್ನದಿದೆಂದು ಪತ್ರವನು ಬರೆಸಿ


ಅದಕೊಡೆಯ ನಾನೆಂದು ಮೆರೆಯುತಲಿ ಸಂಭ್ರಮಿಸಿ


ಹಣವೆನುತ ಲೋಹ,ಕಾಗದದ ಮೇಲೆ ಚಿತ್ತಾರ ಬಿಡಿಸಿ


ಕೂಡಿಡುತಲಿಹೆವದನು ಸುಖ ಪಡೆವೆವೆಂದು ಭ್ರಮಿಸಿ


 


ನಿನ್ನದಲ್ಲದ ಎಲ್ಲವನು ಉಪಯೋಗಿಸುತಿರುವೆ ನೀನಿಲ್ಲಿ


ನಿನ್ನಂತೆ  ಬಂದಿಹರಿಲ್ಲಿ ಪರರೆಂಬುವ ಅರಿವಿರಲಿ ನಿನ್ನಲ್ಲಿ


ತಿಳಿ ನೀನು ನೀನಿರುವ ಈ ದೇಹವಿದು ಕೂಡ ನಿನದಲ್ಲ


ನಾನು,ನನದೆನ್ನದಿರು ದೇವನದು ಈ ಜಗದಲಿಹುದೆಲ್ಲ


 


ಭ್ರಮೆಗೊಳಗಾಗಿಹುದು ಮನವು ದೇವನ ಮಾಯಾ ಲೀಲೆಯಿಂದ


ನಂಬು  ಶ್ರೀ ನರಸಿಂಹನನು ಬಿಡಿಸುವನು ಮಾಯಾ ಭ್ರಮೆಯಿಂದ

Rating
No votes yet

Comments

Submitted by ಗಣೇಶ Tue, 09/25/2012 - 23:30

ಸತೀಶ್,
ಕವನ ಚೆನ್ನಾಗಿದೆ.
ನಿನ್ನೆಯವರೆಗೆ ಯಾರದೋ..ಒಪ್ಪಿದೆ;
ನಾಳೆಯಾರದೋ..ಅದೂ ಒಪ್ಪುವೆ;
ಇಂದು ಮಾತ್ರ ಅದು ನನ್ನದೇ..:)

Submitted by sathishnasa Wed, 09/26/2012 - 11:13

In reply to by ಗಣೇಶ

ಧನ್ಯವಾದಗಳು ಗಣೇಶ್ ರವರೇ
>> ಇಂದು ಮಾತ್ರ ಅದು ನನ್ನದೇ..:)<< ಖಂಡಿತ ನಿಜ ಆದರೆ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕಷ್ಟೆ
...ಸತೀಶ್

Submitted by sathishnasa Wed, 09/26/2012 - 11:17

In reply to by sathishnasa

ಧನ್ಯವಾದಗಳು ಗಣೇಶ್ ರವರೇ
>> ಇಂದು ಮಾತ್ರ ಅದು ನನ್ನದೇ..:) ಖಂಡಿತ ನಿಜ ಆದರೆ ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕಷ್ಟೆ
ಮೇಲಿನ ಪ್ರತಿಕ್ರಿಯೆಯಲ್ಲಿ ಪೂರ್ಣವಾಗಿ ಪದಗಳು ಬಂದಿಲ್ಲ ಅದಕ್ಕೆ ಮತ್ತೊಮ್ಮೆ ಪ್ರತಿಕ್ರಿಯೆ ಸೇರಿಸಿದೆ
...ಸತೀಶ್

Submitted by venkatb83 Wed, 09/26/2012 - 18:07

"ಭೂಮಿಗಳತೆ ಮಾಡಿ ನನ್ನದಿದೆಂದು ಪತ್ರವನು ಬರೆಸಿ

ಅದಕೊಡೆಯ ನಾನೆಂದು ಮೆರೆಯುತಲಿ ಸಂಭ್ರಮಿಸಿ

ಹಣವೆನುತ ಲೋಹ,ಕಾಗದದ ಮೇಲೆ ಚಿತ್ತಾರ ಬಿಡಿಸಿ

ಕೂಡಿಡುತಲಿಹೆವದನು ಸುಖ ಪಡೆವೆವೆಂದು ಭ್ರಮಿಸಿ"

>>ನನ್ ಹೆಸರಲಿ ಯಾವ್ ಭೂಮಿಯೂ ಇಲ್ಲ...
ಅಸ್ತಿ ಪತ್ರ ಇಲ್ಲ...!!!

ಹೀಗೆ ಹೇಳಿದ್ದು 'ಅವರು' ಅಲ್ಲ 'ಇವರೂ' ಅಲ್ಲ...

ನಾನೇ ..!!

ಸತೀಶ್ ಅವ್ರೆ ಅತ್ಯುತ್ತಮ ಅಪರಿಮಿತರ್ಥದ ಬರಹ...
ನಿಜ ನಾ ನನ್ನದು ಎಂದು ನಾವ್ ಹೇಳುವುದು ಎಷ್ಟು ಹಾಸ್ಯಾಸ್ಪದ ಅನ್ನಿಸುತ್ತಿದೆ...
ಎಲ್ಲವೂ ಅವನಿಗೆ ಸೇರಿದ್ದು ಅದನ್ನ ಅನುಭವಿಸೋದು ಅಸ್ತೆ ನಮಗೆ ಸೇರಿದ್ದು-ಅದೂ ಅವನು ಕರುಣಿಸಿದರೆ ಅನುಗ್ರಹಿಸಿದರೆ...

ಶುಭವಾಗಲಿ..

ನನ್ನಿ

\|

Submitted by Prakash Narasimhaiya Wed, 09/26/2012 - 22:03

In reply to by venkatb83

ಆತ್ಮೀಯ ಸತಿಶರೆ,
ಹಾಲ ಕಾಯಿಸಿ ಹೆಪ್ಪನಿಕ್ಕಿ ಕದೆಡೋದೇ , ಮೊದಲು ಮೇಲೆ ಕಾಣದ ಬೆಣ್ಣೆ ತೇಲಿಬರುವಂತೆ, ಬಾಳನೀ ಜಗದ ಮಂತುವು ಕಡೆಯಲಿ ಎಳುವುದು ಆಳದಿಂದ ಆತ್ಮ ಮತಿ ..............ಮಂಕುತಿಮ್ಮ.
ಭ್ರಮೆ ಕಳೆಯುವತನಕ ಕಡೆಯಲೇ ಬೇಕು ........
ಉತ್ತಮ ಬರಹ, ಧನ್ಯವಾದ.

Submitted by kavinagaraj Thu, 09/27/2012 - 16:38

ಸತೀಶರೇ, ನಿಮ್ಮ ವಿಚಾರಘಳಲ್ಲಿ ಸಮಾನ ಮನಸ್ಕತೆ ಕಾಣುತ್ತಿರುವೆ. ಧನ್ಯವಾದಗಳು.
ಅವಕಾಶವಾದರೆ ಹಾಸನದ 30ರ ಭಾನುವಾರದ ಕಾರ್ಯಕ್ರಮಕ್ಕೆ ಬನ್ನಿ.

Submitted by sathishnasa Fri, 09/28/2012 - 10:22

In reply to by kavinagaraj

ನಿಮ್ಮ ಹೃದಯ ಸ್ಪರ್ಶಿ ಪ್ರತಿಕ್ರಿಯೆಗೆ ಹಾಗೂ ನಿಮ್ಮ ಅಹ್ವಾನಕ್ಕೆ ಧನ್ಯವಾದಗಳು ನಾಗರಾಜ್ ರವರೇ ಖಂಡಿತ ಕಾರ್ಯಕ್ರಮಕ್ಕೆ ಬರಲು ಪ್ರಯತ್ನಿಸುತ್ತೇನೆ
...ಸತೀಶ್