ಮೂಢ ಉವಾಚ - 164

ಮೂಢ ಉವಾಚ - 164

 

ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ
ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ |
ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ
ಮಾಯಾ ಶಕ್ತಿಗೆದುರುಂಟೆ ಮೂಢ || ..327
 
ನಿದ್ದೆಯಿಂದೆದ್ದೊಡನೆ ನಾನು ಜನಿಸುವುದು
ಒಂದಿದ್ದು ಎರಡಾಗಿ ಮೂರಾಗಿ ಕಾಣುವುದು |
ದೇಹವೇ ನಾನೆನಿಸಿ ಭೇದ ಮೆರೆಯುವುದು
ಮಾಯಾ ಮೋಹಿನಿಗೆ ಶರಣು ಮೂಢ || ..328
****************
-ಕ.ವೆಂ.ನಾಗರಾಜ್.
 
Rating
No votes yet

Comments

Submitted by Prakash Narasimhaiya Wed, 09/26/2012 - 21:42

ಆತ್ಮೀಯ ನಾಗರಾಜರೆ,
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ? ನೀ ದೇಹದೊಳಗೊ ನಿನ್ನೊಳು ದೇಹವೊ ? ಎಂದು ಕನಕದಾಸರು ಕೇಳಿದರೆ, ನೀನು ಯಾರು? ಎಂಬುದನ್ನು ಹುಡುಕು ಎನ್ನುತ್ತಾರೆ ಮಹರ್ಷಿ ರಮಣರು. ನಿದ್ದೆಗೆ ಜಾರಿದೊಡನೆ ನಾನು ನನದೆಂಬ ಮಮಕಾರಗಳಿಲ್ಲ, ಎದ್ದ ಘಳಿಗೆ ನಾನು ಎಂಬುದರ ಉದಯ!!!
ಉತ್ತಮ ಉವಾಚ.

Submitted by sathishnasa Thu, 09/27/2012 - 10:39

ನಿಜವಾದ ಜ್ಞಾನ ಬರುವುದು ಗಾಡವಾದ ನಿದ್ದೆಯಲ್ಲೆ ಯಾಕೆಂದರೆ ಆಗ ಯಾವುದೇ ಮನೋವಿಕಾರಗಳು ಇರುವುದಿಲ್ಲ ಮನಸ್ಸು ಆತ್ಮನಲ್ಲಿ ಲಯವಾಗಿರುತ್ತದೆ ಎಚ್ಚರಗೊಂಡ ತಕ್ಷಣ ಮಾಯೆಗೊಳಗಾಗುತ್ತದೆ ಒಳ್ಳೆಯ ಉವಾಚ ನಾಗರಾಜ್ ರವರೇ.
....ಸತೀಶ್