ಪ್ರೇಮಿಸುವುದೇಕೆ ನೀ ಅವಳ

Submitted by modmani on Fri, 09/28/2012 - 17:36

ಪ್ರೇಮಿಸುವುದೇಕೆ ನೀ ಅವಳ
ಎಂದು ಕೇಳುವವರಿದ್ದಾರೆ ಬಹಳ.

ಅವಳ ಸೊಂಟದ ಕುಲುಕು
ತುಂಬು ತೊಡೆಗಳ ಬಿಗಿಪು
ಹವಳ ತುಟಿಗಳ ಥಳುಕು
ದುಂಬಿ ಕಂಗಳ ಬೆಳಕು
ಚರ್ಮದೊಗಲಿನ ನುಣುಪು
ಕೇಶರಾಶಿಯ ಹೊಳಪು
ನಡಿಗೆಯಲ್ಲಿನ ಬಳುಕು
ಮಾತಿನೊಳಗಿನ ಮಿದುಪು
ಪ್ರೇಮಧಾರೆಯ ಹುರುಪು

ನನ್ನೆದೆಯಲಿ ಅನುರಾಗ ಮಿಡಿಸುವುದು
ಅನುದಿನವು ಪ್ರೀತಿಯನು ಸುರಿಸುವುದು

ಎಂದಷ್ಟೇ ಹೇಳುವೆನು ನಾನು.


ಜಸ್ಟಿನ್ ಹಚಿನ್ಸ್ ರ ಕವನದ ಭಾವಾನುವಾದ.   ಮೂಲ ಕೆಳಗಿನಂತಿದೆIf asked why I love her I would say,
It’s the sway in her hips,
the thickness in her thighs.
It’s the lust in her lips,
the love in her eyes.
It’s the softness of her skin,
the silk in her hair.
It’s the twist in her walk;
it’s the sweetness in her talk.
It’s the way she loves me,
that makes me love her each day.
That is what I would say. 

Rating
No votes yet