ವೇಷಗಾರರು..

ವೇಷಗಾರರು..

ಕವನ

ನೂರು ಬಣ್ಣಗಳು
ಮಾರು ವೇಷಗಳು
ತುತ್ತು ಅನ್ನಕ್ಕೆ ಹುಟ್ಟಿಕೊ0ಡ
ಹಲವು ದಾರಿಗಳು.
ಸುಮ್ಮನಿರದ ಬಾಯಿ0ದ ಉದ್ಘೋಷಗಳು.

ದಿನ ಒ0ದು;
ಅಗೋ ಅಲ್ಲೊಬ್ಬ ರಾಮ
ಬಿಲ್ಲುಗಾರ ಮಹಾಚತುರ
ವೀರ ಶೂರ ಹಮ್ಮೀರ

ನಯನ ಚ0ದ್ರಹಾರ.

ಇಗೋ ಇಲ್ಲೊಬ್ಬ ಹನುಮ
ದೂರ ದೂರ ಜಿಗಿಯುವ ಕರ್ಮ
ಸದಾ ರಾಮ ನಾಮ
ಮನಸು ರಾಮ ರಾಮ ಪರ0ಧಾಮ.

ಸುಕೋಮಲ ಸಿರಿ ಸೀತೆ
ಜಗನ್ಮಾತೆ ಪತಿವ್ರತೆ
ವನವಾಸ ಜೀವಿತೆ
ರಾಮ ಪ್ರೀತಿ ಮುಕ್ತೆ.

ದಿನ ಎರಡು;
ಜಟಾಧಾರಿ
ಋಷಿ ಮುನಿಗಳ ಅವತಾರಿ
ಒ0ದು ಕೈಯಲ್ಲಿ ಕಮ0ಡಲ
ಆಶೀರ್ವದಿಸುವುದಕ್ಕೆ.
ಇನ್ನೊ0ದರಲ್ಲಿ ತೀರ್ಥಪಾತ್ರೆ
ಕ0ಡವರ ಮೇಲೆ ಎರಚಿ ಶಪಿಸುವುದಕ್ಕೆ.

ದಿನ ಮೂರು:
ಕೃಷ್ಣ ರುಕ್ಮಿಣಿ ಸತ್ಯಭಾಮೆ
ಗೋಪಾಲ ಸ್ತ್ರೀಲೋಲ
ಮನಸು ನ0ದಗೋಕುಲ
ಬಿದಿರ ಕೊಳಲ ಸ0ಗೀತವಣ್ಣ
ಸುದರ್ಶನ ಚಕ್ರ ಬ0ಗಾರ ಬಣ್ಣ.

ಬಣ್ಣದ ಬದುಕಿಗಾಗಿ
ಅಲೆಮಾರಿಗಳಾಗಿ
ಪರಕಾಯ‌ ಪ್ರವೇಶಿಸಿ, ನಟಿಸಿ
ಮಾಡಿದರೆ
ಮಹಾಪುರುಷರ‌ ಬಣ್ಣನೆ
ಊರ‌ ಜನಕೆ ರ0ಜನೆ
ಹೊಟ್ಟೆ ಹೊರೆಯುವ‌ ಸಾಧನೆ.