ನಯಾಗರ-ಒಂದು ಮರೆಯಲಾರದ ಸುಂದರ ಕನಸು !
'ನಯಾಗರ' ವಿಶ್ವದ ಅದ್ಭುತಗಳಲ್ಲೊಂದು ಎಂದು ಬಹಳ ಹಿಂದೆಯೇ ದಾಖಲಾಗಿದೆ. ನಾವು ೨೦೧೨ ರ ಜೂನ್, ೧೭ ರಂದು ಅಲ್ಲಿಗೆ ಹೋದಾಗ ಅದು ಇಂದಿಗೂ ತನ್ನ ಅನುಪಮ ಸೊಬಗನ್ನು ಕಳೆದುಕೊಂಡಿಲ್ಲ. ಇಂದಿಗೂ ಅತಿ ಹೆಚ್ಚು ಪರ್ಯಟಕರನ್ನು ಆಕರ್ಷಿಸುತ್ತಿದೆ ! ಮತ್ತೊಮ್ಮೆ, ಮಗದೊಮ್ಮೆ ಅಲ್ಲಿಗೆ ಹೋಗಿಬರುವ ಬಯಕೆ ನಮಗೂ ಆಗಿದ್ದು ಸಹಜವಾಗಿದೆ.
'ಮೇಡ್ ಆಫ್ ದ ಮಿಸ್ಟ್' ತಾಣಕ್ಕೆ ನಯಾಗರ ಜಲಪಾತಕ್ಕೆ ಭೇಟಿಕೊಟ್ಟವರೆಲ್ಲ ಹೋಗಿಯೇ ಹೋಗುತ್ತಾರೆ.
'ನಯಾಗರ ಜಲಪಾತ'ದ ಕೆಳಗೆ ಹೋಗಲು, ನಾವು ಹಡಗಿನಲ್ಲಿ ಹೋಗಬೇಕು.. ಅಲ್ಲಿಂದ ತಲೆಯಮೇಲೆ ನೀರಿನ ಅಪಾರ, ದೈತ್ಯ ಧುಮುಕುವಿಕೆ, ಅತಿ ಮುದಕೊಡುವ ಸಂಗತಿ.
ದೂರದಿಂದ ಹಾಲು ಬಿಳುಪಿನ ತರಹ ಗೋಚರಿಸಿದ ಈ ಅಪಾರ ಜಲರಾಶಿ ಈಗ ಪಚ್ಚೆ, ಹಸಿರು ಆದದ್ದಾದರೂ ಹೇಗೆ ? ಅಬ್ಬ ಈ ಅಧ್ಬುತ ಪವಾಡ ಕರ್ತನಾರು ? ವರ್ಷವೆಲ್ಲಾ, ವರ್ಷ ವರ್ಷವೂ, ಅದೆಷ್ಟೋ ನೂರು, ಸಾವಿರ ವರ್ಷಗಳಿಂದ ಅದೆಷ್ಟು ಮಿಲಿಯನ್/ಟ್ರಿಲಿಯನ್ ನೀರು ಪ್ರವಹಿಸಿರಬಹುದು ?!
Links :
1. http://www.niagarafallsreview.ca/ur/story/504345
2. http://www.niagarafallsreview.ca/ur/story/513272
Rating