ವಿರಹ ಗಾನ
ಏನೋ ಕಂಪನ | ಮೈಮನದೊಳು ಏನೋ ಒಂದು ಕಂಪನ |
ಏಕೋ ಕಳವಳ | ಮೈಮನದೊಳು ಏಕೋ ಇಂದು ಕಳವಳ |
ಎಂದೂ ಬಾರದಂಥ ಭಾವ | ಇಂದು ಮೂಡಿ ಮರೆಯಾಯಿತು |
ಎಲ್ಲೋ ಕೇಳಿದಂಥ ರಾಗ | ಒಮ್ಮೆ ಕೇಳಿ ಮಸುಕಾಯಿತು |
ಮನದ ಮಾತು ತಿಳಿಸಲು ಈಗ | ಪದವೇ ಸಿಗದೆ ತೊಡಕಾಯ್ತು |
ಎದೆಯ ದೊಂದಿ ಬೆಳಗಿಸಲೇಕೋ | ಕಿಡಿಯೇ ಇರದೆ ಇರುಳಾಯ್ತು |
ಕಾಡುತಿದೆ | ಎದೆಯೊಳಗೆ | ಎಂದೂ ಇದ್ದೂ ಇರದಂಥ ಭಾವ |
ಕೇಳುತಿದೆ | ದೂರದಲಿ | ಕಾಡುತ್ತಿದ್ದ ವಿರಹದ ಗಾನ |
Rating
Comments
ಕೃಷ್ಣ ಪ್ರಕಾಶ ರವರಿಗೆ ವಂದನೆಗಳು
ಕೃಷ್ಣ ಪ್ರಕಾಶ ರವರಿಗೆ ವಂದನೆಗಳು
' ವಿರಹ ಗಾನ ' ಕವನ ಚೆನ್ನಾಗಿದೆ, ಸರಳ ಸುಂದರ ಮೇಲಾಗಿ ಅರ್ಥಗರ್ಭಿತ ಕವನ ಧನ್ಯವಾದಗಳು.
In reply to ಕೃಷ್ಣ ಪ್ರಕಾಶ ರವರಿಗೆ ವಂದನೆಗಳು by H A Patil
ಧನ್ಯವಾದಗಳು
ಧನ್ಯವಾದಗಳು ಪಾಟೀಲ್ರೇ.