ನಾನು ನಾನೇ ನಾ...ನಾ...??

ನಾನು ನಾನೇ ನಾ...ನಾ...??

ಕವನ

ನಾನು ನಾನೇ ನಾ...ನಾ...??
ನನ್ನ.   ನನ್ನೋಳಗೆಲ್ಲ ನೀನೇ ನಾನು
ನನ್ನ.   ನನ್ನತನ ವೂ ನೀನೇ ಆಗೇ
 ನಾನು ನಾನೇ ನಾ...ನಾ...??

ನನ್ನ ಹೃದಯ ನಿನ್ನ ಬಡಿತ
ಒಂದೇ ಉಸಿರು ಎರಡು ತನುವು
ನಾನು ನಾನೇ,ನೀನು ನೀನೇ
ಎಲ್ಲ ಭೇದ ಮರೇತು ಹೋಗೆ
                ನಾನು ನಾನೇ ನಾ...ನಾ...??

ನಿನ್ನ ಕನಸೇ ನನ್ನ ಆಸೆ
ನಿನ್ನ ಆಸೆಯೇ ನನ್ನ ಕನಸು
ನಿನ್ನ ಆಣತಿಯಂತೆ ನನ್ನ ಚಲನೆ
ನಿನ್ನಂತೆಯೇ ನಾನು ಆಗಿ ಹೋಗೇ
               ನಾನು ನಾನೇ ನಾ...ನಾ...??

ನನ್ನ ನಿನ್ನ ತನುವು ಸೇರೆ
ನಾಕ ಭುವಿಯ ಮಡಿಲಿನಲ್ಲೆ
ನಿನ್ನ ತನುವಲಿ ನನ್ನ ತನುವು
ಹುಟ್ಟಿ ಬರಲು ನವ್ಯ ತನುವು
                    ನಾನು ನಾನೇ ನಾ...ನಾ...??

ನನ್ನ ತನವ ನೀನು ಅರಿತು
ನಿನ್ನ ತನವ ನಾನು ಅರಿತು
ನನ್ನ ನಿನ್ನ ಮನವು ಸೇರಿ
ನಾನು ಹೋಗಿ ನಾವು ಬರಲು
ಹೋಸ ವಸಂತ ಮೂಡಿಬರಲು
               ನಾನು ನಾವೇ ನಾನು.....
               ಹ್ಜಾಂ.. ನಾನು ನಾವೇ.. ನಾನು


ವಿ.ಸೂ-ಸ್ನೇಹಿತರೇ ಸಾವಕಾಶವಾಗಿ ಓದಿ ಪ್ರತಿಕ್ರಿಯೆ ಬರೆಯಿರಿ.

Comments

Submitted by v.m.bhat Fri, 10/12/2012 - 11:23

ಇಲ್ಲಿ ನಾನು ಹುಡುಗನೂ ಆಗಬಹುದು ಅಥವಾ ಹುಡುಗಿ
ನಾನು ನಾನೇ ನಾ...ನಾ...?? ಎಂಬುದು ನಮ್ಮಲ್ಲಿನ ದ್ವಂದ್ವವನ್ನು ತೊರಿಸುತ್ತದೆಯಸ್ಟೇ
ದೇಹ ದೇಹ ಸೇರಿದರೆ ಸುಖ ಸಂಸಾರ ಆಗದು ಮನಸ್ಸು ಮನಸ್ಸು ಸೇರಬೇಕು ಅಲ್ಲವೇ
ಇದು ಬುದ್ದಿವಂತರಿಗೆ ಮಾತ್ರ. ಅಂತ್ ಅನಿಸುತ್ತೆ

ಮಜೋವಿಕ