ಕೋಳಿಗಳ ಗ್ರೇಟ್ ಎಸ್ಕೇಪ್..ಆದ್ರೆ ಕೊನೆಗೆ ಆದದ್ದೇನು???
ಚಿತ್ರ
ಎ -ಒನ್ ಚಿಕನ್ ಸ್ಟಾಲ್...!!
ಸಾಬರ ಹಾಜಿ -ಅದರ ಮಾಲೀಕ...
ಅಂದು ಶನಿವಾರ
ವಾರಾಂತ್ಯದಲ್ಲಿ ಚಿಕನ್ಗೆ ಬೇಜಾನ್ ಬೇಡ್ಕೆ, ಅದ್ಕೆ -ಚೆನ್ನಾಗಿ ಬೆಳೆದು ಬಲಿತಿದ್ದ ಸುಮಾರು ಕೋಳಿಗಳನ್ನು ನೋಡಿ ಆರಿಸಿ ಆರ್ಡರ್ ಮಾಡಿ ಬಂದಿದ್ದ...
ಎರಡು ದಿನಗಳ ಹಿಂದೆ ಪೇಟೆಯ ಖಲೀಮುಲ್ಲ ಚಿಕ್ ವ್ಯಾನ್ ಒಂದರಲ್ಲಿ ಸುಮಾರು ೩೦ ಕೋಳಿಗಳನ್ನು ಬೋನು ಸಮೇತ ಕೊಟ್ಟು ಹೋಗಿದ್ದ ..
ಕೋ ಕ್ಕೋ ಕೋ ಕ್ಕ್ಕೋ
ಕೋ ಕ್ಕೋ ಕೋ ಕ್ಕ್ಕೋ
ಕೋ ಕ್ಕೋ ಕೋ ಕ್ಕ್ಕೋ
ಕೋ ಕ್ಕೋ ಕೋ ಕ್ಕ್ಕೋ ....!!
ಎಂದು ಬಿಟ್ಟು ಬಿಡದೆ ಭಯಬೀತವಾಗಿ ಕಿರುಚುತ್ತಿದ್ದ ಕೋಳಿಗಳತ್ತ ನೋಡುತ್ತಾ ಒಮ್ಮೆ ನಕ್ಕ..
ನಾಳೆ ಭಾನುವಾರ ಫುಲ್ ಕೆಲಸ.. ಒಬ್ಬ ಕಸ್ಟಮರು ಪಕ್ಕದ್ ಇಂಡಿಯನ್ ಚಿಕನ್ ಸ್ಟಾಲ್ ಶಂಶಾದ್ ಹತ್ರ ಹೋಗಬಾರದು ಎಲ್ರೂ ನಮ್ಕಡಿಕೆ ಬರಬೇಕು ಹಂಗಿವೆ ನಂ ಮಾಲು..!
ಸಾಬರ ಹಾಜಿಯ ಕ್ರೂರ ದೃಷ್ಟಿ ಮಿಶ್ರಿತ ಆ ಸ್ವಗತದ ನಗೆ ಆ ಕೋಳಿಗಳಿಗೆ ಕಾಣಿಸಿ ಕೇಳಿಸಿ ಮೈ ಗಡ ಗಡ ನಡುಗಿದವು..!!
ಬೋನಲ್ಲಿದ್ದ ಎಲ್ಲ ಕೋಳಿಗಳ ತಲೆಯಲಿ ಒಂದೇ ಆಲೋಚನೆ -ದೂ(ದು)ರಾಲೋಚನೆ -ಹೆಂಗಾರ ಇಲ್ಲಿಂದ ಎಸ್ಕೇಪ್ ಆಗಬೇಕಲ್ಲ....!
ಹೇಗೆ
ಹೇಗೆ??
ಇದ್ದ ಚಿಕ್ಕ ಬೋನಲ್ಲೆ ಅಸ್ಟು ಕೋಳಿಗಳನ್ನ ತುರುಕಿದ್ದರಿಂದ ಕೆಲವೊಂದು ಬಡಪಾಯಿ ಸಾಧು ಕೋಳಿಗಳು ಇನ್ನಿತರ ಬಲಾಡ್ಯಾ ಕೋಳಿಗಳ ಆಕ್ರಮಣ - ಅತಿಕ್ರಮಣಕ್ಕೆ ತುತ್ತಾಗಿ ನಿತ್ರಾಣವಾಗಿದ್ದವು ಆದರೂ ತಾವ್ ಎಸ್ಕೇಪ್ ಆಗಬೇಕು ಎಂದು 'ಚಿಂತಿಸದೆ' ಇರುವಷ್ಟು ಮಾನಸಿಕ ನಿತ್ರಾಣವಾಗಿರಲಿಲ್ಲ ...!
ಆಗ್ಲೇ ೨-೩ ಗ್ರಾಹಕರು ಬಂದು ೨-೩ ಕೆ ಜಿ ಚಿಕನ್ಗೆ ಆರ್ಡರ್ ಮಾಡಿದರಿಂದ ತಾ ಕುಳಿತ ಜಾಗದಿಂದೆದ್ದ ಹಾಜಿ ಬೋನೊಳಗೆ ಕೈ ತೂರಿಸಲು, ಬಡಪಾಯಿ ನಿತ್ರಾಣ ಕೋಳಿಗಳನ್ನು ಹಿಂದಕ್ಕೆ ನೂಕಿ ತುಳಿದು ಕುಕ್ಕಿ ಮುಂದೆ ಬಂದು ನಿಂತು ಯಥೇಚ್ಹ ಗಾಳಿ -ಬೆಳಕು ಸೇವಿಸುತ್ತಿದ್ದ ಬಲಾಡ್ಯ ಕೋಳಿಗಳಿಗೆ ಜೀವ ಭಯ ಉಂಟಾಗಿ ಎಲ್ಲಿಲ್ಲದ ಶಕ್ತಿಯೊಡನೆ ಒಮ್ಮೆಲೇ ಬೋನಿನ ಹಿಂದಕ್ಕೆ ಸಮರ ಸಾಲ್ಟ್ ಹೊಡೆದು ಎಲ್ಲ ಕೋಳಿಗಳಿಗಿಂತ ಹಿಂದೆ ಲ್ಯಾಂಡ್ ಆದವು-
ಉಫ್...! ಸಧ್ಯ ಬಚಾವ್ ಎಂದು ನಿಟ್ಟುಸಿರು ಬಿಟ್ಟವು..!!
ಮತ್ತೆ -ಬೀಸೋ ದೊಣ್ಣೆ ತಪ್ಪಿಸ್ಕನ್ದ್ರೆ ನಾಳೆವರಗೆ ಬದ್ಕಿರ್ಬಹ್ದು..!
ಧುತ್ತನೆ ಆದ ಈ ಬೆಳವಣಿಗೆಗೆ ಕಾರಣ ಏನು ಎಂದು ಥಿನ್ಕಿಸುತ್ತಿದ್ದ ಬಡಪಾಯಿ ಕೋಳಿಗಳಿಗೆ ಆ ಆಹಾಕಾರಕ್ಕೆ ಕಾರಣ ಅರ್ಥವಾಗುವುದರೊಳಗೆ ಮೃತ್ಯುವಿನ ಅಪರವತಾರದ ಹಾಜಿಯ ಕಬಂಧ ಬಾಹು ಬೋನಿನ ಒಳ ಬಂದು ಬಡಪಾಯಿ ೨-೩ ಕೋಳಿಗಳ ಕಟ್ಟು ಹಿಡಿದು ಆಗಿತ್ತು......:((
ವಿಲ ವಿಲ ಒದ್ದಾಡುತ್ತ ಕಣ್ಣಲಿ ನೀರು ಸುರಿಸುತ ಬಿಡು ಬಿಡು ಎಂಬಂತೆ ನೋಡಿದ ಅವುಗಳ ವರ್ತನೆಯನ್ನು ಮಾಮೂಲಾಗಿ ಸ್ವೀಕರಿಸಿ ದ ಹಾಜಿ..
ಇನ್ನುಳಿದ ಕೋಳಿಗಳತ್ತ -ನೀವಾರ ನನ್ನ ಬಿಡಿಸಿ ಎಂಬಂತೆ ನೋಡಿದ ಬಡಪಾಯಿ ಕೋಳಿಗಳತ್ತ ವಿಷಾಧ ಭಾವದಿಂದ ನೋಡುತ್ತಾ-
ನೀವ್ ಇವತ್ತು ನಾವ್ ನಾಳೆ -ಒಟ್ಟಿನಲ್ಲಿ ಇದು ತಪ್ಪದು ..ಎಂದು ಎಲ್ಲ ಕೋಳಿಗಳು ನೋಟ ಬೇರೆ ಕಡೆ ಮಾಡಿದವು..
ಹೀಗೆಯೇ ರಾತ್ರಿವರೆಗೆ ಸುಮಾರು ಕೋಳಿಗಳನ್ನು .ತೆಗೆದು ಗ್ರಾಹಕರಿಗೆ ಕಟ್ ಮಾಡಿ ಕಳಿಸಿ ಆಗಿತ್ತು...
ಬೋನೊಳಗೆ ಕಬಂಧ ಬಾಹು ಒಂದು ಬರುವುದು ತಮ್ಮವರೋಬ್ಬರನ್ನು ತೆಗೆದುಕೊಂಡು ಹೋಗುವುದು -
ಕ್ಕೊ ಕೋ ಕ್ಕೊ ಕ್ಕೊಕ್ಕ್ ಎನ್ನುತ್ತಾ ಆರ್ತವಾಗಿ ಕಿರುಚುತ್ತ ಇದ್ದಕ್ಕಿದ್ದಂತೆ ನಿಷ್ಯಬ್ಧವಾಗುವ ಹೊರ ಹೋದ ಕೋಳಿಗಳಿಗೆ ಏನೋ ಆಗುತಿದೆ..
ಹೋದ ಯಾವೊಂದು ಕೋಳಿಯು ವಾಪಾಸ್ಸು ಬರಲಿಲ್ಲ...ಬರುತ್ತಿಲ್ಲ..ಯಾಕೆ? ಯಾಕೆ??
ಹೊರಗಡೆ ಅಲ್ಲೇನೋ ಆಗುತ್ತಿದೆ..
ನಾಳೆ ನಾವ್ ಹೊರಗಡೆ ಹೋದರೆ ನಾವು ತಿರುಗಿ ಬರಲಿಕ್ಕಿಲ್ಲ...
ಹೆಂಗಾರ ಎಸ್ಕೇಪ್ ಆಗಲೇಬೇಕು..ಎಲ್ಲ ಕೋಳಿಗಳ ಮನದಲ್ಲಿ ಅದೇ ಆಲೋಚನೆ...
ಅದು ಸಾಧ್ಯವೇ?
ಆ ರಾತ್ರಿ ಅಳಿದುಳಿದ ಕೋಳಿಗಳ ಬೋನನು ಒಳಗಡೆ ಇಟ್ಟು ಮನೆಗೆ ಹೊರಟ ಸಾಬರ ಹಾಜಿ.. ಅವತ್ತು ಬೇಜಾನ್ ಸೇಲ್ ಆಗಿದ್ದರಿಂದ ಭಲೇ ಖುಷಿಯಾಗಿದ್ದ.
ಪಕ್ಕದ ಅಂಗಡಿಯ ಶಂಶಾದ್ ಇವನ ಸೇಲ್ ನೋಡಿ ಹೊಟ್ಟೆಯಲಿ ಇರುವೆ ಓಡಾಡಿದ ಹಾಗಾಗಿ, ಈ ಹಾಜಿಯ ಅಂಗಡಿಗೆ ಮಾತ್ರ ಯಾಕೆ ಅಸ್ಟು ಜನ ಬರ್ತಾರೆ?
ಇವನೇನಾರ ಕೊಳ್ಳೇಗಾಲಕ್ಕೆ ಹೋಗಿ ನಿಂಬೆ ಹಣ್ಣು ಮಂತ್ರಿಸಿ ತಂದಿರುವನೆ? :())
ಅಂಗಡಿಯ ಕತ್ತಲಿನ ಮೂಲೆಯೊಂದರಲ್ಲಿ ಇಟ್ಟಿದ್ದ ಬೋನಿನಲ್ಲಿದ್ದ ಕೋಳಿಗಳಲ್ಲಿ ಹಲವು -ನಮ್ ಕಥೆ ಅಸ್ಟೇ ಪಾರಾಗಕ್ಕೆ ಆಗೋಲ್ಲ , 'ಶಿವ ನೀನೆ ದಿಕ್ಕು' ಅಂತ ಇದ್ಬಿಡುವ ಅಂತ ಇನೇನು ಎಕ್ಸ್ಟ್ರ ಯೋಚಿಸದೆ ಕಾಳು ತಿಂದು ನೀರು ಕುಡಿದು ತೆಪ್ಪಗೆ ಮಲಗಿದ್ದವು..!!
ಆದರೆ ಇನ್ನು ಕೆಲವು ಕೋಳಿಗಳು ಮಾತ್ರ ಹೆಂಗಾರ ಎಸ್ಕೇಪ್ ಆಗಲೇಬೇಕು ಅಂತ ಡಿಸೈಡ್ ಮಾಡಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಣ್ತೆರೆದು ಕೂತಿದ್ದವು-ಅಲ್ಲಲ್ಲ ನಿಂತಿದ್ದವು....!!
ಬೆಳಕು ಹರಿಯಿತು, ಆದ್ರೆ ಯಾವೊಂದು ಕೋಳಿಯು ಕ್ಕೊ ಕ್ಕೊ ಅನ್ನಲು ರೆಡಿ ಇಲ್ಲ...!!ಕಾರಣ ಸುಸ್ಪುಸ್ಟ
ಹಾಗೊಮ್ಮೆ ತಾವ್ ಕ್ಕೊ ಕ್ಕೊ ಅಂತ ಮಾಮೂಲಿನಂತೆ ಕೊಕ್ಕರಿಸಿದರೆ , ಬೆಳಕು ಹರಿಯಿತು ಎಂದು ಹಾಜಿ ಬಂದು ತಮ್ಮನ್ನು ಕತ್ತರಿಸುವನು..!!!
ಅದ್ಕೆ ಎಲ್ಲವೂ ಆಲ್ ಇನ್ದ್ಯ ಲೆವೆಲ್ಗೆ ಸೈಲೆಂಟ್ ಆಗಿದ್ವು.. ಆದ್ರೆ ಕೋಳಿಗಳು ಕೂಗದೆ ಇದ್ದರೂ ಬೆಳಕು ಹರಿಯಿತು..!
, ಹಾಜಿ ಬಂದು
ಬೋನು ತೆಗೆದು ಹೊರಗಡೆ ಇಟ್ಟ -
ಕಾಳು- ನೀರು ಧ್ವಾರದಲಿ ಇಟ್ಟು ಬಾಗಿಲು ತೆಗೆದ, ಒಮ್ಮೆ ಎಲ್ಲ ಕೋಳಿಗಳತ್ತ ನೋಡಿದ -
ಅವನ ನೋಟ -ಹೆಂಗೂ ಶಿವನ ಪಾದ ಸೇರುತ್ತಿರುವಿರಿ -ಚೆನ್ನಾಗಿ ತಿಂದುಂಡು ಕುಡಿದು ಇರಿ ಎಂಬಂತಿತ್ತು...!!
ಕೆಲವು ಕೋಳಿಗಳು ಬಿದ್ದಲ್ಲೇ ನಿತ್ರಾಣವಾಗಿ ಬಿದ್ದಿದ್ದರೆ ಇನ್ನು ಕೆಲವು ಇದೇ ಚಾನ್ಸ್ ಜಮಾಯ್ಸಿ ಬಿಡುವ ಅಂತ ನೂಕು ನುಗ್ಗಲು ಮಾಡಿ ಟ್ರಾಫಿಕ್ ಜಾಮ್ ಮಾಡಿದವು..!!
ಹಾಗೆ ಹೊರ ಬಂದ ಕೋಳಿಗಳು ಕಾಳು ತಿನ್ನುತ ಸುತ್ತ ಮುತ್ತ ಕಣ್ಣಾಡಿಸುತ್ತ ಎಲಾರ ಎಸ್ಕೇಪ್ ಆಗುವ ರೂಟ್ ಇದೆಯಾ ಎಂದು ನೋಡಿದವು, ಸುತ್ತಲೂ ಮನುಷ್ಯನ ಎದೆ ಮಟ್ಟಕ್ಕೆ ಕಂಬಗಳನ್ನು ನಿಲ್ಲಿಸಿ ಅದಕ್ಕೆ ತಂತಿಗಳ ಬೇಲಿ ಹಾಕಿದ್ದು ಕಾಣಿಸಿತು -ಇದ್ದುದು ಒಂದೇ ದಾರಿ ಅದು ಅಂಗಡಿ ಒಳಗೆ ಹೋಗುವುದಕ್ಕೆ ಇದ್ದ ಮಾರ್ಗ-
ಅದು ಆನಂದ ಮಾರ್ಗವೇ ಆಗಬಹ್ದು-
ವೈಕುಂಠ ಯಾತ್ರೆಗೆ ಹೋಗುವುದಕೆ ಸಹಾ ರೂಟ್ ಆಗಬಹ್ದು.
ಹುಸಾರಾಗಿ ಎಸ್ಕೇಪ್ ಆಗಬೇಕು ಎನ್ನುತ ತಮ್ ತಮ್ಮಲ್ಲೇ ಚಿಂತಿಸಿದವು ಕೆಲ ಕೋಳಿಗಳು-
ಆದ್ರೆ ಅಪ್ಪಿ ತಪ್ಪಿಯೂ ಯಾವೂ ಬಾಯ್ ಬಿಟ್ ಇನ್ನೊಂದಕ್ಕೆ -ಮಗಾ ನಾ ಎಸ್ಕೇಪ್ ಆಗ್ತಿರ್ವೆ ನೀ ಬರ್ತೀಯ ಎಂದು ಕೇಳಲಿಲ್ಲ..!! ಸೆಲ್ಫಿಶ್
ಬೋನು ತೆಗೆದು ಕಾಳು ಹಾಕಿ ನೀರು ಹಾಕಿ ಇಟ್ಟು ಬಾಗಿಲು ತೆಗೆದು ಕೋಳಿಗಳನ್ನು ಹೊರ ಬಿಟ್ಟು ಮೂಲೆಯಲ್ಲಿದ್ದ ಕಸ ಗುಡಿಸುವ
ಪೊರಕೆ ತೆಗೆದು ಹೊರಗಡೆ ಕಸ ಗುಡಿಸಲು ಹೋದ.
ಈ ಹಿಂದೆ ಕೋಳಿಗಳಿಗೆ ಇಷ್ಟು ಸ್ವಾತಂತ್ರ್ಯ ಇರಲಿಲ್ಲ. ..ಅದು ಬದಲಾಗಿದ್ದು ಕೋರ್ಟ್ ಒಂದರ ಆದೇಶದ ಫಲವಾಗಿ...ಹೀಗೆ...
ಮೊದ ಮೊದಲಿಗೆ ಕೋಳಿಗಳು ಅಕಸ್ಮಾತ್ತಾಗಿ ಕೈ ತಪಿಸ್ಕೊಂಡು ಹೋಗದಿರಲಿ ಅಂತ ಎಲ್ಲ ಕೋಳಿಗಳಿಗೂ ಕಾಲಿಗೆ ದಾರ ಬಿಗಿದು ಕಟ್ಟುತ್ತಿದ್ದರು , ಆದರೆ ಪ್ರಾಣಿ ಪಕ್ಷಿ ದಯಾ ಸಂಘದವರು ಹುಯಿಲೆಬ್ಬಿಸಿ ಘೋಷಣೆ ಕೂಗಿ ಧರಣಿ ನಡೆಸಿ ಕೋರ್ಟಿಗೆ ಎಳೆದು ಕೇಸು ಜಡೆದು ಕೋರ್ಟು ಹಾಗೆಲ್ಲ ಕೋಳಿಗಳಿಗೆ ಕಾಲು ಕಟ್ಟಬಾರದೆಂದು ಬೋನೊಂದರಲ್ಲಿ ಆರಾಮವಾಗಿ ಅದ್ದಾದುವಂತೆ ಜಾಗ ಬಿಟ್ಟು ಬಾಗಿಲು ಹಾಕಬೇಕು ಎಂದು ಅಪ್ಪಣೆ ಕೊಡಿಸಿತ್ತು..
ಅಯ್ಯೋ ಅದು ಕೋರ್ಟು, ಆ ಜಡ್ಜ್ ಸಾಬರು ಅಲ್ಲೇ ಇತಾರೆ ಅವರೇನು ಇಲ್ಲಿ ನೋಡೋಕ್ ಬರ್ತಾರ ? ಅಂತ ಕೆಲವರು ಮಾಮೂಲಿನಂತೆ ಕಾಲಿಗೆ ಬಿಗ್ದು ಕೋಳಿಗಳನ್ನ ಎಗ್ಗಾ ಮಗ್ಗ ಬೋನಲಿ ತುರುಕಿ ಆರಾಮಾಗಿದ್ದ ಆ ವೇಳೆ ಪ್ರಾಣಿ ಪಕ್ಷಿ ದಯಾ ಸಂಘದವರು ಟೀ ವಿ ಕ್ಯಾಮೆರ ಸಮೇತ ದಯಮಾಡಿಸಿ ಈ ಅಮೋಘ ದೃಶ್ಯವನ್ನು ಜಗಜಾಹೀರು ಮಾಡಿ ಎಲ್ಲರನ್ನು ಕೋರ್ಟ್ಗೆ ಎಳೆದು ಬೇಜಾನ್ ಫೈನ ಹಾಕಿಸಿದ್ದರು.. ಹೀಗಾಗಿ ಹಿಂದಿನ ಕಹಿ ನೆನಪು ಮರೆಯಲು ಆಗದೆ ಹಾಜಿ ಕೋಳಿಗಳಿಗೆ ಕಾಲು ಕಟ್ಟದೆ ಹಾಗೆಯೆ ಬೋನೊಳಗೆ ಬಿಡುತ್ತಿದ್ದ-ಹೆಂಗೂ ಕುಳಿತಲ್ಲೇ ನಿಂತಲ್ಲೇ ಇದ್ದ ಜಾಗದಲ್ಲೇ ಇದ್ದು ಕೋಳಿಗಳಿಗೆ ಮೈನಲಿ ಶಕ್ತಿ ಇದ್ದರೂ ,ಓಡಿ ಹೋಗುವಸ್ತು ಮನೋಧಾರ್ಡ್ಯತೆ ಇರೋಲ್ಲ ಅನ್ನುವುದು ಅವನ ಅಭಿಮತ..!
ಆದರೆ ಅವನ ಈ ಆಲೋಚನೆ -ಚಿಂತನೆ ಸುಳ್ಳಾಗುವ ಟೈಮ್ ಬಂದೇ ಬಿಡ್ತು-
ಎಲ್ಲ ಕೋಳಿಗಳೂ ಎಸ್ಕೇಪ್ ಆಗಲು ಪ್ರಯತ್ನಿಸಿದರೂ ನಿತ್ರಾಣಗೊಂಡಿದ್ದರಿಂದ ಆಗದೆ ಹಾಗೆಯೇ ಕುಸಿದು ಬಿದ್ದವು.. ಇನ್ ಕೆಲವು ಧೈರ್ಯ ವಹಿಸಿ ಮೆಲ್ಲಗೆ ಗೇಟ್ನ ಕಡೆ ಹೆಜ್ಜೆ ಹಾಕಿದವು ಒಳ ಬರುವಾಗ ಗೇಟು ಮುಚ್ಚಲು ಮರೆತಿದ್ದ ಹಾಜಿಯ ಗಮನ ಈ ಎಸ್ಕೇಪ್ ಆಗ ಹೊರಟ ಕೋಳಿಗಳತ್ತ ಹರಿಯುವುದು , ಅವನ ಕಾಕ ದೃಷ್ಟಿ ತಮ್ ಮೇಲೆ ಬಿದ್ದಿದೆ ಅಂತ ಇವಕ್ಕೂ ಗೊತ್ತಾಗಿ ಕೆಲವು ವಾಪಾಸು ಹಿಂದಕ್ಕೆ ಬಂದರೆ ಇನ್ ಕೆಲವು ಧೈರ್ಯ ವಹಿಸಿ ಸ್ವಾತಂತ್ಯರದ ಗೆರೆಗೆ -ಗಡಿಗೆ ಹತ್ತಿರ ಬಂದು ಎಲ್ಲಿಲದ ಶಕ್ತಿ ತಂದುಕೊಂಡು ಸರ್ ಪರ್ ಅಂತ ರೆಕ್ಕೆ ಬಿಚ್ಚೀ ಹಾರುತ್ತ ಬೀಳುತ್ತಾ ಓಡಿದವು ..
ಹಾಜಿ ಹೇಯ್ ಹೇಯ್.... ಓಡುತ್ತ ಬರುವುದರೊಳಗೆ ೫- ೬ ಕೋಳಿಗಳು ಗೇಟು ದಾಟಿ ಮುಂದಿನ ಬಯಲಿನತ್ತ ಓಡುತಿದ್ದವು, ಈ ಮಹದವಕಾಶಕ್ಕೆ ಕಾಯ್ತಿದ್ದಂತೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯ್ತಿದ್ದ ಕೆಲ ಬೆಕ್ಕು ನಾಯಿಗಳು ಈ ಸ್ವಾತಂತ್ರ್ಯದ ಸವಿ ಉಣ್ಣುವ ಆತುರ ಕಾತುರದಲ್ಲಿ ಮೈ ಮರೆತಿದ್ದ ಕೋಳಿಗಳ ಮೇಲೆ ಮುಗಿ ಬಿದ್ದು ೪ ಕೋಳಿಗಳನ್ನು ಹೊತ್ತೊಯ್ದವು.. ಇದನ್ನು ನೋಡಿದ ಹಾಜಿ ಕೈಗೆ ಕಲ್ಲು ತೆಗೆದುಕೊಂಡು ಬೀಸಿದರೂ ಆ ನಾಯ್- ಬೆಕ್ಕುಗಳು ಯಾವೊಂದು ಕೋಳೀನು ಬಿಡದೆ ಹಾಗೆಯೇ ಕಚ್ಚಿಕೊಂಡು ಓಡಿದವು
ತತ್ಥೆರಿಕೆ - ಇಸ್ಕಿ ಮಾ ...ಕಿ ಹೋಯ್ತಲ್ಲ ಹೋಯ್ತಲ್ಲ ಎನ್ನುತಲೇ ಅವುಗಳ ಹಿಂದೆ ಕಲ್ಲು ಬೀಸುತ್ತ ಓಡಿದ, ಆದರೆ ನಾಯಿ ಬೆಕ್ಕುಗಳು ತಾವ್ ಕಚ್ಚಿಕೊಂಡಿದ್ದ ಕೋಳಿಗಳ ಸಮೇತ ನಾಗಾಲೋಟದಲ್ಲಿ ಓಡುತ್ತ ಕಣ್ಮರೆಯಾದವು..
ಇನ್ನುಳಿದಿದ್ದ ಎರಡು ಕೋಳಿಗಳು ಧುತ್ತನೆ ತಮ್ ಕಣ್ಣೆದುರಿಗೆ ತಮ್ಮವರಿಗೆ ಆದ ಈ ದುರ್ಘತಿಗೆ ಧಿಗ್ಭ್ರಮೆಯಾಗಿ ಕೆಲ ಹೊತ್ತು ಮೈ ಮರೆತು ನಿಂತಿದ್ದವು ಆದರೆ ಯಾವಾಗ ಹಾಜಿಯ ಧ್ರುಸ್ತಿ ತಮ್ಮ ಮೇಲೆ ಬಿತ್ತೋ- ಓಡೋ ಓಡೋ- ಫಾಸ್ಟ್ ಫಾಸ್ಟ್ ಎನ್ನುತ್ತಾ ಆಗಾಗ ಹಿಂದುರುಗಿ ನೋಡುತ ಶರ ವೇಗದಲಿ ಮುಂದಿನ ಹೆದ್ದ್ಧಾರಿ ಕಡೆ ನುಗ್ಗಿದವು.. ಬೆಳಗ್ಗೆಯೇ ಆದ ಈ ಪಜೀತಿಗೆ ಮೈ ಉರಿದು ಹೋಗಿದ್ದ ಹಾಜಿ ಮೈನಲಿ ಶಕ್ತಿ ಯನ್ನ ಕಾಲಿಗೆ ಕೇಂದ್ರೀಕರಿಸಿ ಓಡಿದ-ಈ ಕೋಳಿಗಳನ್ನ ಹಿಡಿದು ಚಮ್ ಡಾ ಸುಲಿದು ಖೈಮಾ ಮಾಡ್ಬೇಕು...!!
ಕ್ರಮೇಣ ದೂರವಾಗುತಿದ್ದ ಕೋಳಿಗಳ ವೇಗಕ್ಕೆ ಸರಿ ಹೋಗದೆ ಹಾಜಿ ಕುಸಿದು ಕುಳಿತ... ಆಗೋಲ್ಲ-ಆಗೋಲ-ಇನ್ನಾಗೋಲ್ಲ. ಹೋದರೆ ಹಾಳಾಗಿ ಹೋಗಲಿ ಯಿ ಯಾವ್ದಾರ ನಾಯಿಗೋ ನರಿಗೋ ಬೇಕ್ಕಿಂದ್ ಬಾಯಿಗ್ ಸಿಕಾಕ್ಕೊಲ್ತವೆ ಎನ್ನುತ ಏದುಸಿರು ಬಿಡುತ್ತಿದ್ದ ಹಾಜಿ -
ಒಮ್ಮೆ ಎದುರಿನ ಹೆದ್ಧಾರಿ ಕಡೆಗೆ ಕಣ್ಣು ಹಾಯಿಸಿದ -
ಓಡುತಿದ್ದ ಕೋಳಿಗಳು ಇನ್ನು ಆ ಹಾಜಿ ತಮ್ಮ ಕಡೆ ಬರೋಲ್ಲ ಎಂದು ಗೊತ್ತಾದರೂ ಯಾವುದಕು ಮೊದಲು ಹೆದ್ಧಾರಿ ಆ ಕಡೆ ಹೋಗಿ ಸೇರುವ ಅಂತ ಓಡುತಿದ್ದವು ಆ ಸ್ವಾತಂತ್ಯ್ರ ಅವುಗಳಿಗೆ ಮೈನಲ್ಲಿ ಬಲ -ಛಲ ತಂದಿತ್ತು ಆದರೆ ಆ ಖುಷಿಯಲ್ಲಿ ಅವು ಮರೆತ ಒಂದು ಸಂಗತಿ-ಎಂದರೆ......
ದೂರದಲ್ಲಿ ವೇಗವಾಗಿ ಬರುತಿದ್ದ ತರಕ್ ಒಂದನ್ನು ನೋಡದೆ ಇದ್ದುದು...:((
೨ ದಿನಗಳಿಂದ ಬಿಟ್ಟು ಬಿಡದೆ ಟ್ರಕ್ ಚಲಾಯ್ಸಿಕೊಂಡು ನಿದ್ದೇನು ಮಾಡದೆ ತೇಲುಗಣ್ಣು ಮೇಲುಗಣ್ನಲ್ಲಿ ಗಾಡಿ ಓಡಿಸುತ್ತಿದ್ದ ಚಾಲಕ ರಾಮ್ ಸಿಂಗ್ ಕಣ್ರೆಪ್ಪೆಗಳು ತಾವಾಗಿಯೇ ಒತ್ತಾಯಪೂರ್ವಕವಾಗಿ ಮುಚ್ಚಿಕೊಳ್ಳುತ್ತಿದ್ದವು..ಆಗೊಮ್ಮೆ ಕಣ್ಣು ತೆರೆದು ನೋಡಲು ದೂರದಲ್ಲಿ ಎರಡು ಬಿಳಿಯ ಬಣ್ಣದ ಕೋಳಿಗಳು ಬರುತ್ತಿದ್ದುದು ಕಾಣಿಸಿತು -ಅಯ್ಯೋ ಅಯ್ಯೋ- ಕೋಳಿಗಳು ನನ್ನ ಟ್ರಕ್ ಗೆ ಸಿಕ್ಕಿ ಸತ್ತರೆ ಈ ಹಳ್ಳಿ ಜನ ನಂ ಬಿಡೋ ಹಾಗಿಲ್ಲ.. ಎನ್ನುತ್ತಾ ಬ್ರೇಕ್ ಮೇಲೆ ಕಾಳು ಹಾಕಲು ಹೋಗಿ ನಿದ್ದೆ ಗಂನಲಿ ಎಕ್ಸ್ಲೇಟರ್ ಮೇಲೆ ಕಾಲು ಇಟ್ಟ....:()))
ಕ್ಷಣ ಮಾತ್ರದಲ್ಲಿ ಶರವೇಗದಿಂದ ಹೊರಟ ಟ್ರಕ್ ತನ್ನ ಆಜ್ಞೆ ಮೀರಿ ನುಗ್ಗುತ್ತಿದ್ದುದು ಕಾರಣ ಏನು ಎಂದು ಬಗ್ಗಿ ನೋಡಿ ಅವಾಂತರ ಗೊತ್ತಾಗಿ ಎಚ್ಹ್ಹೆತ್ತುಕೊಳ್ಳುವುದರೊಳಗೆ ಆ ಎರಡು ಕೋಳಿಗಳು ಬಂದು ಮುಂದಿನ ಗಾಲಿಗೆ ತಗುಲಿ ಹಾಗೆಯೇ ಗಾಲಿಗೆ ಅಂಟಿಕೊಂಡು ಚಪ್ಪಾಂ ಚಪಾತಿ ಆಗಿದ್ದು ಆಗ್ ಹೋಯ್ತು...!
ಆ ಹಾಲು ನಿದ್ದೆಯಲ್ಲ ಹಾರಿ ಹೋಗಿ ಭಯ ಮನೆ ಮಾಡಿ ದೂರದಲಿ ಇದನ್ನೇ ನೋಡುತ್ತಿದ್ದ ಹಾಜಿಯನ್ನು ಕಂಡು ಇನ್ನಿಲ್ದ್ರೆ ಸತ್ತೇ ಎನ್ನುತ್ತಾ ಮತ್ತಸ್ಸ್ತು ವೇಗವಾಗಿ ಟ್ರಕ್ ಚಲಾಯಿಸ್ಕೊಂಡು ಬಲ ಬದಿಯ ಮಿರರನಲಿ ಹಿಂದ್ಯಾರು ಬರುತ್ತಿಲ್ಲ ಎಂಬುದನ್ನು ಗಮನಿಸುತ ಓಡಿಸುತ್ತಿದ್ದ...ಸಧ್ಯ ಈ ಫೈನಿಂದ ತಪ್ಸ್ಕೊನ್ದ್ರೆ ಸಾಕು ಅವನ ಆಲೋಚನೆ--!
ಆದರೆ ಈ ಗಡಿಬಿಡಿಯಲ್ಲಿ ಅವನು ಮರೆತ ಸಂಗತಿ ಒಂದಿತ್ತು....!!
ಎದುರುಗಡೆಯಿಂದ ಇವನ ತರಹವೇ ೨-೩ ದಿನಗಳಿಂದ ಕಂಟಿನ್ಯೂಯಸ್ ಆಗಿ ಲಾರಿ ಚಲಾಯಿಸುತ್ತಿದ್ದ ಡ್ರೈವರು ಎದುರಿಗೆ ಬರುತ್ತಿದ್ದ ಟ್ರಕ್ ನೋಡಿ ಥಟ್ಟನೆ ಬ್ರೇಕ್ ಹಾಕಲು ಹೋಗಿ ಸೀದಾ ರಾಮ್ ಸಿಂಗನ ಟ್ರಕ್ ಗೆ ಕಿಸ್ ಕೊಡಿಸಿದ....!!
ಆ ಕಿಸ್ ರಭಸಕ್ಕೆ ಎರಡೂ ಗಾಡಿಗಳ ಮುಖಗಳು ಚಪ್ಪಾಂ ಚೂರ್ ಆಗಿ ರಾಮ್ ಸಿಂಗು ಮತ್ತು ಎದುರಿನ ಲಾರಿಯ ಡ್ರೈವರು ಇನ್ಸ್ಟಂಟ್ ಆಗಿ ಶಿವನ ಪಾದ ಸೇರಿದರು...:(
ಹೀಗೆ ಕೋಳಿಗಳು ತಾವ್ ತಮ್ಮ ಮರಣದಿಂದ ತಪ್ಪಿಸ್ಕೊಳ್ಳುವ ಭರದಲ್ಲಿ ಸ್ವಾತಂತ್ರ್ಯದ ಸವಿ ಉಂಡು ಬೆಕ್ಕು ನಾಯಿ ಪಾಲಾದರೆ ಇನ್ನುಳಿದ ಎರಡು ಕೋಳಿಗಳು ನರ ಮನುಷ್ಯರಿಬ್ಬರ ಮರಣಕ್ಕೆ ಕಾರಣವಾದವು...!!
ಆಮೇಲಿಂದ ಹಾಜಿ ಅಪ್ಪಿ ತಪ್ಪಿಯೂ ಕೋಳಿಗಳನ್ನು ಹೊರ ಬಿಡಲಿಲ್ಲ...!!
ಕ್ಕೊ ಕ್ಕೊ ಕ್ಕ್ಕೋ
==========================================================================================================
Rating
Comments
ಗ್ರೇಟ್ ಎಸ್ಕೇಪ್
ಈಗ ಎಸ್ಕೇಪ್ ಆಗುತ್ತವೆ, ಈಗ ಎಸ್ಕೇಪ್ ಆಗುತ್ತವೆ ಎಂದು ಓದಿ ಓದಿ...ಎಲ್ಲಾ ಕಲಾಸ್:(
ಚೆನ್ನಾಗಿದೆ ಸಪ್ತಗಿರಿ.
-ಗಣೇಶ.
ಕೋಳಿಗಳ ಗ್ರೇಟ್ ಎಸ್ಕೇಪ್
ಕೋಳಿಗಳ ಕಾಲಿಗೆ ದಾರ ......
ನಿಮ್ಮ ಮಾತು ನಿಜ. ಹಿ0ದೊಮ್ಮೆ ರಸ್ತೆಯಲ್ಲಿ 50 ~~~ 100 ಕೋಳಿಗಳನ್ನು ಕಾಲಿಗೆ ದಾರ ಕಟ್ಟಿ ತಲೆಕೆಳಗೆ ನೇತು ಹಾಕಿ ಸೈಕಲ್ ನಲ್ಲಿ ಹೋಗುತ್ತಿದ್ದ ಅವುಗಳ ಆರ್ತನಾದ ಕೇಳುತ್ತ ಸ0ಕಟ ಅನಿಸುತ್ತಿತ್ತು. ತರಕಾರಿಗಳಿಗಿ0ತ ಕಡೆಯೆ ಅವುಗಳು
ಕೋಳಿಗಳ ಗ್ರೇಟ್ ಎಸ್ಕೇಪ್........
ವೆಂಕಟಬಿ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಕೋಳಿಗಳ ಯಶೋಗಾಥೆ ಹೀಗೆ ಪರ್ಯಾವಸಾನ ವಾಯಿತಲ್ಲವೆಂಬ ಕೊರಗು ಕಾಡಿತು. ಉತ್ತಮ ಬರಹ. ಧನ್ಯವಾದಗಳು.
@ ಗಣೇಶ್ ಅಣ್ಣ ,ಗುರುಗಳೇ, ಮತ್ತು ಇಟ್ನಾಳ್ ಅವರೇ
ಪ್ರತಿಕ್ರಿಯಿಸಿದ ಗಣೇಶ್ ಅಣ್ಣ
ಗುರುಗಳೇ
ಮತ್ತು ಇಟ್ನಾಳ್ ಅವರೇ ನನ್ನ ನನ್ನಿ..
ಆಫೀಸಿಗೆ ಹೋಗುವಾಗ ಬರುವಾಗ ಎರಡೂ ಕೊನೆಯ ಸ್ಟಾಫ್ ಆಗಿರುವುದರಿಂದ ಕಿಟಕಿ ಪಕ್ಕದ ಆಯಕಟ್ಟಿನ ಸೀಟು ಹಿಡಿದು ಕುಳಿತುಕೊಂಡು ಕಿವಿಯಲ್ಲಿ ಇಯರ್ ಫೋನ್ ಸಿಕ್ಕಿಸಿಕೊಂಡು ಕೇಳಿದ ಸಾಂಗುಗಳನ್ನೇ ಅಮೋಘ ೧೦೦೦೦೧ ನೆ ಸಾರಿ ಕೇಳುತ್ತ ರಾಜ ಗಾಂಭೀರ್ಯದಿಂದ ಕಿಟಕಿ ಹೊರಗಡೆ ಕಣ್ಣು ಹಾಕಿ ಅಲ್ಲಿನ ನವನವೀನ ದೃಶ್ಯಗಳನ್ನು ನೋಡುವ ಹವ್ಯಾಸ ನಂದು..ಇದ್ವರ್ಗೂ ಕಿಟಕಿ ಪಕ್ಕದ ಸೀಟ್ ಇಲ್ಲದೆ ಪ್ರಯಾಣ ಮಾಡಿದ್ದು ತುಂಬಾ ರೇರ್...!!
ಹೀಗೆ ನೋಡುವಾಗಲೇ ತಲೆಯಲ್ಲಿ ಥಟ್ಟನೆ ಯಾವ್ದೋ ವಿಸ್ಯ ವಸ್ತು ಹೊಳೆದು ಬರಹ ಬರೆದದ್ದು ಉಂಟು...
ಉದಾ: ನನ್ನ ಸೀ ಎಮ್ಮು ಚೇರು (ಅದು ಬಸ್ಸಲ್ಲಿ ಬರುವಾಗ ಯಾರೋ ಒಬ್ಬರು ತಲೆ ಮೇಲೆ ಚೇರು ಹೊತ್ತು ಬೈಕಲ್ಲಿ ಕುಳಿತದ್ದು ನೋಡಿದ್ದು ಮತ್ತು ಆಗಲೇ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟು ಇನ್ನೊಬ್ಬರು ಆ ಸೀಟು ಹತ್ತಲು ಪ್ರಯತ್ನ ನಡೆದದ್ದು) ..
ಅಮ್ಮನ ಬಗ್ಗೆ ಬರಹ ಬರೆವಾಗ ತಾಯಿಯನ್ನು ಮುತುವರ್ಜಿಯಿಂದ ಮಾತಾಡಿಸುತ್ತ ಇದ್ದ ಒಬ್ಬ ಮಗನನ್ನು ನೋಡಿದ್ದು. ಹೀಗೆ...
ನಿನ್ನೆ ಬಸ್ಸಲ್ಲಿ ಬರುವಾಗ ರಸ್ತೆಯಲಿ ಒಂದು ಚಿಕನ್ ಅಂಗಡಿ ಮುಂದೆ ಕೋಳಿಗಳ ಕಲರವ ಕೇಳಿ ಈ ಬಗ್ಗೆ ಥಟ್ಟನೆ ಆಲೋಚನೆ ಬಂದು ಅವುಗಳ ಎಸ್ಕೇಪ್ ನೆನಪಿಸಿಕೊಂಡು ನಗು ಮತ್ತು ವಿಷಾದ ಭಾವ ಎರಡೂ ಬಂದವು..
ಈ ತರಹದ ಇಂಟರೆಸ್ಟಿಂಗ್ ಅಲ್ಲದ ಬರಹ ಬರೆದರೆ ಚೆನ್ನಿರುವದೆ?
ಅನ್ನಿಸಿದರೂ ಬರೆದು ಸೇರಿಸುವ -ಅಂತ ಸೇರಿಸಿದೆ...
ಮೆಚ್ಚಿ ಪ್ರತಿಕ್ರಿಯಿಸಿರುವಿರಿ ...!!
ಸರ್ವರಿಗೂ ಶುಭವಾಗಲಿ..
ಶುಭ ಸಂಜೆ
\|
:) :)
:) :)
ಶಾರ್ಟ್ ಲೈಫ್ ಅದ್ರಲ್ಲಿ ಮತ್ತೂ ಶಾರ್ಟ್ ಲೈಫ್!!
In reply to :) :) by Chikku123
@ಚಿಕ್ಕು.-ವಿನಾಶೆ ಕಾಲೇ ವಿಪರೀತ ಬುದ್ಧಿ.
:()
ವಿನಾಶೆ ಕಾಲೇ ವಿಪರೀತ ಬುದ್ಧಿ..ಸರೀನಾ???
ಚಿಕ್ಕು..ನನ್ನಿ..
ಶುಭವಾಗಲಿ..
\|
ಗ್ರೇಟ್ ಎಸ್ಕೇಪ್
ಸಪ್ತಗಿರಿಯವರೆ ವಂದನೆಗಳು,
ಚಿಕ್ಕ ಮಕ್ಕಳು ಮನೆಯಲ್ಲಿ ಕಥೆಗಾಗಿ ಪೀಡಿಸಿದಾಗ ಹೇಳಲು ಚನ್ನಾಗಿದೆ ನಿಮ್ಮ ಈ ಕೋಳಿ ಎಸ್ಕೇಪ್ ಕಥೆ.ಹಾಗೆಯೆ ಒಂದು ಸಣ್ಣ ಅಚಾತುರ್ಯದಿಂದ ಹೇಗೆ ಅವಘಡಗಳು ಸಂಭವಿಸುತ್ತವೆ ಎಂಬ ತಿಳುವಳಿಕೆ ಸಹ ಈ ಕಥೆ ಹೇಳುತ್ತದೆ.ಚನ್ನಾಗಿ ಬರೆದಿರುವಿರಿ,
ಮತ್ತೊಮ್ಮೆ ವಂದನೆಗಳು
In reply to ಗ್ರೇಟ್ ಎಸ್ಕೇಪ್ by swara kamath
ಹಿರಿಯರೇ
ಹಿರಿಯರೇ
ನನ್ನ ತಡ ಮರು ಪ್ರತಿಕ್ರಿಯೆಗೆ ಕ್ಷಮೆ ಇರಲಿ..
ನನ್ ಬರಹಗಳನ್ನು ಅವುಗಳಿಗೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿ ಮರು ಪ್ರತಿಕ್ರಿಯಿಸುವಲ್ಲಿ ಈಗೀಗ ತಡವಾಗುತ್ತಿದೆ..!!
ಈ ಬರಹ ತಲೇಲಿ ಅಕಸ್ಮಿಕವಾಗಿ ಹುಟ್ಟಿದ್ದಲ್ಲ..ಅದೊಂದು ದಿನ ಬಸ್ಸಲ್ಲಿ ಬರುವಾಗ ಕಿಟಕಿಯಿಂದ ಆಚೆ ನೋಡುತ್ತಿರಲು ಚಿಕನ್ ಅಂಗಡಿ ಮುಂದೆ ಪೆಟ್ಟಿಗೆಯಲ್ಲಿ ಜಾಲರಿ ಹಿಂದೆ ಭಯಭೀತವಾಗಿ ಕಿರುಚುತ್ತಿರುವ ಕೋಳಿಗಳನ್ನು ನೋಡಿ ಥಟ್ಟನೆ ಮನದಲ್ಲಿ ಈ ಬರಹ ಮೂಡಿ ಅದರ ಮೊದಲ ಸಾಲನ್ನು ಅಣ್ಣ ಫೋನಲ್ಲಿ ಮೆಸೆನಲ್ಲಿ ಟೈಪ್ ಮಾಡಿ ಡ್ರಾಪ್ಟ್ಸ್ ನಲಿ ಸೇವ್ ಮಾಡಿ ಆಫೀಸಿನ ಬಿಡುವಲ್ಲಿ ಟೈಪ್ ಮಾಡಿ ಸೇರಿಸಿದೆ....
ಆದರೆ ಸೇರಿಸಿ ಆದ ಮೇಲೆ ಅದು ತೀರ ಭಾಲಿಶ ಬರಹ -ಅನ್ನ್ಸಿತು!!
ನಿಜ ಹೇಳಬೇಕೆಂದರೆ ಆ ಬರಹ ನನಗೆ ಇಸ್ತವಾಗಿರಲಿಲ್ಲ..!!!
ಆದರೋ.........................ನೀವೆಲ್ಲ ಮೆಚ್ಚಿದ್ದು ಪ್ರತಿಕ್ರಿಯಿಸಿದ್ದು ಖುಷಿ ತಂದಿದೆ. ಅದರಿಂದ ನಿಮಗೆ ಮಕ್ಕಳಿಗೆ ಮನೋರಂಜನೆ ಆಗುವುದಾದರೆ ಅದಕಿಂತ ಬೇಕೇ?
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ
\|/
v