ಮೈಸೂರುಪಾಕು ಕರ್ನಾಟಕದ ವಿಶೇಷ
ಸಾಮಾಗ್ರಿಗಳು : ಕಡಲೆಹಿಟ್ಟು (ಒಂದು ಅಳತೆ) ಸಕ್ಕರೆ (ಎರಡು ಅಳತೆ) ತುಪ್ಪ (ಎರಡು ಅಳತೆ) ಏಲಕ್ಕಿ ಪುಡಿ (ಚಿಟಕಿ)
ಸಕ್ಕರೆ ಹಾಗು ಸ್ವಲ್ಪ ನೀರು (ಅರ್ದ ಅಳತೆ) ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಸಣ್ಣ ಉರಿಯ ಒಲೆಯ ಮೇಲಿಡಿ, ನೀರಿನಲ್ಲಿ ಸಕ್ಕರೆ ಪೂರ್ಣ ಕರಗಿದ ನಂತರ ಅರ್ದ ಲೋಟದಷ್ಟು ತುಪ್ಪವನ್ನು ಅದರಲ್ಲಿ ಹಾಕಿ, ಏಲಕ್ಕಿ ಪುಡಿಯನ್ನು ಸೇರಿಸಿ. ದೊಡ್ಡ ಚಮಚ ಅಥವ ಕೋಲಿನಿಂದ ಸಕ್ಕರೆ ಮಿಶ್ರಣದಲ್ಲಿ ಆಡಿಸುತ್ತ ಇರಿ. ಒಂದೆರಡು ನಿಮಿಷ ತುಪ್ಪ ಬೆರೆತ ನಂತರ ಕಡ್ಲೆಹಿಟ್ಟನ್ನು ಅದರಲ್ಲಿ ಹಾಕಿ ಅರ್ದ ನಿಮಿಷ ಹಾಗೆ ಬಿಡಿ, ನಿಧಾನವಾಗಿ ಅದನ್ನು ತಿರುಗಿಸಿತ್ತ ಹೋಗಿ (ರಾಗಿ ಮುದ್ದೆ ಮಾಡುವ ರೀತಿಯಂತೆ). ಈಗ ಸ್ವಲ್ಪ ಸ್ವಲ್ಪ ತುಪ್ಪ ಅದರಲ್ಲಿ ಬೆರೆಸುತ್ತ, ಕೋಲಿನಿಂದ ತಿರುಗಿಸುತ್ತ ಇರಿ. ತುಪ್ಪವೆಲ್ಲ ಮುಗಿಯುತ್ತ ಬರುತ್ತಿರುವಂತೆ, ಸಕ್ಕರೆ ಹಾಗು ಕಡ್ಲೆ ಹಿಟ್ಟಿನ ಮಿಶ್ರಣ ಬೆರೆಯುತ್ತ, ಜೇನುಗೂಡಿನಂತೆ ಗಾಳಿಯ ಗುಳ್ಳೆಗಳು ಬರಲು ಪ್ರಾರಂಬ, ಮತ್ತೆ ಸರಿಯಾದ ಹದಕ್ಕೆ ಬರುವವರೆಗು ತುಪ್ಪ ಸೇರಿಸಿ ಕಲಕುತ್ತ ಇರಿ. ಪಾಕವನ್ನು ಕಲಕುವಾಗ ಆದಷ್ಟು ಒಂದೆ ದಿಕ್ಕಿಗ್ಗೆ ವೃತ್ತಾಕಾರವಾಗಿ ತಿರುಗಿಸುತ್ತ ಇರಿ. ಕೈ ನೋವು ಎಂದು ನಿಲ್ಲಿಸಿದರೆ, ತಳ ಹತ್ತುವ ಅಪಾಯವಿದೆ. ಪಾಕವೆಲ್ಲ ಒಂದಡೆ ಸೇರುತ್ತ, ದೊಡ್ಡ ಉಂಡೆಯ ಆಕಾರಕ್ಕೆ ಬರುತ್ತ ಹೋಗುತ್ತದೆ, ಈಗ ನಿಮಗೆ ಬೇಕಾದ ಹದ ಬಂದ ಕೂಡಲೆ, ತುಪ್ಪ ಸವರಿ ಮೊದಲೆ ಸಿದ್ದಪಡಿಸಿದ್ದ ತಟ್ಟೆಯಲ್ಲಿ ಸುರಿಯಿರಿ, ಮತ್ತು ತಟ್ಟೆಯಲ್ಲಿ ಒಂದೆ ಸಮನಾಗುವಂತೆ ಹರಡಿ. ಸ್ವಲ್ಪ ತಣ್ಣಗಾಗುತ್ತಿರುವಂತೆ. ಚಾಕುವಿನಿಂದ ಅಡ್ಡ ಹಾಗು ಉದ್ದವಾಗಿ ಗೆರೆಗಳನ್ನು ಹಾಕಿ. ಪೂರ್ಣ ಆರಲು ಬಿಡಿ. ಒಂದು ಮೈಸೂರು ಪಾಕು ಪೀಸನ್ನು ತೆಗೆದು ನಿದಾನವಾಗಿ ಬಾಯಲ್ಲಿ ಇಡಿ ! ಆಹ್ ! ಚಿತ್ರಮೂಲ : http://t0.gstatic.com/images?q=tbn:ANd9GcRr5Ii27_uk-ivbC5EqxTra4pFSRynSjZLVXKNVa-l7LnTqWSY0