ಕಾಲ ಕೆಟ್ಟಿದೆಯೇ? ಈಗಿನ ಸಿನೆಮಾ ಹಾದಿ ತಪ್ಪುತ್ತಿದೆಯೇ?
ವೇಗವಾಗಿ ಕಾರು ಬಂದು ನಿಲ್ಲುತ್ತದೆ. ಅದರ ಬಾಗಿಲು ತೆರೆಯಿತು.
ಅದರಿಂದ ಕೆಳಗಿಳಿದವನ ಬೂಟು ಕಾಣಿಸುವುದು.ನಿದಾನಕ್ಕೆ ಬೆನ್ನು, ತಲೆ..
ಈಗ ಮುಖ ತಿರುಗಿಸುವನು.. ಹೀರೋ!!!..ಥಿಯೇಟರ್ ತುಂಬಾ ಚಪ್ಪಾಳೆ ವಿಷಲ್.
ಈಗಿನ ಸಿನೆಮಾದಲ್ಲಿ ಹೀರೋಯಿನ್ ಕಾಲಿಂದ ಸುರುವಾಗಿ ಎಲ್ಲೆಲ್ಲೋ
ಸುತ್ತಿ ಬಳಸುತ್ತಿರುತ್ತದೆ ಕ್ಯಾಮರ...ಹೀರೋ ಎಲ್ಲಿ?
ಒಂದೋ ಕಾಲಿಗೆ ಮುತ್ತು ಕೊಡುತ್ತಿರುತ್ತಾನೆ, ಇಲ್ಲಾ ಕೈ ಎರಡು ಅಗಲಿಸಿ ಆಕಾಶ ನೋಡುತ್ತಿರುತ್ತಾನೆ.
ಕಾಲ ಕೆಟ್ಟಿತು. ನಮ್ಮ ಸಂಸ್ಕೃತಿ ಎಂದಿರಾ...
ನಮ್ಮ ಹಳೇ ದೇವತಾ ಮಂತ್ರಗಳೂ ಸಹ ಹೀಗೆ ಸಾಗುತ್ತದೆ.ಕ್ಯಾಮರಾ ಕಣ್ಣಿಂದ ನೋಡುತ್ತಾಬನ್ನಿ...
ಮೊದಲಿಗೆ ಕಿರ್‍ಈಟ- ವಜ್ರ ಮಾಣಿಕ್ಯ ಕಟಕ ಕಿರ್‍ಈಟಾಯ್ಯೆ ನಮೋ ನಮಃ
ನಂತರ ತಿಲಕ - ಕಸ್ತೂರಿ ತಿಲಕೋಲ್ಲಾಸನಿಟಿಲಾಯ್ಯೆ ನಮೋ ನಮಃ
" ಹಣೆ- ಭಸ್ಮ ರೇಖಾಂಕಿತಲಸನ್ಮಸ್ತಕಾಯೈ ನಮೋ ನಮಃ
" ಕಣ್ಣು - ವಿಕಚಾಂಭೋರುಹದಳ ಲೋಚನಾಯೈ ನಮೋ ನಮಃ
" ಮೂಗು - ಶರಚಾಂಪೇಯ ಪುಷ್ಪಾಭ ನಾಸಿಕಾಯೈ ನಮೋ ನಮಃ
" ಕೆನ್ನೆ - ಮಣಿ ದರ್ಪಣ ಸಂಕಾಶ ಕಪೋಲಾಯೈ ನಮೋ ನಮಃ
" ಬಾಯಿ - ತಾಂಬೂಲಪೂರಿತ ಸ್ಮೇರವದನಾಯೈ ನಮೋ ನಮಃ
ಹೀಗೆ ಮುಂದುವರಿಯುತ್ತಾ....
ಸುವರ್ಣಕುಂಭಯುಗ್ಮಾಭಸುಕುಚಾಯೈ ನಮೋ ನಮಃ
...
...
ಬ್ರಹನ್ನಿತಂಬವಿಲಸಜ್ಜಘನಾಯೈ ನಮೋ ನಮಃ
...
...
ಭೂತೇಶಾಲಿಂಗನದ್ಭೂತಪುಳಕಾಂಗೈ ನಮೋ ನಮಃ
ಅನಂಗಜನಕಾಪಾಂಗವೀಕ್ಷಣಾಯೈ ನಮೊ ನಮಃ ...
ಲಲಿತಾಷ್ಟೋತ್ತರ ಶತನಾಮಾವಳಿಯ ಕೆಲ ಭಾಗವಿದು;
ಆ ಕಾಲದವರು ಈಗ ಇದ್ದು ಸಿನೆಮಾ ಮಾಡುತ್ತಿದ್ದರೆ...
ಯಾಕೆ ನಮಗೆ ಈಗಿನ ಹಾಡು,ಕುಣಿತಗಳಲ್ಲಿ ಅಶ್ಲೀಲತೆ ಕಾಣುತ್ತದೆ.
ಅದೇ ಅರ್ಥ ಬರುವ ಶ್ಲೋಕ ಹೇಳುವಾಗ ಭಕ್ತಿ ಇರುತ್ತದೆ.
ನರಸಿಂಹ ಹಿರಣ್ಯಕಶಿಪು ಹೊಟ್ಟೆ ಬಗೆಯುವಾಗ ಭಕ್ತಿಭಾವ;
ಭೀಮ ಬಕಾಸುರನನ್ನು,ದುಶ್ಶಾಸನನನ್ನು ಕೊಂದುದು ದೇವಸ್ಥಾನಗಳಲ್ಲಿ
ಪ್ರವಚನಗಳನ್ನು ನಡೆಸಿ ಭಕ್ತಿ ಪರವಶರಾಗಿ ಆಲಿಸುವೆವು.
ಸಿನೆಮಾಗಳಲ್ಲಿ ಮಚ್ಚು, ಲಾಂಗು ತೋರಿಸಿದರೆ ಕ್ರೌರ್ಯ ಎನ್ನುತ್ತೇವೆ.
Comments
ಉ: ಕಾಲ ಕೆಟ್ಟಿದೆಯೇ? ಈಗಿನ ಸಿನೆಮಾ ಹಾದಿ ತಪ್ಪುತ್ತಿದೆಯೇ?