ಸಾಫ್ಟ್ ವೇರ್ ಜಗತ್ತಿನಲ್ಲೊಂದು ಮರೆಯಬಾರದ ಗೆಳೆತನ!

ಸಾಫ್ಟ್ ವೇರ್ ಜಗತ್ತಿನಲ್ಲೊಂದು ಮರೆಯಬಾರದ ಗೆಳೆತನ!

ಚಿತ್ರದಲ್ಲಿರೊ ಈ  ಪುಣ್ಯಾತ್ಮರುಗಳು ಯಾರು ಅಂತ ತಿಳಿತಾ?
ಇಲ್ಲ ಅಲ್ವಾ?
ಒಂದೆ ಮಾತಲ್ಲಿ ಹೇಳಿದ್ರೆ "They are friends " ಎಡಬದಿಯಲ್ಲಿ ಕಾಣಿಸೊದು ಕೆನ್ ತಾಮ್ಸನ್ ಬಲಕ್ಕೆ ಡೆನಿಸ್ ರಿಚಿ.
'ಯಾರ್ರೀ ಇದು ರಿಚಿ-ಗಿಚಿ ಅಂತಿರಾ'? ಅಂದ್ರಾ..
ಇವರುಗಳು ಮತ್ಯಾರು ಅಲ್ಲಾ ಕಂಪ್ಯೂಟರ್ ಅನ್ನೊ ಕಾಲಿ ಡಬ್ಬಿಗೆ ಜೀವ ತುಂಬಿ, ಹಣೆಬರಹ ಬರೆದು, ನಮ್ಮಂತ ಸಾವ್ರಾರು ಜನ ದುಡಿತಾ ಇರೊ ಇವತ್ತಿನ ಸಾಫ್ಟ್ವೇರ್ ಫೀಲ್ಡ್ ಸೃಷ್ಟಿಸಿದ ಸೃಷ್ಟಿಕರ್ತರು.
C ಇವತ್ತಿಗೂ ಎಂಥಾ ಒಂದು ಪವರ್ ಫುಲ್ ಪ್ರೊಗ್ರಾಮಿಂಗ್ ಲಾಂಗ್ವೇಜ್ ಗೊತ್ತ?
ಈ ಪ್ರಶ್ನೆಗೆ ಉತ್ತರ ಬೇಕಿದ್ರೆ ಒಬ್ಬ ಸಿಸ್ಟಮ್ ಸಾಫ್ಟ್ವೇರ್ ಕರ್ತೃ ವನ್ನ ಪ್ರಶ್ನಿಸಿ ನೋಡಿ..
ಇಲ್ಲಾ ಅಂದ್ರೆ ಡಿವಯ್ಸ್ ಡ್ರೈವರ್ ಬರೆತಾ ಇರೊ ವ್ಯಕ್ತಿಯನ್ನ ಕೇಳಿ ನೋಡಿ.

ಇಂಥಹ C ಅನ್ನ ಸೃಷ್ಟಿ ಮಾಡಿದ್ದು ಈ ಗೆಳೆಯರೆ. ಇದೇ C ನಲ್ಲಿ ೧೯೬೯ ರಲ್ಲಿ 'ಯುನಿಕ್ಸ್' ಎಂಬ ಆಪರೇಟಿಂಗ್ ಸಿಸ್ಟಮ್ ಬರೆದು ಅದರ ಸೋರ್ಸ್ ಕೋಡನ್ನ ಉಚಿತವಾಗಿ ಹೊರಬಿಟ್ಟು ಯಾವುದೆ ಪ್ರತಿಫಲ ಬಯಸದೆ ಇದ್ದದ್ದೂ ಇವರುಗಳ ದೊಡ್ಡ ಮನಸ್ಸು ದೂರದೃಷ್ಟಿ.

ಬಿಲ್‍ಗೇಟ್ಸ್ ನಂತೆ ಅಂದು ಈ ಡೆನಿಸ್ ಅಜ್ಜ ಎಲ್ಲಾದ್ರು ಯುನಿಕ್ಸ್ ಅನ್ನ ಹಣಕ್ಕಾಗಿ ಮಾರಿದ್ರೆ ಅವ್ರು ಇವತ್ತು ಜಗತ್ತಿನ ನಂಬರ್ ಒನ್ ಶ್ರೀಮಂತರಾಗಿರ್ತಾ ಇದ್ರು, ಮಾತ್ರವಲ್ಲ ಈ ಲಿನಕ್ಸ್, ಸೊಲಾರಿಸ್, ಉಬುಂಟು, ತಗ್ಗುಂಟು ಎಲ್ಲಾ ಹುಟ್ಟಿಕೊಳ್ತನೆ ಇರ್ಲಿಲ್ಲ ಬಿಡಿ. ಎಲ್ಲಾ ಇರ್ಲಿ ಈ ಓಪನ್ ಸೋರ್ಸ್ ಅನ್ನೊ ಕ್ರೇಸೇ ನಮ್ಮ್ ಜನಕ್ಕೆ ಇರ್ತಾ ಇರ್ಲಿಲ್ಲ.

ಅಕ್ಟೊಬರ್ 5, 2011 ಸ್ಟೀವ್ ಜಾಬ್ಸ್ ನಮ್ಮನ್ನೆಲ್ಲ ಅಗಲಿದ ದಿನ. ನಮಗೆಲ್ಲ ಗೊತ್ತೇ ಇದೆ, ಅದೇ ತಿಂಗಳಲ್ಲಿ ಇಹಲೋಕ ತ್ಯಜಿಸಿದ ಇನ್ನೊಬ್ಬ ವ್ಯಕ್ತಿ ಈ ಡೆನಿಸ್ ಅಜ್ಜನ ಬಗ್ಗೆ ಯಾರಿಗಾದ್ರು ಗೊತ್ತಿತ್ತ? ಇಲ್ಲ ಅಲ್ವ, ಏಕೆ?

ಜಗತ್ತಿನ ಮರೆಯಲಾಗದ ಪ್ರೇಮ ಕತೆ 'ಟೈಟಾನಿಕ್' ಆದ್ರೆ ನನ್ನಪಾಲಿಗೆ ಜಗತ್ತಿನ ಮರೆಯಬಾರದ ಗೆಳೆತನ ಈ ಅಜ್ಜಂದಿರದ್ದು.
ನನಗಂತು ಇವರುಗಳು ರೋಲ್ ಮಾಡೆಲ್!
ನಿಮ್ಗೆ?

ಚಿತ್ರ ಕೃಪೆ.
http://en.wikipedia.org/wiki/File:Ken_n_dennis.jpg

File attachments
Rating
No votes yet