ಬಿ ೭೦, ನಿಜಕ್ಕೂ ಅಮಿತಾಬ್ ಬಚ್ಚನ್ ರಿಗೆ ಸಂದ ಅತ್ಯುತ್ತಮ ಕಾಣಿಕೆ ಎಂದರೆ, ಅತಿಶಯೋಕ್ತಿಯಲ್ಲ !
ಬೆಳಿಗ್ಯೆ :
ಮೊಬೈಲ್ ಡಯಾಬಿಟ್ಸ್ ಟೆಸ್ಟಿಂಗ್ ಯುನಿಟ್ ನ್ನು ಅಂಧೇರಿಯ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಹೋದಾಗ, ಬ್ರಿಟಿಶ್ ಡೆಪ್ಯುಟಿ ಹೈಕಮಿಷನರ್ ಹುಟ್ಟುಹಬ್ಬದ ಉಡುಗೊರೆಯಾಗಿ
ಈ ಕಲಾಪ್ರದರ್ಶನದಲ್ಲಿ ಬಚ್ಚನ್ ಮತ್ತು ಅವರ ಚಿತ್ರ ಜೀವನ ಬಿಂಬಿಸಿ ಜಗತ್ತಿನಾದ್ಯಂತವಿರುವ ಭಾರತದ ೭೦ ಕಲಾವಿದರು ರಚಿಸಿದ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ತನಗೆ ಶುಭಹಾರೈಸಿದ ಎಲ್ಲರಿಗೂ ಫೇಸ್‌ಬುಕ್‌ನಲ್ಲಿ ಬಚ್ಚನ್ ಕೃತಜ್ಞತೆ ಸಲ್ಲಿಸಿದ್ದಾರೆ. ಕೆಲವರು ಹಿರಿಯ ನಾಯಕ ನಟನ ಚಿತ್ರಗಳಿರುವ ಟಿ-ಶರ್ಟ್‌ಗಳನ್ನು ಧರಿಸಿದ್ದರು. ಟೀಶರ್ಟ್ ಧರಿಸಿದ್ದರು, ಜಗತ್ತಿನ ಎಲ್ಲಾ ಮೂಲೆಗಳಿಂದ ೭೦ ಮಂದಿ ಭಾರತಿಯ ಕಲಾವಿದರ ಕಲಾಪ್ರಕಾರಗಳು ಪ್ರದರ್ಶಿತಗೊಮ್ದವು.
ಮುಂಬೈನ ಪ್ರಭಾದೇವಿ ಉಪನಗರದ 'ನೆಹರೂಸೆಂಟರ್' ನಲ್ಲಿ, 'ಜಯಾ ಬಚ್ಚನ್' ಆಯೋಜಿಸಿದ 'ಬಿ.೭೦ ಕಲಾ ಪ್ರದರ್ಶನ', ಬಹಳ ಅರ್ಥಗರ್ಭಿತವಾಗಿತ್ತು ! ಇಲ್ಲಿ ದೇಶ ವಿದೇಶಗಳಿಂದ ಆಗಮಿಸಿದ ಹಲವಾರು ಹೆಸರಾಂತ ಕಲಾವಿದರು ಪಾಲ್ಗೊಂಡಿದ್ದರು. 'ದಿವಂಗತ ಧೀರುಭಾಯಿ ಅಂಬಾನಿಯವರ ಧರ್ಮ ಪತ್ನಿ, ಕೋಕಿಲಾ ಬೆನ್ ಅಂಬಾನಿ ಬ ೭೦ ಪ್ರದರ್ಶನವನ್ನು ಉದ್ಘಾಟಿಸಿದರು. ಕಲಾವಿದ ಸತೀಶ್ ಗುಪ್ತ, 'ಅನಂತ ಬೆಳಕು' ಎಂಬ ಹೆಸರಿನ ಶೀರ್ಷಿಕೆಯ (ಸಂಸ್ಕತದ ಹೆಸರಿನ) ೭೦ ಬುದ್ಧರ ವಿಗ್ರಹಗಳನ್ನು ತಮ್ಮ ಕ್ಯಾನ್ವಾಸ್ ನಲ್ಲಿ ತಂದಿದ್ದಾರೆ. 'ಅರ್ಜಾನ್ ಕಂಬಾಟ' ಎಂಬ ಮತ್ತೊಬ್ಬ ಕಲಾವಿದ (ಅಭಿಷೇಕ್ ಬಚ್ಚನ್ ರ ಪ್ರಿಯ ಕಲಾವಿದ) 'ಕೆಬಿಸಿ ಹಾಟ್ ಸೀಟ್' ನೆನಪಿಗೆ ತರುವ ಕಲಾಕೃತಿಯನ್ನೂ ಸಾದರ ಪಡಿಸಿದ್ದಾರೆ. ೨ ದಿನಗಳ ಹುಟ್ಟು ಹಬ್ಬದ ಹರ್ಷ ವಿನಿಮಯದ ಬಳಿಕ, ಯಾವ ಗಡಿಬಿಡಿಯೂ ಇಲ್ಲದೆ ಒಂದು ಕಡೆ ಕುಳಿತು, 'ಒಂದು ಕಪ್ ಚಹಾ ಸೇವಿಸುವ ಆಶೆ'ಯನ್ನು ಅಮಿತಾಬ್ ವ್ಯಕ್ತಪಡಿಸಿದರು. 'ಟೀನಾ ಮತ್ತು ಅನಿಲ್ ಅಂಬಾನಿ,' ಕೇತನ್ ಕದಂ, ರವರ 'ಟು ಒನ್ ಟು ಬಾರ್ ಅಂಡ್ ಗ್ರಿಲ್ ಹೋಟೆಲ್' ನಲ್ಲಿ ಔತಣಕೂಟವೇರ್ಪಡಿಸಿದ್ದರು ಪೀಯೂಷ್ ಗುಪ್ತ ಮತ್ತು ಜಯಾ ಬಚ್ಚನ್ ಹೊರತಂದ 'ಅಮಿತಾಬ್ ಬಚ್ಚನ್ ರವರ 'ಒಟ್ಟಾರೆ ಜೀವನದ ಸುಂದರ ಪುಸ್ತಕ'ದಲ್ಲಿ ವಿಶ್ವದ ಹಲವಾರು ದೇಶಗಳ ಭಾರತೀಯರ ಚಿತ್ರಕಲಾವಿದರ ಅಮೂಲ್ಯ ಚಿತ್ರ ಪ್ರಕಾರದಲ್ಲಿ ತಮ್ಮ ತಮ್ಮ ಕಲಾ ಕೃತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಬಿ ೭೦, ಸಮಾರಂಭದಲ್ಲಿ ಭಾಗವಹಿಸಿದ ಪ್ರಮುಖರು :
* ಕೋಕಿಲಾ ಬೆನ್ ಅಂಬಾನಿ
* ಅನಿಲ್, ಮತ್ತು ಟೀನಾ ಅಂಬಾನಿ
* ನೀರಜ ಮತ್ತು ಕುಮಾರ ಮಂಗಳಂ ಬಿರ್ಲಾ
* ಅಜಿತಾಬ್ ಬಚ್ಚನ್ ಮತ್ತು ನಮ್ರತಾ
* ಅಗಸ್ತ್ಯ ನಂದಾ (ಮೊಮ್ಮಗ)
* ಹರ್ಷ್ ಗೋಯಂಕಾ,
* ಸಮೀರ ಮಂಡಲ್,
* ಜೈ ದೀಪ್ ಮೆರ್ಹೂತ್ರ ಸೀಮಾ ಮತ್ತು ಮಲ್ಲಿಕಾ,
* ಶ್ವೇತಾ ನಂದಾ, ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್,
'ನೆಹರೂ ಸೆಂಟರ್' ನಲ್ಲಿ ನಾವು ಭೇಟಿ ಕೊಟ್ಟಿದ್ದು ಶನಿವಾರದಂದು ! ಅದೇ ಕೊನೆಯ ದಿನವಾಗಿತ್ತು; ಹಾಗು ಆದಿನದ ರಾತ್ರಿಯೇ ಚಿತ್ರಪ್ರದರ್ಶನ ಕೊನೆಗೊಂಡಿತ್ತು ಸಹಿತ ! ನಾವು ಮಧ್ಯಾನ್ಹ ೧೨-೩೦ ರ ಹೊಟ್ಟೆಗೆ ಅಲ್ಲಿಗೆ ಹೋದೆವು. ಮೇಲ್ಮಹಡಿಯಲ್ಲಿ ಆಯೋಜಿಸಿದ ಚಿತ್ರಪ್ರದರ್ಶನ ಅತಿ ಸುಂದರವಾಗಿತ್ತು. ಮೊದಲನೆಯ ಹಾಲ್ ನಲ್ಲಿ ವಿವಿಧ ಚಿತ್ರಗಳು ಮತ್ತು ಕಲಾ ಪ್ರಕಾರಗಳು ಇದ್ದವು. ಭಿತ್ತಿ ಚಿತ್ರಗಳು ಸುಂದರವಾಗಿ ಮುಡಿ ಬಂದಿದ್ದವು. ಎರಡನೆಯ ಕೊಠಡಿಯಲ್ಲಿ ಅಮಿತಾಬ್ ಬಚ್ಚನ್ ರ ಬಾಲಿವುಡ್ ಚಿತ್ರಗಳ ಫಲಕಗಳನ್ನು ಪ್ರದರ್ಶಿಸಲಾಗಿತ್ತು. ನನಗೆ ಅನ್ನಿಸಿದ್ದು ಇನ್ನೂ ದೊಡ್ಡಮಟ್ಟದಲ್ಲಿ ಒಳ್ಳೆಯ ಚಿತ್ರಗಳನ್ನೂ ಬಳಸಿ ಅವರ ವ್ಯಕ್ತಿತ್ವದ ಪರಿಚಯವನ್ನೂ ಮಾಡಬಹುದಿತ್ತೇನೋ ಅನ್ನಿಸಿತು. ಅಲ್ಲಿ 'ಜಯಾ'ರವರು ಸಂಗ್ರಹಿಸಿದ್ಸ ಪುಸ್ತಕ ಬಹಳ ಮಾಹಿತಿಗಳನ್ನೂ ಒಳಗೊಂಡಿತ್ತು. ಅದರ ಬೆಲೆ ೨ ಸಾವಿರ ರುಪಾಯಿಗಳು. 'ಹರಿವಂಶ ರಾಯ್ ಬಚ್ಚನ್' ರವರ 'ಮಧುಶಾಲಾ ಕವಿತೆಗಳ ಹಿಂದಿ ರೂಪಕ'ದ ಜೊತೆಗೆ ಇಂಗ್ಲಿಶ್ ನಲ್ಲಿ ಅನುವಾದಿಸಿದ 'ಪದ್ಯಗಳ ಮಾಲಿಕೆ'ಯನ್ನು ನಾವು ಗುರುತಿಸಿದೆವು. ಒಟ್ಟಿನಲ್ಲಿ ಅಲ್ಲಿ ಬಂದ ಎಲ್ಲ ವಯೋಮಿತಿಯ ನಾಗರಿಕರ ಬಾಯಿನಲ್ಲಿ ಬಚ್ಚನ್ ರ ಗುನಗಾನವನ್ನೇ ಕೇಳಿದೆವು. ಭಾರತೀಯರ ಪ್ರೀತಿ, ಆದರಗಳೆ 'ಅಮಿತಾಬ್ ರಿಗೆ ಶ್ರೀ ರಕ್ಷೆ' ಮತ್ತು ಪರಮ ಸನ್ಮಾನ ಕೂಡ !
ತಮ್ಮ ನಟನಕಲೆಯ ಎಲ್ಲಾ ಮಜಲುಗಳನ್ನೂ ಅತ್ಯಂತ ಸಕ್ಷಮದಿಂದ ನಿಭಾಯಿಸಿ ಆ ವಲಯದಲ್ಲಿ ತ್ರಿವಿಕ್ರಮನಂತೆ ಮೆರೆದ ಅಮಿತಾಬ್ ನಿಜವಾಗಿತು ಅನಂತ ಜ್ವಾಲೆಯೇ ಸರಿ ! (ಅಮಿತಾಬ್ ಎಂದರೆ ಸಂಸ್ಕ್ರ್ತುತದಲ್ಲಿ ಅನಂತ ಜ್ಯೋತಿ ಎಂದರ್ಥ)
'ಅಮಿತಾಬ್ ಬಚ್ಚನ್' ರಿಗೆ ಮತ್ತೊಬ್ಬ ಸರಿಸಾಟಿಎಂದರೆ 'ಅಮಿತಾಬ್ ಬಚ್ಚ ರೇ', ಎನ್ನುವುದು ಅತ್ಯಂತ ಸಮಂಜಸವಾಗಿದೆ !!
.
Rating