ಕಡಿಮೆ ಕಂದಾಚಾರವೇ?

ಕಡಿಮೆ ಕಂದಾಚಾರವೇ?

ಬರಹ

ಚುನಾವಣಾ ರಾಜ್ಯಗಳ ದಸರಾ ಹಬ್ಬದಲ್ಲಿ, ರಾಜಕರಣಿಗಳು ಸಕ್ರಿಯವಾಗಿ ಭಾಗ ವಹಿಸುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ. ಚುನಾವಣಾ ರಾಜಕೀಯದಲ್ಲಿ ಧರ್ಮದ ಬಳಕೆಯನ್ನು ತಡೆಯುವುದು ಉದ್ದೇಶವಂತೆ. ಧರ್ಮ ಎನ್ನುವುದ ಉದ್ದೇಶ, ಪಾರಮ್ಯ ಏನೇ ಇರಲಿ, ನಮ್ಮ ನೇತಾಗಣ ಎಂದಿನಿಮದಲೋ ಅದನ್ನೊಂದು ಯಶಸ್ವೀ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿದೆ. ನಮ್ಮ ಮಡಿವಂತ ಆಚಾರಶೀಲರು, ಮಟ್ಟಾದಾಕೆಯನ್ನು ಮೂರು ದಿನ ಮನೆಯಿಂದಾಚೆ ಇರಿಸುತ್ತಿದ್ದಂತೆ, ಜನಸೇವಕರನ್ನು ಒಂದಷ್ಟುದಿನ ಧರ್ಮರಾಜಕಾರಣದಿಂದ ಹೊರಗಿಟ್ಟರೆ, ಚುನಾವಣಾ ವಿಧಾನ ಪರಮಪಾವನವಾಗಿಹೋಗುವುದಿಲ್ಲ. ಅವರ ಭಾಷಣದ ಮೇಲೆ ನಿಗಾ ಇಟ್ಟು ಅಲ್ಲಲ್ಲೇ ಕತ್ತರಿಸುತ್ತಿದ್ದರೆ ಸಾಕು. ಔಷಧಿ ತೆಗೆದುಕೊಳ್ಳುವಾಗ ಕೋತಿ ಜ್ಞಾಪಿಸಿದಂತೆ, ಆಯೊಗವೇ ಮತದಾರರಿಗೆ ಧರ್ಮರಾಜಕಾರಣವನ್ನು ನೆನಪಿಸುತ್ತಿದೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet