ಸಹಸ್ರಮುಖಿ ಹತ್ತಿ : ಹತ್ತಿಯ ಹಲವು ಮುಖಗಳು- ಒಂದು ಸಂಕ್ಷಿಪ್ತ ವಿವರಣೆ :

ಸಹಸ್ರಮುಖಿ ಹತ್ತಿ : ಹತ್ತಿಯ ಹಲವು ಮುಖಗಳು- ಒಂದು ಸಂಕ್ಷಿಪ್ತ ವಿವರಣೆ :

ಬರಹ

ಹತ್ತಿ, ನಮ್ಮ ಭಾರತದ ಉದ್ಯೋಗ ಕ್ಷೇತ್ರದಲ್ಲಿ ಮಾಡಿರುವ 'ಛಾಪು ' ಅಮೋಘ ! ಇದು ನಮ್ಮ ಜನರ ಜೀವನವನ್ನು ರೂಪಿಸುವಲ್ಲಿ ಕೃಷಿ, ಮೊದಲನೆಯದಾದರೆ, ಇದು ಎರಡನೆಯದು. ಒಟ್ಟು ಹತ್ತಿಗೆ ಸಂಬಂಧಪಟ್ಟ ಉದ್ಯೋಗಗಳಲ್ಲಿ ನಿರತರಾಗಿರುವವರ ಸಂಖ್ಯೆ ೬೦ ಮಿಲಿಯನ್ ಎಂದು ಅಂದಾಜುಮಾಡಲಾಗಿದೆ. ಸುಮಾರು, ೮೫ ಲಕ್ಷ ಹೆಕ್ಟೇರ್ ಗಳಲ್ಲಿ ಹತ್ತಿ ಕೃಷಿಯನ್ನು ಮಾಡಲಾಗುತ್ತಿದೆ. ಅನಂತಾನಂತಕಾಲದಿಂದಲೂ ಮನುಷ್ಯನಿಗೆ ತೀರ ಬೇಕಾದ ಅಗತ್ಯಗಳಲ್ಲಿ ಮೊದಲು ಅನ್ನ, ಎರಡನೆಯದು ವಸ್ತ್ರ, ಮೂರನೆಯದು ಮನೆ. ಬಟ್ಟೆಯ ಅಗತ್ಯ ಪ್ರಾಚೀನ ಕಾಲದಲ್ಲಿ ಮೈಮುಚ್ಚುವ ಸಾಧನವಾಗಿದ್ದರೆ, ಆಧುನಿಕ ಕಾಲದಲ್ಲಿ ಅದರ ಪ್ರತಿರೂಪ ಬೇರೆಯೇ ಯಾಗಿದೆ. ಇಂದಿನ ಫ್ಯಾಶನ್ ಯುಗದಲ್ಲಿ ಅತ್ಯಂತ ಕಡಿಮೆ ವಸ್ತ್ರದ ಬಳಕೆ ಅನಿವಾರ್ಯವೇನೋ ಅನ್ನುವಷ್ಟು ಸಹಜ [ಅಸಹಜವಾದರೂ] ಸ್ಥಿತಿಯನ್ನು ನಾವು ಮುಟ್ಟಿದ್ದೇವೆ. ಇಲ್ಲೂ ನಾವು, "ಅಶ್ಲೀಲ ಪ್ರದರ್ಶನಗಳ ಪರಿಧಿ" ಯಿಂದ ಹೊರಬಂದು ಮಿಂಚಲೂ ಸಾಧ್ಯ !

ಹತ್ತಿಯ ಉಪಯೋಗಗಳು ನೂರಾರು. ದೇವರು ಕರುಣಿಸಿದ ಮತ್ತೊಂದು ಕಲ್ಪ ವೃಕ್ಷದ ಹೆಸರು- ಹತ್ತಿ ! ಹತ್ತಿ ಮೊದಲು ವೃಕ್ಷವಾಗಿಯೇ ಇತ್ತು. ಈಗಲೂ ಪೆರು, ಮೆಕ್ಸಿಕೋ ದೇಶಗಳಲ್ಲಿ ಹತ್ತಿ ಮರಗಳನ್ನು ನಾವು ಕಾಣಬಹುದು. ಅದನ್ನು ಸಂಸ್ಕರಿಸಿ ಅದರ ಎತ್ತರವನ್ನು ಅನುಸಂಧಾನಗಳಿಂದ ಈಗಿರುವಂತೆ ಪೊದೆಹತ್ತಿ, ಅಥವಾ ಗಿಡಹತ್ತಿಯ ರೂಪ ಕೊಡಲು ವಿಶ್ವದ ನೂರಾರು ಸಂಶೋಧಕರ ಅನವರತ ಪರಿಶ್ರಮದ ಫಲದಿಂದಾಗಿ ಈಗಿನ ರೂಪ-ಗುಣಗಳನ್ನು ಪಡೆದಿದೆ. ಅವಿನಾಶಿಯಾದ ಹತ್ತಿ, ತನ್ನ ಅಸ್ತಿತ್ವದಿಂದ ತನ್ನ ಸೋದರ 'ತೆಂಗಿನಂತೆ' "ಕಲ್ಪವೃಕ್ಷ" ದ ಪದವಿಯನ್ನು ಪಡೆದಿದೆ. ಪೆಟ್ರೋಲಿಯಮ್ ಮೂಲದಿಂದ ತಯಾರಾಗುತ್ತಿರುವ ಹಲವಾರು ಫೈಬರ್ ಗಳು ಮುಂದಿನ ನೂರುವರ್ಷಗಳಲ್ಲಿ ಪೆಟ್ರೋಲ್ ಮುಗಿಯುತ್ತಿದ್ದಂತೆ ಮಾಯವಾಗುತ್ತವೆ. ಆದರೆ ಹತ್ತಿಗೆ ಅದರ ಯಾವ ಭಯವೂ ಇಲ್ಲ. ವಿಶ್ವದ ಎಲ್ಲಾ ದೇಶಗಳಲ್ಲೂ ಹತ್ತಿ ಬೆಳೆಯಬಹುದು. ಕೆಲವು ದೇಶಗಳು ಇದಕ್ಕೆ ಅನುಕೂಲವಾದ ವಾತಾವರಣ ಹೊಂದಿವೆ. ಇನ್ನು ಕೆಲವು ಜಾಗಗಳಲ್ಲಿ ನಾವು ಬೆಳೆಸಲು ವಿಜ್ಞಾನ ತಂತ್ರಜ್ಞಾನಗಳ ಸಹಾಯದಿಂದ ಹೊಸ ವಿಧಾನಗಳನ್ನು ಬಳಸಿ ಕೃಷಿಮಾಡಬಹುದು.

ಕಟಾವ್ ಮಾಡಿದನಂತರ ಬೀಜಹತ್ತಿಯನ್ನು ಯಂತ್ರದ ಮುಖಾಂತರ ಜಿನ್ನಿಂಗ್ ಮಾಡಿ, ಅದರ ಬೀಜಗಳನ್ನು ಬೇರ್ಪಡಿಸಿ ಬೇಲ್ ಕಟ್ಟುತ್ತಾರೆ. ಭಾರತದ ಹತ್ತಿಬೇಲಿನ ತೂಕ ೧೭೦ ಕಿ. ಗ್ರಾಂ. ಅಮೆರಿಕದ ಹತ್ತಿ ಬೇಲಿನ ತೂಕ, ೪೮೦ ಪೌಂಡ್ ಗಳು.

ದೇಶ ಕೆ.ಜಿ/ಪೌಂ

೧. ಆಸ್ಟ್ರೇಲಿಯ-೨೨೭ ಕೆ.ಜಿ.[೫೦೦]
೨. ಕೊಲಂಬಿಯ-೨೩೩ ಕೆ. ಜಿ[೫೧೩]
೩. ಮೆಕ್ಸಿಕೊ- ೨೨೦ ಕೆ.ಜಿ[೪೮೪]
೪. ನೈಜೀರಿಯ-೧೮೫ ಕೆ.ಜಿ. [೪೦೭]
೫. ಯುಗ್ಯಾಂಡ-೧೮೨ ಕೆ.ಜಿ[೪೦೦]
೬. ಇಂಡಿಯ/ಪಾಕಿಸ್ಥಾನ -೧೭೦ ಕೆ.ಜಿ[೩೭೪]
೭. ದ. ಆಫ್ರಿಕ-೨೦೦ ಕೆ.ಜಿ [೪೪೦]
೮. ಈಜಿಪ್ಟ್ ೩೨೭ ಕೆ.ಜಿ[೭೨೦]
೯. ಸೂಡಾನ್-೧೯೧ ಕೆ.ಜಿ[೪೨೦]
೧೦. ಟಾಂಝನೀಯ- ೧೮೧ ಕೆ.ಜಿ[೪೦೦]
೧೧. ಅಮೆರಿಕ ಸಂ. ಸಂಸ್ಥಾನ- ೨೧೮ ಕೆ.ಜಿ-[೪೮೦]

೧೦೦ ಕೆ. ಜಿ. ಬೀಜ ಹತ್ತಿಯನ್ನು *(ಕಪಾಸ್) ಜಿನ್ನಿಂಗ್ ಮಾಡಿದ ಬಳಿಕ ನಮಗೆ ದೊರೆಯುವ **ಲಿಂಟ್ ಹತ್ತಿ, ೩೦ ರಿಂದ ೪೫ ಕಿಲೋಗ್ರಾಂ ಗಳು. ಉಳಿದ ೫೫ ರಿಂದ ೬೫ ಕಿಲೋಗ್ರಾಂ ಹತ್ತಿ ಬೀಜ ಸಿಗುತ್ತದೆ.

೪೮೦ ಪೌಂಡ್ 'ಲಿಂಟ್ ಹತ್ತಿ' ಯಿಂದ ನಾವು ಕೆಳಗೆ ಪಟ್ಟಿಮಾಡಿರುವ ಬಟ್ಟೆ-ಬರೆಗಳನ್ನು ಪಡೆಯಬಹುದು. ಇದರಿಂದ ನಮಗೆ ಸ್ವಲ್ಪ ಅಂದಾಜು ವಿವರ ತಿಳಿಯುತ್ತದೆ.

೧. ೨೧೫ ಜೊತೆ ಜೀನ್ಗಳು
೨. ೪೦೯ ಗಂಡಸರ ಸ್ಪೋರ್ಟ್ಸ್ ಶೈರ್ಟ್ಸ್ ಗಳು
೩. ೬೯೦ ಸ್ನಾನಮಾಡಿದ ಮೇಲೆ ಒರಸಿಕೊಳ್ಳಲು ಬಳಸುವ, ಟೆರ್ರಿ ಟವೆಲ್ಗಳು
೪. ೭೬೫ ಗಂಡಸರ ಶರ್ಟ್ಸ್ಗಳು
೫. ೧,೨೧೭ ಗಂಡಸರ ಟೀ ಶರ್ಟ್ಸ್ ಗಳು
೬. ೩,೦೮೫ ಮಗುವಿಗೆ ತೊಡಿಸುವ ಡಯಾಪರ್ಸ್
೭. ೪,೩೨೧ ಮಿಡ್ ಕಾಫ್ ಸಾಕ್ಸ್

ಹತ್ತಿಯ ಸ್ಥೂಲ ಉಪಯೋಗಗಳು :

ಮೇಲೆ ತಿಳಿಸಿದ ಡ್ರೆಸ್ ಗಳಲ್ಲದೆ, ಅಡುಗೆ ಎಣ್ಣೆ, ಬೋರ್ಡ್ಸ್, ಪೇಪರ್, ಬಯೋ ಗ್ಯಾಸ್, ಅಣಬೆಖಾದ್ಯಗಳು, ಪ್ಲಾಸ್ಟಿಕ್ಸ್, ಪಶು ಆಹಾರ, ಫೋಟೊ ಗ್ರಾಫಿಕ್ ಫಿಲ್ಮ್ಸ್ ಗಳು, ಅಬ್ಸಾರ್ಬೆಂಟ್ ಕಾಟನ್ಸ್ ( ಲೇಡಿಸ್ ವೇರ್ಸ್, ಅಂಡರ್ ಗಾರ್ಮೆಂಟ್ಸ್,) ವಿಧವಿಧವಾದ ಬ್ಲೆಂಡ್ಸ್, ಜಿಯೋ ಟೆಕ್ಸ್ ಟೈಲ್ಸ್ ನಲ್ಲಿ, ಮತ್ತೆ, ಹಲವಾರು ವಿಧದ ಬಳಕೆಗಳು.

ವಿವರ :

*ಕಪಾಸ್ ಎಂದರೆ, ಬೀಜಹತ್ತಿ.
** ಬೀಜಬಿಡಿಸಿದ ಹತ್ತಿ- ಲಿಂಟ್

-ಕಾಟನ್ ಫ್ಯಾಕ್ಟ್ಸ್, ( ಐ. ಸಿ. ಎ. ಸಿ)