ನಂಬಿದೆ ಜಗದಂಬೆ ನಿನ್ನನು

ನಂಬಿದೆ ಜಗದಂಬೆ ನಿನ್ನನು

ನಂಬಿದೆ ಜಗದಂಬೆ ನಿನ್ನನು

ನಂಬಿದೆ ಜಗದಂಬೆ ನಿನ್ನನು |
ಹೇ ಶಂಭು ಸತಿಯೇ |
ನಂಬಿದೆ ಜಗದಂಬೆ ನಿನ್ನನು ||||

ಹೇಳಲೆಂತು ನಿನ್ನ ಮಹಿಮೆಯ |
ಲೀಲೆಯಾಗಿ ಮಾಡಿದಂತ ಕಾರ್ಯ ಘನತೆಯ  ||
ಪ್ರಳಯ ಕಾಲದಲ್ಲಿ ಹರಿಯ ಕಣ್ಣಿನೊಳಗೆ ಸೇರಿಕೊಂಡು |
ಕಾಳಿಯಾಗಿ ಯಮಳರನ್ನು ತರಿದ ಶೌರ್ಯ ದೇವಿ ನೀನು ||೧||

ಮಹಿಷ ದಾನವೆಂದ್ರ ತಾಪವ |
ಸಹಿಸದಾದ ಘೋರ ತರದ ನಿನ್ನ ಕೋಪವ ||
ಅಹಮು ಮಮಗಳೆಂಬ ಭಾವ ಕಾಮ ಕ್ರೋಧ ಲೋಭ ಮೋಹ  |
ಧಹನ ಗೈವ ಮಹಿಮಳಾದ ನೀನು ಮರೆಸು ಜಗದ ನೋವ ||೨||

ಚಂಡ ಮುಂಡ ರೆಂಬ ಭಂಡರ |
ರುಂಡ ಮಾಲೆ ಧರಿಸಿ ನೀನು ಕೊಂದೆ ಪುಂಡರ ||
ಚಂಡಿಯಾಗಿ ಆರ್ತಮೊರೆಗೆ ಮೂಲರಾದ ದೈತ್ಯರನ್ನು |
ಕಂಡು ಬಡಿದು ನಾಶಮಾಡಿ ಸಾತ್ವಿಕರನು ಕಾಯುವವಳೇ ||೩||


                                                                                             - ಸದಾನಂದ   

File attachments
Rating
No votes yet