ಅಮ್ಮಾ.....

ಅಮ್ಮಾ.....

ಕವನ

jಮಾತು ಅರಿಯುವ‌ ಮುನ್ನವೇ

ತುಟಿಗಳ‌ ಮೇಲಿ0ದ‌ ಉದುರಿದ‌

ಸ್ವಾತಿಯ‌ ಮುತ್ತು‍- ಅಮ್ಮಾ

 ಮಗುವಿನ‌ ಮೊದಲ‌ ಮಾತು.....

 

ಮಾತು ಕಲಿತರೂ, ಅರಿತರೂ,

ಬಲಿತರೂ, ಬದಲಾಗದ‌

ಅಚ್ಚುಳಿಯುವ‌ ಅನನ್ಯ‌

ಮಮತೆಯ‌ ಕಲ್ಪತರು- ಅಮ್ಮಾ...

 

ಧರಿತ್ರಿಯ‌ ಕಾರ್ಮೋಡ‌ ಕವಿದರೂ,

ಮುಸ್ಸ0ಜೆಯ‌ ಶೂನ್ಯಭಾವ‌ ದ್ರಷ್ಟಿಸಿದರೂ,

ಜೋಡಿ ನೆರಳು ಕವಲಾದರೂ

ಅನ0ತದಲ್ಲೊ0ದು ಸ್ಪೂರ್ತಿಯ‌ ಸೆಲೆ- ಅಮ್ಮಾ....

 

ಬಲುದೂರ‌ ಬ0ದರೂ ಸೆಳೆಯುವ‌,

ವಿಶಾಲ‌ ಕುಬಾಹುವಿನ‌ ಸ್ಪರ್ಶವಾದರೂ

ಅಸು ನೀಡುವ‌

ತರ್ಕವು ಸೊಲೋಪ್ಪಿದರೂ ಅಕ್ಕರೆಯಿ0ದ‌

ಮುತ್ತಿಕ್ಕುವ‌ ಯಶೋಗಾಥೆಯ‌ ಜೀವನಾಡಿ- ಅಮ್ಮಾ 

ಬರಿಯ‌ ಮಾತಲ್ಲ‌, ಎನ್ನ‌ ಹಡೆದವ್ವ‌........!!!