ಪಾಲಿಸು ಭುವನೇಶ್ವರಿ
ಪಾಲಿಸು ಭುವನೇಶ್ವರಿ
ಪಾಲಿಸು ಭುವನೇಶ್ವರಿ | ಭುವನೇಶ್ವರೀ ||
ಪಾಲಿಸು ಭುವನೇಶ್ವರಿ ||ಪ||
ನಿರ್ಮಲ ಭಾವ ತರಂಗ ವಿಹಾರಿಣಿ
ಧ್ಯಾನ ಗಾನ ವಿಜ್ಞಾನ ಜ್ಞಾನಮಯೀ
ಸುಪ್ತ ಗುಪ್ತ ಆಂತರ್ಯ ನಿಗೂಡಿಣಿ
ಸರ್ವ ಕಾಲ ಋತ ಮಂತ್ರ ವಿಕಾಸಿನಿ
ದೀಪ್ತ ತೇಜ ತ್ರೈಭುವನ ಪ್ರಕಾಶಿನಿ
ಅಂತರಾತ್ಮ ಸುಖ ಬೋಧ ವಿಚಾರಿಣಿ
ಪಾಲಿಸು ಭುವನೇಶ್ವರಿ | ಭುವನೇಶ್ವರೀ ||
ಪಾಲಿಸು ಭುವನೇಶ್ವರಿ ||1||
ಕೋಟಿ ಕೋಟಿ ಜಗ ಜೀವನ್ಮಾತ್ರೇ
ವೇದಾಗಮ ಸ್ಮೃತಿ ಹೃದಯ ವಿಧಾತ್ರೇ
ವಿಶ್ವಂಬರೆ ಸೋಮಾರ್ಕ ಸುನೇತ್ರೇ
ಲೋಕ ಲೋಕ ಪರಿವಾರ ನಿಯಂತ್ರೇ
ತಾಳ ಮೇಳ ಶ್ರುತಿ ಮಂಜುಳ ಗಾತ್ರೇ
ಸ್ಮರಿಸಿದರೆ ಹೃನ್ಮನದಿ ವಿರಾಜಿತೇ
ಪಾಲಿಸು ಭುವನೇಶ್ವರಿ | ಭುವನೇಶ್ವರೀ ||
ಪಾಲಿಸು ಭುವನೇಶ್ವರಿ ||2||
ಕರ್ನಾಟಕ ಅಧಿ ದೇವತೆ ನೀನು
ಲೋಕ ಪ್ರಥಿತ ಸೌಭಾಗ್ಯಳು ನೀನು
ಧವಳಾಲಂಕೃತೆ ನಿತ್ಯ ಶಾಂತಳು
ಘನ ಗಂಭೀರಳು ದಿವ್ಯತೇಜಳು
ಭುವನಮಾನ್ಯಳು ಭುವನೇಶ್ವರಿಯು
ಕರುಣೆಯಲೆಮ್ಮನು ಪಾಲಿಸಲೀಗಳು ||
ಪಾಲಿಸು ಭುವನೇಶ್ವರಿ | ಭುವನೇಶ್ವರೀ ||
ಪಾಲಿಸು ಭುವನೇಶ್ವರಿ ||3||
- ಸದಾನಂದ