ವಾಯುಗಂಡ

ವಾಯುಗಂಡ

ಕವನ

 

ವಾತ ನಿರ್ವಾತದ ಸೂಕ್ಷ್ಮದ ಸುಳಿವು |

ನಿರ್ವಾತದಿ ಅನಿಲನ ಸೆಳೆತದ ಸೆಳವು |

ವಾಯುಪ್ರಕೋಪದ ಭೀತಿಯ ಭೂತದ |

ಸುಂಟರ ಗಾಳಿಯ ಹೊಡೆತವ ತಡೆಯುವ |

ಅನಲನ ಅನಿಲನ ಸ್ನೇಹದ ತಿಳಿವಿನ |

ಹವನದ ಧೂಮ್ರದ ಕಣಗಳ ಪ್ರಸರಣ |

ಪವನನ ಭ್ರಮಣದ ಬಲದಲಿ ಗ್ರಹಣ  |  

ಧರಣಿಯ ದಾರುಣ ಬವಣೆಯ ಹರಣ     ||

Comments