ಜಲಮಣಿ

ಜಲಮಣಿ

ಕವನ

 

ಮಹಿಯಲಿ ಹಿಮಮಣಿ ಕಡಲಲಿ ಜಲಮಣಿ |

ಬಿಸಿಲಿಗೆ ಏರುವ ನೀರಿನ ಪಸೆಮಣಿ  |

ಬಾನಲಿ ತೇಲುವ ಮೇಘದ ಮಳೆಹನಿ |

ಹನಿಗಳ ಹೊನಲಲಿ ಸಲಿಲದ ಹರುಷ |

ವರ್ಷದ ಧಾರೆಗೆ ಧರೆಯಲಿ ನದಿಗಳು |

ಬಿಸಿಲಿಗೆ ಕರಗುವ ಮಂಜಿನ ಜಿನುಗಲಿ |

ಧರಣಿಗೆ ಹಸಿರಿನ ಹೊದಿಕೆಯ ಹೊದಿಸಿ |

ಸಾಗರ ಸೇರುವ ನದಿಗಳ ಜಲಮಣಿ  ||     

Comments

Submitted by Maalu Fri, 10/19/2012 - 15:39

ಈ ನಿಮ್ಮ ಕವಿತೆಯೂ ಚೆನ್ನಿದೆ.
ಅಲ್ಲ್ಲಿ 'ಸಾಗರ ಸೇರಿತು ಜಲಮಣಿ...' ಎಂದು ಮುಕ್ತಾಯ
ಹಾಡಬಹುದಿತ್ತೇನೋ ಎನ್ನುವುದು ನನ್ನ ಅನಿಸಿಕೆ.