ಬುದ್ಧನಾದ ಪ್ರಭುದ್ಧನಾದ....

ಬುದ್ಧನಾದ ಪ್ರಭುದ್ಧನಾದ....

ಕವನ

 

ಮಧ್ಯ ರಾತ್ರಿಯಲ್ಲಿ 
ಅವನು ಎದ್ದು ಹೋದ
ಎಲ್ಲ ಬಿಟ್ಟು ಹೋದ
ಬುದ್ಧನಾದ ಪ್ರಭುದ್ಧನಾದ!
ಇವನು ಸ್ವಲ್ಪ ಬೇರೆ-
ಮಧ್ಯ ರಾತ್ರಿಯಲ್ಲೆ 
ಕೋಪಗೊಂಡು ನನ್ನಮೇಲೆ
ಏದ್ದು ಹೋದ, ಎಲ್ಲ ಬಿಟ್ಟು ಹೋದ 
ಮರಳಿ ಬಂದು
ಬುದ್ದನಾಗದೆ ಇವನು 
ನನ್ನ ಸುತ್ತ ಬದುಕಿಗೆ
ಬದ್ಧನಾದ!
-ಮಾಲು