ಚಿಂತೆಯೊಂದೆ, ಹೇಗೆ? ನನ್ನನು ನನ್ನಿಂದ, ದೋಚಲಾಗಿದೆ

ಚಿಂತೆಯೊಂದೆ, ಹೇಗೆ? ನನ್ನನು ನನ್ನಿಂದ, ದೋಚಲಾಗಿದೆ

ಕವನ

ನಿನ್ನ ಮಾಯೆ, ಒಂದು ಸೋಜಿಗ
ಕ್ಷಣವೂ ಬಿಡದೆ, ಸೆಳೆವ ಸೂಜಿಗ
 
ಪದೇ ಪದೇ, ಉಮ್ಮೇದಿಯಾ ಉಕ್ಕಿಸಿ
ನೆನಪಾಗುವೇ, ಮರೆತಾಗಲೇ, ಬಿಕ್ಕಿಸಿ
ಕಾಂತೆ ನಿನ್ನ ಕಾಂತಿ, ಕದಡಿ ಮನದ ಶಾಂತಿ 
ಚಿಂತೆಯೊಂದೆ, ಹೇಗೆ? ನನ್ನನು ನನ್ನಿಂದ, ದೋಚಲಾಗಿದೆ
 
ಜೇನು ನಿನ್ನ ಸನಿಹ, ಸಾಟಿ ಇಲ್ಲ ವಿನಹ
ಸೆಳೆದು ಪುನಹ ಪುನಹ, ಸವಿಯು ಈ ವ್ಯಾಮೋಹ
ನೂರು ಇರಲಿ ಕೆಲಸ, ಎಲ್ಲೂ ನಿನ್ನ ಭಾಸ
ಕಳವಳ ಒಂದೇ, ಹೇಗೆ ಸ್ವಂತಿಕೆ ನನ್ನಿಂದ, ಕಳವಾಗಿದೆ