ಕ್ಯಾಬೇಜ್ ಹಾಗೂ ಹೂಕೋಸು ಅತ್ಯಂತ ವಿಷಕಾರಿಯೆ?

ಕ್ಯಾಬೇಜ್ ಹಾಗೂ ಹೂಕೋಸು ಅತ್ಯಂತ ವಿಷಕಾರಿಯೆ?

Comments

Submitted by ಗಣೇಶ Sat, 10/20/2012 - 00:25

ಕರ್ನಾಟಕ ಹಾಗೂ ಕೇರಳ ಸರ್ಕಾರಗಳು ಎಂಡೋಸಲ್ಫಾನ್ ಬ್ಯಾನ್ ಮಾಡಿದೆ. ಆದರೆ ತಮಿಳುನಾಡು ಇತ್ಯಾದಿ ಕಡೆಗಳಿಂದ ಕಳ್ಳಹಾದಿಯಲ್ಲಿ ಬರುತ್ತಾವೋ ಏನೋ ಗೊತ್ತಿಲ್ಲ. ಪೂರ್ತಿಯಾಗಿ ಬ್ಯಾನ್ ಮಾಡಲು ನಮ್ಮ ದೇಶ ಇನ್ನೂ ಮೀನಮೇಷ ಎಣಿಸುತ್ತಿದೆ- http://www.udayavani.com/news/197662L15-%E0%B2%8E-%E0%B2%A1-%E0%B2%B8%E0%B2%B2-%E0%B2%AB-%E0%B2%A8-----%E0%B2%B9-%E0%B2%B8-%E0%B2%B8%E0%B2%AE-%E0%B2%A4--%E0%B2%B0%E0%B2%9A%E0%B2%A8-.html .
ನಾಲ್ಕು ವರ್ಷ ಹಿಂದಿನ ಘಟನೆ- ಬಸ್ಸಲ್ಲಿ ನನ್ನ ಬಳಿ ಒಬ್ಬ ಆಸ್ಮಾದಿಂದ ನರಳುತ್ತಾ ಕುಳಿತಿದ್ದ. ಆತನ ಪ್ರಕಾರ ಅದು ಕ್ಯಾಬೀಜ್,ಹೂಕೋಸು ಗಿಡಗಳಿಗೆ "ಔಷಧಿ ಸಿಂಪಡಿಸುವಾಗ" ಮಾತ್ರ ಬರುವುದಂತೆ. ಮತ್ಯಾಕೆ ಔಷಧಿ ಸಿಂಪಡಿಸುವಿರಿ? ಎಂದಾಗ- ಹುಳುಗಳಿಂದ ಬೆಳೆ ಪೂರ್ತಿ ನಾಶವಾಗುವುದು ಎಂದನು. ಅದೂ ಇದೂ ವಿಚಾರಿಸಿ, ಮನೆಗೆ ಉಪಯೋಗಿಸಲು ಎಷ್ಟು ಇಟ್ಟುಕೊಳ್ಳುವಿರಿ ಅಂದಾಗ ಅವರ ಮನೆಯವರು ಹೂಕೋಸಾಗಲೀ ಕ್ಯಾಬೇಜಾಗಲಿ ತಿನ್ನುವುದಿಲ್ಲ ಅಂದ!!
-ಗಣೇಶ.

Submitted by anand33 Sat, 10/20/2012 - 09:24

ಕೆಲವು ಪರಿಚಿತರು ತಾವು ಕ್ಯಾಬೇಜ್, ಹೂಕೋಸು ಬಳಸುವುದೇ ಇಲ್ಲ ಅವುಗಳನ್ನು ಹಾಳಾಗದಂತೆ ತಡೆಯಲು ಹಾಗೂ ಹೆಚ್ಚು ದಿನ ಬಾಳಿಕೆ ಬರಲು ವಿಷ ದ್ರಾವಣದಲ್ಲಿ ನೇರವಾಗಿ ಅದ್ದುತ್ತಾರೆ ಎಂದು ಹೇಳುತ್ತಾರೆ. ಎಲ್ಲರೂ ಹೀಗೆ ಮಾಡುತ್ತಾರೆಯೋ ಗೊತ್ತಿಲ್ಲ. ಬೆಳೆಗಳಿಗೆ ಕೀಟನಾಶಕ ಸಿಂಪಡಿಸುವುದರಿಂದ ಸ್ವಲ್ಪ ಕೀಟನಾಶಕದ ಅವಶೇಷ ಉಳಿಯಬಹುದು ಆದರೆ ಕೀಟನಾಶಕ ಸಿಂಪಡಿಸಿ ಕೊಯ್ಲು ಮಾಡುವಾಗ ಸ್ವಲ್ಪ ದಿನ ಕಳೆಯುವುದರಿಂದ ಅದರ ಪ್ರಭಾವ ಕಡಿಮೆಯಾಗಬಹುದು. ಆದರೆ ಕೊಯ್ಲು ಆದ ನಂತರವೂ ಹಾಳಾಗದಂತೆ ನೇರವಾಗಿ ವಿಷ ದ್ರಾವಣದಲ್ಲಿ ಅದ್ದಿ ತೆಗೆದರೆ ಅದರ ಅಂಶ ತರಕಾರಿಯಲ್ಲಿ ಹೆಚ್ಚು ಉಳಿಯಬಹುದು ಏಕೆಂದರೆ ಇದನ್ನು ಕೊಂಡವರು ಕೂಡಲೇ ಬಳಸುತ್ತಾರೆ. ನೇರವಾಗಿ ವಿಷದಲ್ಲಿ ಅದ್ದಿದರೆ ಅದನ್ನು ಕ್ಯಾಬೇಜ್, ಹೂಕೊಸಿನಂಥ ತರಕಾರಿ ಒಳಗೆ ಎಳೆದುಕೊಳ್ಳುವ ಸಂಭವವೂ ಇದೆ. ಕೆಲವರು ಟೊಮೇಟೊವಿಗೂ ವಿಪರೀತ ಕೀಟನಾಶಕ ಬಳಸುತ್ತಾರೆ, ಹೀಗಾಗಿ ಅದನ್ನು ಬಳಸುವುದನ್ನು ಬಿಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಸಾಧ್ಯವಾದಷ್ಟೂ ಕಡಿಮೆ ವಿಷ ಕೀಟನಾಶಕ ಸಿಂಪಡನೆ ಮಾಡುವ ತರಕಾರಿ ಬಳಸುವುದು ಉತ್ತಮ.

Submitted by partha1059 Sat, 10/20/2012 - 12:20

ಹಿ೦ದೊಮ್ಮೆ ಗೆಳೆಯರೊಬ್ಬರು ಅಂದಿದ್ದರು, ತರಕಾರಿ ಕೊಳ್ಳುವಾಗ ತುಂಬ ಚೆನ್ನಾಗಿ ಕಾಣುವುದು ಕೊಳ್ಳಬೇಡಿ ಏಕೆಂದರೆ ಅದರಲ್ಲಿ ಔಷದ ಜಾಸ್ತಿ ಇರುತ್ತದೆ ಎಂದು, ಹಾಗೆ ಅಲ್ಪ ಸ್ವಲ್ಪ ಹುಳು ತಿಂದ ಸೊಪ್ಪು ಇಂತವೆ ಇದ್ದರೆ ಉತ್ತಮ ಏಕೆಂದರೆ ಹುಳು ತಿಂದಿದೆ ಅಂದರೆ ಔಷದಿ ಕಡಿಮೆ/ಇಲ್ಲ ಎಂದು ಅರ್ಥ, ಹುಳುತಿಂದ ಎಲೆಯನ್ನು ಕಿತ್ತು ಸ್ವಚ್ಚ ಗೊಳಿಸಿ ತಿನ್ನುವುದೆ ಉತ್ತಮ ಮಾರ್ಗ ಎಂದು,
ಮತ್ತು ಒಂದು ಅಭಿಪ್ರಾಯ ಕೇಳಿ
ಸಂತೆಯಲ್ಲಿ ಮಾರುವ ಜೂಸ್ ಕುಡಿದರೆ ಪರವಾಗಿಲ್ಲ , ದೂಳು ಇರುತ್ತದೆ, ಅಬ್ಬಬ್ಬ ಎಂದರೆ ಅದರಿಂದ ಒಂದೆರಡು ದಿನ ಹೊಟ್ಟೆ ಕೆಡಬಹುದು ಲೂಸ್ ಮೋಷನ್ ಆಗಬಹುದು
ಆದರೆ ಪ್ಯಾಕ್ಡ್ ಡ್ರಿಂಕ್ಸ್, ಕೋಲಾಗಳು, ಥಮ್ಸ್ ಅಪ್ ಇಂತವೆಲ್ಲ ಪೂರ ಅಪಾಯಕಾರಿ, ದೀರ್ಘ ಪರಿಣಾಮ ಬೀರುವುದು

Submitted by keshavHSK Mon, 10/22/2012 - 13:36

In reply to by partha1059

ಇದಕ್ಕೆಲ್ಲಾ ಒಂದೇ ಪರಿಹಾರ ನಮಗೆ ಬೇಕಾದಶ್ಟು ತರಕಾರಿಯನ್ನು ನಾವೇ ಬೆಳೆದುಕೊಳ್ಳುವುದು.. ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲವೇ......

ಬರಹ

ಕ್ಯಾಬೇಜ್ ಹಾಗೂ ಹೂಕೋಸು ತರಕಾರಿಗಳನ್ನು ರೈತರಿಂದ ಕೊಂಡು ದೂರದ ನಗರಗಳ ಮಾರುಕಟ್ಟೆಗೆ ತರುವವರು ಅದು ಕೊಳೆಯದಂತೆ ಮಾಡಲು ಅವುಗಳನ್ನು ಕೀಟನಾಶಕದ ದ್ರಾವಣದಲ್ಲಿ ಅದ್ದುತ್ತಾರೆ, ಹೀಗಾಗಿ ಈ ತರಕಾರಿಗಳನ್ನು ತಿನ್ನುವುದು ಅತ್ಯಂತ ಅಪಾಯಕಾರಿ ಎಂದು ಕೆಲವರು ಹೇಳುತ್ತಾರೆ. ಇದು ನಿಜವೇ, ನಿಜವಾದರೆ ಅವರು ಅದ್ದುವ ಕೀಟನಾಶಕ ದ್ರಾವಣ ಯಾವುದು, ಅದು ಎಷ್ಟು ವಿಷಕಾರಿ ಎಂಬ ಬಗ್ಗೆ ಯಾರಾದರೂ ತಿಳಿದವರು ಇದ್ದರೆ ಮಾಹಿತಿ ನೀಡಬೇಕಾಗಿದೆ. ಒಂದು ವೇಳೆ ಅವುಗಳನ್ನು ಕೀಟನಾಶಕ ದ್ರಾವಣದಲ್ಲಿ ಅದ್ದುವುದು ನಿಜವೇ ಆಗಿದ್ದರೆ ಇದನ್ನು ಸರಕಾರದ ಸಂಬಂಧಪಟ್ಟ ಇಲಾಖೆಯವರು ತಡೆಯಬೇಕಾದ ಅಗತ್ಯ ಇದೆ. ಇಲ್ಲದಿದ್ದರೆ ಟಿವಿ 9 ರಲ್ಲಿ ಪ್ರಸಾರವಾದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳದಲ್ಲಿ ಗೇರು ತೋಟಗಳಿಗೆ ಎಂಡೋಸಲ್ಫಾನ್ ಸಿಂಪಡಿಸಿದಾಗ ಉಂಟಾದಂತೆ ಅಂಗವೈಕಲ್ಯ, ಬುದ್ಧಿಮಾಂದ್ಯತೆ, ಕ್ಯಾನ್ಸರ್ ಇತ್ಯಾದಿ ಘೋರ ಪರಿಣಾಮಗಳು ಉಂಟಾಗುವ ಸಂಭವ ಇದೆ. ಆಹಾರವಾಗಿ ಉಪಯೋಗಿಸುವ ತರಕಾರಿಗಳನ್ನು ನೇರವಾಗಿ ಕೀಟನಾಶಕದಲ್ಲಿ ಅದ್ದುವ ಕ್ರಮವೇನಾದರೂ ಇದ್ದರೆ ಅದನ್ನು ಟಿವಿ ವಾಹಿನಿಗಳು ಕುಟುಕು ಕಾರ್ಯಾಚರಣೆ ಮೂಲಕ ಬಯಲಿಗೆ ಎಳೆದು ಜನತೆಯ ಅರೋಗ್ಯ ರಕ್ಷಿಸಲು ಮುಂದಾಗಬೇಕಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet