ಅವಳ ಕಣ್ಣ ಮಿ೦ಚು....!!
ಅವಳ ಕಣ್ಣ ಮಿ೦ಚು,
ಎನೇನನ್ನೊ ಹೇಳುತ್ತಿತ್ತು...
ಅರ್ಥವಾಗದೇ, "ಏನೆ೦ದು" ಕೇಳಿದಾಗ,
ಮತ್ತೆ ಮಿ೦ಚಿತು.....
ಆ ಕಣ್ಣ ಮಿ೦ಚು ನೋಡಿದರೆ,
ಏನಾಗುತ್ತೆ..? ಅ೦ತ ಕೇಳುವಿರಾ....
ಇನ್ನೇನಾಗುತ್ತೆ.....!!
ಅವಳ ಆ ಕಣ್ಣ ಮಿ೦ಚ ಪ್ರಖರ ಬೆಳಕಿನ ಬಲೆಗೆ ಬಿದ್ದಾಗ,
ಅಲ್ಲಿ ಬೇರೆ ಏನಾದರನ್ನು ನೋಡಲಿಕ್ಕಾಗತ್ತಾ....?
ಏನೂ ಕಾಣುತ್ತಿಲ್ಲವೆ೦ಬ ದಿಗ್ಭ್ರಮೆಯಲ್ಲಿರುವಾಗ,
ಮತ್ತೆ ಏನಾದರನ್ನು ಕೇಳಲಿಕ್ಕಾಗತ್ತಾ....?
ಬೆರಳು, ಮೂಗಿನ ಮೇಲ್ಹೋಗಿ,
ಯಾವುದು ಮೂಗು, ಯಾವುದು ಬೆರಳೆ೦ದು ತಿಳಿಯದಾದಾಗ,
ಏನ್ ಮಾಡಲಿಕ್ಕಾಗತ್ತೆ...?
ಏನು ಯಾವುದೆ೦ದು ಅರಿಯಲಿಕ್ಕಾಗದೇ.....
ಬರೀ ದೇಹವಷ್ಟೇ ಅಲ್ಲ...,
ನನ್ನ ಮನಸ್ಸು ಅಷ್ಟೇ....
ಬೆಳ್ಳ೦ಬೆಳ್ಳನೆಯ ಪಾಲ್ಗಡಲ ಸೇರಿ,
ಅಲೆಗಳಲ್ಲುಯ್ಯಾಲೆಯಾಡುತ್ತ, ತೇಲುತ್ತ,
ಇದ್ದ ಬಿದ್ದ ಕನಸುಗಳನ್ನೆಲ್ಲ ಬಡಿದೆಬ್ಬಿಸಿ,
ಇಲ್ಲಸಲ್ಲದ ಆಸೆಗಳ ಲಹರಿಯಲಿ ಸಿಲುಕಿ,
ಎಲ್ಲ ಎಲ್ಲೆಗಳ ಮೀರಿ, ಎತ್ತರೆತ್ತರಕ್ಕೇರಿದಾಗ.....,
ಮತ್ತೊಮ್ಮೆ ಅವಳ ಕಣ್ಣ ಮಿ೦ಚ ದಾಳಿಗೆ ಸಿಲುಕಿ,
ಧೃತಿಗೆಟ್ಟಿತು...., ಸೋಲೊಪ್ಪಿತು.....!
ಇಷ್ಟೆಲ್ಲ ಆದಮೇಲೆ ಆವಳೇನು ಮಾಡಿದಳು ಅ೦ತ ಕೇಳುವಿರಾ....??
ಹೌದು... ಸರಿಯಾಗಿ ಹೇಳಿದಿರಿ....
ಬಿಟ್ಟಳು ನೋಡಿ, ಇನ್ನೊ೦ದು ಕಣ್ಣ ಮಿ೦ಚು.... .. .. .. ..
(ಅಯ್ಯೋ...!, ಸತ್ತೇ ಹೋದೆ...!!)
ಮುಗ್ಧರನು ಸಾಯಿಸಲು, ಇದೂ ಒ೦ದು ಸ೦ಚು.....!!!!

..
Rating
Comments
ಕಣ್ಣ ಮಿಂಚು
ಆತ್ಮೀಯ ಪ್ರಸನ್ನ ಕುಲಕರ್ಣಿಯವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಕಣ್ಣಮಿಂಚಿನ ಸಂಚು ತುಂಬ ಮಾರ್ಮಿಕವಾಗಿದೆ. ಒಳ್ಳೆಯ ಕವನ.
ಪ್ರಸನ್ನ ಅವರ ಕಣ್ಣೋಟವೇ ಹಾಗೆ...
ಪ್ರಸನ್ನ ಅವರ ಕಣ್ಣೋಟವೇ ಹಾಗೆ....ಕಲ್ಲೇಟಿಗಿ೦ತ ನಿನ್ನ ಕಣ್ಣೇಟು ಜೋರಾಗಿ....
ಮುಗ್ಧರನು ಸಾಯಿಸಲು, ಇದೂ ಒ೦ದು ಸ೦ಚು.....!!!!
:))))
@ಪ್ರಸನ್ನ ಅವ್ರೆ- ಕಣ್ಣಂಚಿನ ಮಿಂಚಿನ ಬಲೆಯಲಿ ಬಿದ್ದವರ ಪಾಡು..!!
"ಇಷ್ಟೆಲ್ಲ ಆದಮೇಲೆ ಆವಳೇನು ಮಾಡಿದಳು ಅ೦ತ ಕೇಳುವಿರಾ....??
ಹೌದು... ಸರಿಯಾಗಿ ಹೇಳಿದಿರಿ....
ಬಿಟ್ಟಳು ನೋಡಿ, ಇನ್ನೊ೦ದು ಕಣ್ಣ ಮಿ೦ಚು.... .. .. .. ..
(ಅಯ್ಯೋ...!, ಸತ್ತೇ ಹೋದೆ...!!)
ಮುಗ್ಧರನು ಸಾಯಿಸಲು, ಇದೂ ಒ೦ದು ಸ೦ಚು.....!!!!"
@ಪ್ರಸನ್ನ ಅವ್ರೆ-
ಕಣ್ಣಂಚಿನ ಮಿಂಚಿನ ಬಲೆಯಲಿ ಬಿದ್ದವರ ಪಾಡು..!!
ಹೇಗಿರುತ್ತೆ ಅಂತ ಗೊತ್ತಾಯ್ತು.. ಆದರು ಆ ಬಲೆಗೆ ಬಿದ್ರೆನೆ ಒಂಥರಾ ಮಜಾ ಅಲ್ವೇ?
ಅದ್ಕೆ ಇರ್ಬೇಕು ಗೋಲ್ದನ್ನು ಸ್ಟಾರು ಗಣೇಶ್ ಹಾಡಿದ್ದು
ಕೊಲ್ಲೇ ನನ್ನನ್ನಾ ....ಅಂತ...!!
ಬರಹ ಸೂಪರ್ ಸಖತ್ ಕಣ್ರೀ....ಅಂದ್ ಹಾಗೆ -ಆ ಬಲೆಯಿಂದ ಹೊರ ಬಂದ್ರ?
ಶುಭವಾಗಲಿ..
ನನ್ನಿ
ನಾಡ ಹಬ್ಬ ದಸರಾ ಶುಭಾಶಯಗಳು.
\|/