ಶುಂಭಾಸುರನ ಸಂಹಾರ

ಶುಂಭಾಸುರನ ಸಂಹಾರ

ಶುಂಭಾಸುರನ ಸಂಹಾರ

ಬಂದಳು ಬ್ರಹ್ಮನ ಸತಿ ಭಾರತಿಯು
ನಿಂದಳು ಹರಿ ವಲ್ಲಭೆ ವೈಷ್ಣವಿಯು
ಶಂಕರನರಸಿಯು ಶಿವರುದ್ರಾಣಿ
ಶಚಿಪತಿಯಂಶದ ಆ ಇಂದ್ರಾಣಿ
ಸುರಸೇನಾಪತಿ ತೆರ ಕೌಮಾರಿ
ಉಗ್ರ ಸ್ವರೂಪಳು ಕಾಳಿ ವಾರಾಹಿ
ನರಸಿಂಹಾಕೃತಿ ತಳೆದಳು ದೇವಿ
ದಾನವರನು ತರಿದಳು ತಾ ತೀವಿ

ಕೋಪವ ಧರಿಸಿ ಸಿಂಹವನೇರಿ ಪ್ರಳಯ ಕಾಲದಂತಾರ್ಭಟಿಸಿ
ಚಾಪವ ಮೊಳಗಿಸಿ ಶುಂಭನ ಕೆರಳಿಸಿ ಕಾಳಗಕೆಳೆದಳು ರೌರವಿಸಿ ||
ಬಲು ಭೀಕರ ಕಾದಾಟವು ನಡೆಯಿತು ಲೋಕ ಲೋಕಗಳು ತಲ್ಲಣಿಸಿ
ಗೆಲುವಿನ ಬಗೆ ಕಾಣದೆ ದಾನವನೊಳು ಭಯವಂಕುರಿಸಿತು ಕಳವಳಿಸಿ ||

ಜಯಜಯವೆನ್ನುತ ದೇವತೆಗಳು ಮಂಗಳವನು ಹಾಡಿದರು |
ಭಯ ಕಳೆಯಿತು ಶುಭ ಗೆಲುವಾಯಿತು ಎಂದಾರತಿ ಬೆಳಗಿದರು ||
ಕೌಶಿಕಿ ಚಂಡಿಕೆ ಬ್ರಹ್ಮಾಣಿಗೆ ವೈಷ್ಣವಿಯಡಿಗೆರಗಿದರು |
ಶಂಕರಿ ಐಂದ್ರಾಣಿಗೆ ಕೌಮಾರಿಗೆ ಆರತಿ ಬೆಳಗಿದರು ||
ನರಸಿಂಹಳಿಗೆ ವಾರಾಹಿಗೆ ಮತ್ತೆರಗುತ ಬೇಡಿದರು |
ಪರಿಪರಿ ಸ್ತುತಿಗಳ ಮಾಡಿ ನಿರಂತರ ಯಶವನು ಕೋರಿದರು ||  

 

                                                  - ಸದಾನಂದ

Rating
No votes yet