ಹನಿ ಹನಿಗಳು...

ಹನಿ ಹನಿಗಳು...

ಕವನ

 

ಇವನ ಬಳಿ
ಮಿಂಚುವ ಕಾರಿದೆ
ಹೆಂಚಿನ ಸೂರಿದೆ
ತೋಳಲಿ ಬಲವಿದೆ
ಹೊಲವಿದೆ, ಹತ್ತು ನೆಲವಿದೆ;
ಇವನು ಅಪ್ಪನು ಹುಡುಕಿದ ವರ!
ಆದರೆ ಇವನಲ್ಲಿ
ನನಗೆ ಬೇಕಿಹ ಒಲವಿಗೆ ಬರ!
******
ದಶರಥ ರಾಮ
ಬಿಲ್ಲನು ಮುರಿದು
ಸೀತಾಮಾತೆಯ  ಪಡೆದ;
ಶಾಲೆಯ ಒಳಗೆ
ಗೇಲಿಯ ಮಾಡಿ
ನನ್ನನು ಅಳಿಸಿದ
ಪೋಲಿ ಹುಡುಗನ
ಹಲ್ಲನು ಮುರಿದು
ನಾಯಕನಾಗಿ ಇವನು
ನನ್ನಯ ಕೈಯ್ಯನು ಹಿಡಿದ!
-ಮಾಲು 
ಹನಿ ಹನಿಗಳು...

Comments

Submitted by venkatb83 Mon, 10/22/2012 - 18:41

ಮಾಲು ಅವ್ರೆ

ಸಕತ್ -ಸೂಪರ್ ಕಣ್ರೀ...
ಪುರಾಣ -ಪ್ರಸ್ತುತ ದಿನಗಳ ಮಹಿಳೆಯ ಒಳ ಮನಸ್ಸಿನ ಚಿತ್ರಣ ಸೂಪರ್ ..

ಮೊದಲನೆಯದು ವ್ಯಥೆ ತಂದರೆ ಎರಡನೆಯದು ಮೊಗದಲಿ :()))) ತಂತು....

ಶುಭವಾಗಲಿ

ನಾಡ ಹಬ್ಬ ದಸರಾದ ಶುಭಾಶಯಗಳು..

\|