ಚುಟುಕುಗಳು 17
ಸಣ್ಣ ಸತ್ಯಗಳೆ ಬೃಹತ್
ಸತ್ಯದ ಬೀಜಗಳು
ದೊಡ್ಡ ಆಲವೂ ಕೂಡ
ಮೂಲದಲೊಂದು ಸಣ್ಣ ಬೀಜ
***
ನಂಬಿಕೆಯ ಆಧಾರದ
ಮೇಲೆಯೆ
ಕಳೆದು ಹೋಗುತ್ತದೆ
ಬದುಕು
ನಂಬಿಕೆಯೆ ಜೀವನದ
ಊರುಗೋಲು
***
ಬೌಲಿಂಗ್ ದಾಖಲೆಯ
ಸರದಾರ
ಮುತ್ತಯ್ಯ ಮುರಳೀಧರ
ಕ್ರೀಡೆಗೆ ವಿದಾಯ ಹೇಳಿ
ಸೇರಿದ ಇತಿಹಾಸದ ಪುಟ
ಒಬ್ಬರೂ ಅಷ್ಟಾಗಿ
ನೆನೆಯಲಿಲ್ಲ ಗೌರವಿಸಲಿಲ್ಲ
ಇತಿಹಾಸಕ್ಕೆ ಅರ್ಜುನ ಪ್ರಸ್ತುತ
ಕರ್ಣನಲ್ಲ
***
Rating
Comments
ಚುಟುಕುಗಳು
ಹೆಚ್. ಎ. ಪಾಟೀಲರೇ, ವಂದನೆಗಳು. ಚುಟುಕು ತುಂಬ ಗಹನ ವಸ್ತು ವಿಷಯಗಳಿಂದ ಕೂಡಿ, ಸತ್ಯದ ವಿಶಾಲತೆ, ನಂಬಿಕೆಯ ಮಂತ್ರದ ಮಹತ್ವದ, ಹಾಗೂ ಮುತ್ತಯ್ಯ ಮುರಳೀಧರ ರವರ ಸಾಧನೆಯನ್ನು ಅಷ್ಟಾಗಿ ಮೀಡಿಯಾಆಗಲಿ, ಇತರೆ ಮಾಧ್ಯಮವಾಗಲಿ ಪರಿಗಣಿಸದ ವಿಷಾದ, ತಮ್ಮಲ್ಲಿ ಹುದುಗಿರುವ ಮಾನವೀಯ ಕಾಳಜಿಯನ್ನು ಹೊರಹಾಕಿದೆ. ಚುಟುಕುಗಳು ಮೆಚ್ಚುವಂತಿವೆ.
In reply to ಚುಟುಕುಗಳು by lpitnal@gmail.com
@ಹಿರಿಯರೇ ಮೊದಲ ಎರಡು ಸಾಲುಗಳು ಮೂರನೆಯದಕ್ಕೆ ಲಿಂಕ್ ಇರುವಂತಿದೆ...!
ಹಿರಿಯರೇ
ಮೊದಲ ಎರಡು ಸಾಲುಗಳು ಮೂರನೆಯದಕ್ಕೆ ಲಿಂಕ್ ಇರುವಂತಿದೆ...!
ಕ್ರಿಕೆಟ್ ಬಗ್ಗೆ ಅಷ್ಟಾಗಿ ಗೊತ್ತಿಲ್ಲ..ನಾ ಅದನ್ನು ಯಾವತ್ತು ಇಷ್ಟ ಪಟಿಲ್ಲ...!!
ಆದ್ರೆ ದಾಖಲೆಯ ವೀರನ್ನ ಜನ ಆ ಆತಿ ಮರೆತದ್ದು ಅಚ್ಚರಿ,...!!
ಶುಭವಾಗಲಿ..
********ನಾಡ ಹಬ್ಬ ದಸರಾ ಶುಭಾಶಯಗಳು********
\|
In reply to @ಹಿರಿಯರೇ ಮೊದಲ ಎರಡು ಸಾಲುಗಳು ಮೂರನೆಯದಕ್ಕೆ ಲಿಂಕ್ ಇರುವಂತಿದೆ...! by venkatb83
ವೆಂಕಟೇಶ ರವರಿಗೆ ವಂದನೆಗಳು
ವೆಂಕಟೇಶ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ನನಗೆ ಹರ್ಷ ತಂದಿದೆ, ನೀವು ಬರಹ ಯಾವುದೇ ಇರಲಿ ಅದರ ಒಳಹೊಕ್ಕು ಗ್ರಹಿಸುವ ಮತ್ತು ಪ್ರತಿಕ್ರಿಯಿಸುವ ಕ್ರಮ ನಿಮ್ಮನ್ನು ಬೇರೆಯದೆ ಸ್ಥಾನದಲ್ಲಿ ನಿಲ್ಲಿಸುವಂತೆ ಮಾಡುತ್ತದೆ, ನಿಮ್ಮ ಈ ತಾದ್ಯಾತ್ಮತೆ ನನಗೆ ಇಷ್ಟ ಎಂದು ಮಾತ್ರ ಹೇಳಬಲ್ಲೆ, ಧನ್ಯವಾದಗಳು.
In reply to ಚುಟುಕುಗಳು by lpitnal@gmail.com
ಲಕ್ಷ್ಮಿಕಾಂತ ಇಟ್ನಾಳ ರವರಿಗೆ
ಲಕ್ಷ್ಮಿಕಾಂತ ಇಟ್ನಾಳ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ಚುಟುಕುಗಳ ಬಗೆಗಿನ ತಮ್ಮ ಗ್ರಹಿಕೆ ಮತ್ತು ಮೆಚ್ಚುಗೆಗೆ ಧನ್ಯವಾದಗಳು.
ಚುಟುಕುಗಳು 17
ಪಾಟೀಲರಿಗೆ ನಮಸ್ಕಾರಗಳು,
ಉತ್ತಮವಾದ , ಮನಸ್ಸಿಗೆ ನಾಟುವಂತಹ ಚುಟುಕುಗಳ ಸರಣಿ ಬರೆಯುತ್ತಿರುವಿರಿ. ಹೀಗೆ ಮುಂದುವರೆಯಿಲಿ ತಮ್ಮ ಈ ಸರಣಿ.
In reply to ಚುಟುಕುಗಳು 17 by swara kamath
ರಮೇಶ ಕಾಮತರಿಗೆ ವಂದನೆಗಳು ,
ರಮೇಶ ಕಾಮತರಿಗೆ ವಂದನೆಗಳು , ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.