ಚಿನ್ನದ ಹಾವಿನಂತಹ ಆಭರಣ!

ಚಿನ್ನದ ಹಾವಿನಂತಹ ಆಭರಣ!

ಹೀಗೆ ಕುತ್ತಿಗೆಯನ್ನು ಚಿನ್ನದ ಹಾವಿನ ರೀತಿಯಲ್ಲಿ ಸುತ್ತಿಕೊಂಡಿರೋದು ಒಂದು ಆಭರಣ. ಇದನ್ನ ಕತ್ತು ನೀಳವಾಗಿ, ಸುಂದರವಾಗಿ ಕಾಣಿಸ್ಲಿ ಅಂತ ಬಳಸ್ತಾರೆ. ಈ ಆಭರಣವನ್ನ ಆಫ್ರಿಕಾ ಮತ್ತು ಏಷ್ಯಾದ ಕೆಲವು ಬುಡಕಟ್ಟಿನ ಜನ ಧರಿಸ್ತಾರೆ. ಅದ್ರಲ್ಲೂ ಕಾಯನ್ ಬುಡಕಟ್ಟಿನ ಮಹಿಳೆಯರು ಇದನ್ನ ಹೆಚ್ಚಾಗಿ ಬಳಸ್ತಾರೆ.  ಅಂದ್ಹಾಗೆ ಈ ಆಭರಣದ ಹೆಸ್ರು ಪಡುಂಗ್...

ಕಯಾನ್ ಜನರನ್ನ ಉದ್ದಕತ್ತಿನ ಜನ ಅಂತಾನೂ ಗುತರ್ಿಸ್ತಾರೆ. ಈ ಕಯಾನ್ ಜನ್ರನ್ನ ಬರ್ಮಾ ಮತ್ತು ಟಿಬೆಟ್​ಗಳಲ್ಲಿ ಕಾಣಬಹುದು.

ಕ್ರಿ ಪೂ 730ರಿಂದ್ಲೂ ಇಂತದ್ದೊಂದು ಆಚರಣೆಯನ್ನು ಕಯಾನ್ ಜನ ನಡೆಸಿಕೊಂಡು ಬರ್ತಿದ್ದಾರೆ. ಹಿತ್ತಾಳೆಯಿಂದ ಮಾಡಿರ್ತಿದ್ದ ಈ ಸುರಳಿಯಾಕಾರದ ಉಂಗುರವನ್ನು ಕುತ್ತಿಗೆಗೆ ಧರಿಸುತ್ತಿದ್ರು...

ಕಯಾನ್ ಸಮಾಜದಲ್ಲಿನ 5 ವರ್ಷದ ಹೆಣ್ಣು ಮಗುವಿಗೆ ಇಂತದ್ದೊಂದು ಆಭರಣವನ್ನು ಹಾಕೋಕೆ ಶುರು ಮಾಡ್ತಾರೆ. ಕ್ರಮೇಣ ಕುತ್ತಿಗೆಯ ಮೂಳೆಗೆ ಹೊಂದುವಂತಹ ಗಾತ್ರದಲ್ಲಿನ ಕುತ್ತಿಗೆಯುಂಗುರವನ್ನು ಬಳಸ್ತಾರೆ. ಇಂತದ್ದೊಂದು ಆಭರಣವನ್ನು ಕಯಾನ್ ಜನ ಸೌಂದರ್ಯದ ದೃಷ್ಟಿಯಿಂದ ಧರಿಸ್ತಿದ್ರು. ಅದ್ರ ಜೊತೆಗೆ ಇತರ ಬುಡಕಟ್ಟಿನ ಜನ್ರಿಗಿಂತ ತಾವು ಮೇಲಿನವ್ರು ಅಂತ ತೋರಿಸಿಕೊಳ್ಳೋದೂ ಇದ್ರ ಹಿಂದಿನ ಉದ್ದೇಶ ಆಗಿತ್ತು...

ಆದ್ರೆ ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಗಳು ಸಂಶೋಧನೆ ನಡೆಸಿದ ನಂತರ ಇತರೆ ಬುಡಕಟ್ಟಿನ ಜನ್ರಿಗೆ ತಾವು ಗುಲಾಮರಾಗಬಾರದೆಂದು  ಈ ಆಭರಣವನ್ನು ಬಳಸುತ್ತಿದ್ದರೆಂಬ ವಾದವನ್ನು ಮಂಡಿಸ್ತಾರೆ. ಗಂಡಸರೆದುರು ತಾವು ಸುಂದರವಾಗಿ ಕಾಣ್ಬೇಕು ಅನ್ನೋ ಕಾರಣಕ್ಕೂ ಇದನ್ನು  ಬಳಸುತ್ತಿದ್ರು....

ಈ ಸಮುದಾಯದಲ್ಲಿ ಚಾಲ್ತಿಯಲ್ಲಿರೋ ಜಾನಪದ ಕತೆಗಳಲ್ಲಿ ಕಯಾನ್ ಹೆಣ್ಣನ್ನು ಡ್ರಾಗನ್​ಗೆ ಹೋಲಿಸ್ತಾರೆ. ಇದಲ್ಲದೆ ಹುಲಿಗಳ ಬಾಯಿಗೆ ತುತ್ತಾಗದಂತೆ ಆತ್ಮರಕ್ಷಣೆ ಮಾಡ್ಕೊಳೋಕೂ ಕೂಡ ಇಂತದ್ದೊಂದು ಆಭರಣವನ್ನು ಬಳಸುತ್ತಿದ್ದರೆಂಬ ನಂಬಿಕೆ ಇದೆ. ಅಲ್ಲದೆ ಇಲ್ಲಿನ ಮಹಿಳೆಯರು ತಮ್ಮ ಸಾಂಸ್ಕೃತಿಕ ಛಾಪಿಗಾಗಿಯೂ ಇದನ್ನ ಬಳಸ್ತಾರೆೆ.

5ನೇ ವರ್ಷದಲ್ಲಿ ಕುತ್ತಿಗೆಯುಂಗುರವನ್ನು ತೊಡಿಸೋವಾಗ ಸಹಜತೆ ಇರುತ್ತೆ. ಆದ್ರೆ  12ನೇ ವಯಸ್ಸಿನಲ್ಲಿ ಬಲವಂತವಾಗಿ ಕುತ್ತಿಗೆ ವೇಗವಾಗಿ ಉದ್ದವಾಗಿಸಲು ಮುಂದಾಗುತ್ತಾರೆ. ಈ ಕ್ರಮಗಳು ನೋವಿನಿಂದ ಕೂಡಿರ್ತಿದ್ವು. ಹೀಗಂತ ಕ್ರಿ ಪೂ 1300ರಲ್ಲಿ ಇಲ್ಲಿಗೆ ಬಂದಿದ್ದ ಪ್ರವಾಸಿ ಮಾರ್ಕೋಪೋಲೋ ತನ್ನ ಬರಹಗಳಲ್ಲಿ ಉಲ್ಲೇಖಿಸಿದ್ದಾನೆ...

ಆದ್ರೆ 2006ರಲ್ಲಿ ಮೋ ಹಾಂಗ್ ಸಾನ್ ಅನ್ನೋ ಯುವತಿ ತಮಗೆ ಶಿಕ್ಷಣವನ್ನು ನೀಡಬೇಕೆಂದು ಕುತ್ತಿಗೆಯುಂಗುರವನ್ನು ಕಳಚುವ ಮುಖಾಂತರ ಪ್ರತಿಭಟಿಸಿದಳು. ಈ ಪ್ರತಿಭಟನೆಯ ಹಿಂದೆ ಇನ್ನೂ ಪ್ರಬಲವಾದ ಅಂಶವೊಂದಿತ್ತು. ಅದು ಬಮರ್ಾ ಸಕರ್ಾರ ಕಯಾನ್ ಬುಡಕಟ್ಟನ್ನು ಶೋಷಿಸುತ್ತಿದೆ ಅಂತ. ತಮ್ಮ ಪರಂಪರಾನುಗತ ಆಚರಣೆಗೆ ಧಕ್ಕೆಯಾಯ್ತು ಅಂತ ಸಕರ್ಾರದ ವಿರುದ್ಧ ಪ್ರತಿಭಟನೆ ಮಾಡಿದ್ರು. ಆದ್ರೆ ಈ ಸಂಸ್ಕೃತಿಗೆ ಬಮರ್ಾ ಸಕರ್ಾರ ಪ್ರೋತ್ಸಾಹ ಕೊಡಲಿಲ್ಲ. ಕಯಾನ್ ಬುಡಕಟ್ಟಿನ ಜನ ಮುಖ್ಯವಾಹಿನಿ ಜತೆ ಬೆರೀಬೇಕು ಅನ್ನೋ ಉದ್ದೇಶದಿಂದ ಈ ಆಚರಣೆಗೆ ತಡೆ ಹಾಕ್ತು. ಹೀಗಿದ್ರೂ ಕಯಾನ್ ಸಮುದಾಯದ ಕೆಲವು ಮಹಿಳೆಯರು ಇಂದಿಗೂ ಈ ಕುತ್ತಿಗೆ ಬಳೆಗಳನ್ನ ಧರಿಸುತ್ತಾರೆ...

ಆದ್ರೆ ಈಗ ಇಲ್ಲಿನ ಜನ ತಮ್ಮ ಸಂಸ್ಕೃತಿಯನ್ನು ಮಾರಾಟದ ಸರಕಾಗಿ ಮಾಡಿಕೊಳ್ತಿದಾರೆ. ಸ್ಥಳೀಯ ಉದ್ಯಮಿಗಳು ಈ ಬುಡಕಟ್ಟಿನ ಜನ್ರನ್ನ ಇಟ್ಟುಕೊಂಡು ಹಳ್ಳಿಗಳನ್ನು ನಡೆಸುತ್ತಿದ್ದಾರೆ. ಪ್ರವಾಸಿಗರು ಈ ಹಳ್ಳಿಯ ಒಳಗೆ ಬರಲು ಪ್ರವೇಶ ಧನವನ್ನು ನಿಗದಿಪಡ್ಸಿದ್ದಾರೆ. ಹೀಗಾಗಿ ಈ ಆಭರಣ ಮತ್ತು ಅದನ್ನು ಧರಿಸುತ್ತಿರುವ ಬುಡಕಟ್ಟು ಸಾಕಷ್ಟು ಶೋಷಣೆಗೆ ಬಲಿಯಾಗಿದೆ.

ಇವ್ರಲ್ಲಿನ ಕೆಲವ್ರು ಬಂಡೆದ್ದು ನಮ್ಮದೇ ಹೊಸ ರಾಜ್ಯವನ್ನು ಕಟ್ಟೋಣ ಎಂದು ಕರೆನ್ನಿ ನ್ಯಾಷನಲ್ ಪೀಪಲ್ಸ್ ಲಿಬ್ರೇಷನ್ ಫ್ರಂಟ್ ಎಂಬ ಶಸ್ತ್ರಾಸ್ತ್ರ ತಂಡವನ್ನು ಕಟ್ಟಿಕೊಂಡು ಹೋರಾಡ್ತಿದೆ. ಇದು ಕುತ್ತಿಗೆಯುಂಗುರದ ಸಂಸ್ಕೃತಿಗಾಗಿ ನಡೀತಿರೋ ಹೋರಾಟ...
 

ಚಿತ್ರಕೃಪೆ-ಅಂತರ್ಜಾಲ.