" ನುಡಿಮುತ್ತುಗಳು " 6
ಡಾ|| ವಿರೂಪಾಕ್ಷ ದೇವರಮನೆ ತಮ್ಮ "ಸ್ವಲ್ಪ ಮಾತಾಡಿ ಪ್ಲೀಸ್" ಪುಸ್ತಕದಲ್ಲಿ ಕವಿ ದ.ರಾ. ಬೇಂದ್ರೆ ಅವರನ್ನು
ನೆನಪಿಸಿಕೊಂಡಿದ್ದು ಹೀಗೆ:-
ಒಂದು ತೊಟ್ಟು ನೀರು ಸಹಾ ಕಾಲಿಗೆ ಸೋಕದೆ
ಸಮುದ್ರ ದಾಟಬಹುದು.ಆದರೆ ಒಂದು ತೊಟ್ಟು
ಕಣ್ಣೀರು ಹಾಕದೆ ಜೀವನದ ಸಾಗರ ದಾಟೋದು
ಕಷ್ಟ.ಹಾಕೋ ಕಣ್ಣೀರಿನ ಪ್ರತಿಹನಿಯು ಬಹಳಷ್ಟು
ಅನುಭವ ತುಂಬಿಕೊಂಡು ಇರುತ್ತವೆ.
ಅದನ್ನು ಒರೆಸಿ ಆಚೆಗೆ ಎಸೆಯದೇ ನೆನೆಸಿ
ಮುಂದಕ್ಕೋಗುವುದರಲ್ಲೇ ಇರುವುದು ಜಾಣತನ.
ದ.ರಾ .ಬೇಂದ್ರೆ
ರಮೇಶ ಕಾಮತ್
Comments
ರಮೇಶ ಕಾಮತರಿಗೆ ವಂದನೆಗಳು
ರಮೇಶ ಕಾಮತರಿಗೆ ವಂದನೆಗಳು
" ನುಡಿ ಮುತ್ತುಗಳು 6 " ರಲ್ಲಿ ಬೇಂದ್ರೆಯವರ ಕವನವೊಂದರ ಸಾಲುಗಳನ್ನು ನೆನಪಿಸಿ ಕೊಂಡಿರುವುದನ್ನು ಓದಿ ಸಂತಸ ವಾಯಿತು. ಬೇಂದ್ರೆ ಯವರ ಜೀವನದ ಗ್ರಹಿಕೆ ಅವರು ಕೊಡುವ ಉಪಮಾನ ಉಪಮೇಯಗಳು ಸುಮದ್ರದ ನೀರು, ಜೀವನ, ಕಣ್ಣೀರು, ಬದುಕಿನ ಚಲನಶೀಲತೆ ಎಷ್ಟು ಅದ್ಭುತವಾದ ಜೀವನದ ಗ್ರಹಿಕೆ ಬೇಂದ್ರೆಯವರದು..!! ಲೇಖನ ಮಾಲಿಕೆ ನನಗೆ ಸಂತಸ ತಂದಿದೆ, ಧನ್ಯವಾದಗಳು.
In reply to ರಮೇಶ ಕಾಮತರಿಗೆ ವಂದನೆಗಳು by H A Patil
@ಹಿರಿಯರೇ ...
"ಅದನ್ನು ಒರೆಸಿ ಆಚೆಗೆ ಎಸೆಯದೇ ನೆನೆಸಿ
ಮುಂದಕ್ಕೋಗುವುದರಲ್ಲೇ ಇರುವುದು ಜಾಣತನ."
ಹಿರಿಯರೇ
ಬೇಂದ್ರೆ ಅವರ ಈ ಬರಹ ನಾ ಇದ್ವರ್ಗೂ ಓದಿರಲಿಲ್ಲ.ನೀವು ಅದನ್ನು ಇಲ್ಲಿ ಹಾಕಿ ಓದುವ ಹಾಗೆ ಮಾಡಿದಿರಿ..ನನ್ನಿ
ಅಪಾರ ಅರ್ಥಪೂರ್ಣ ಸಾಲುಗಳು..
ನಾಡ ಹಬ್ಬ ದಸರಾದ ಶುಭಾಶಯಗಳು..
ಶುಭವಾಗಲಿ.
\|
ಸಪ್ತಗಿರಿ ಅವರೆ,
ನಮಸ್ಕಾರಗಳು,
ದ.ರಾ ಬೇಂದ್ರೆ ಅವರ ಈ ನುಡಿಮುತ್ತನ್ನು ತಾವು ಮೆಚ್ಚಿ ಸಂತೋಷಪಟ್ಟಿದ್ದಕ್ಕೆ ನನ್ನ ಅಭಿನಂದನೆಗಳು.
ಪಾಟೀಲರಿಗೆ,
ನನ್ನ ವಂದನೆಗಳು. ತಾವು ಈ ನುಡಿಗಟ್ಟನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿರುವಿರಿ.ತುಂಬಾ ಸಂತಸವಾಯಿತು, ಅಭಿನಂದನೆಗಳು.
ರಮೇಶ ಕಾಮತರಿಗೆ ವಂದನೆಗಳು.
ರಮೇಶ ಕಾಮತರಿಗೆ ವಂದನೆಗಳು. ಪುಸ್ತಕದ ಸಲುವಾಗಿ ನೀವು ಕಳಿಸಿದ ಮನಿ ಆರ್ಡರ್ ತಲುಪಿದೆ. ನಿಮ್ಮ ವಿಳಾಸ ಟಿ ರಸ್ತೆ, ರಿಪ್ಪನ್ ಪೇಟೆ - 577426 ಎಂದಿದೆ. ಇಷ್ಟು ವಿಳಾಸ ಬರೆದರೆ ಸಾಕೆ? ದಯಮಾಡಿ ತಿಳಿಸಿ.
In reply to ರಮೇಶ ಕಾಮತರಿಗೆ ವಂದನೆಗಳು. by kavinagaraj
ಕವಿ ನಾಗರಾಜರಿಗೆ ನಮಸ್ಕಾರಗಳು.
ಕವಿ ನಾಗರಾಜರಿಗೆ ನಮಸ್ಕಾರಗಳು.
ನನ್ನ ಪೂರ್ಣ ವಿಳಾಸ ಇಂತಿದೆ;- ಎನ್. ರಮೇಶ್ ಕಾಮತ್, s/o ಎನ್. ಎಸ್.ಕಾಮತ್,ತೀರ್ಥಹಳ್ಳಿ ರಸ್ತೆ, ರಿಪ್ಪನ್ ಪೇಟೆ ಅಂಚೆ, ಶಿವಮೊಗ್ಗ ಜಿಲ್ಲೆ, 577426. .....ತಮ್ಮ ಬಿಡುವಿನ ವೇಳೆಯಲ್ಲಿ ಪುಸ್ತಕ ಕಳುಹಿಸಿ ...ವಂದನೆಗಳು