ದುರ್ಗಾಷ್ಟಮಿ ದಿನ, ಹೊರನಾಡು ಅನ್ನಪೂರ್ಣೇಶ್ವರಿಗೊಂದು ನಮನ
ಚಿತ್ರ
ಪಾಲಿಸೆ ಎನ್ನ ಶ್ರೀ ಅನ್ನಪೂರ್ಣೇಶ್ವರಿ
ಸ್ತುತಿಸುವೆ ನಿನ್ನನು ಹೊರನಾಡು ಶಂಕರಿ
ಪಾರ್ವತಿ ಗಿರಿಜೆ ಉಮಾಮಹೇಶ್ವರಿ.........ಪಾಲಿಸೆ
ಶಿವನಿಗೆ ಭಿಕ್ಷೆ ಇತ್ತು ಶಾಪವಿಮೋಚನೆ
ಗೈದ ಶ್ರೀ ಲಲಿತೆ
ದಕ್ಷಬ್ರಹ್ಮನ ಸುತೆ, ಮಹದೇವನ ಪ್ರೀತೆ
ವಾಂಛಿತ ಫಲದಾತೆ, ದುರ್ಗೆ ಜಗನ್ಮಾತೆ.......ಪಾಲಿಸೆ
ಹೊರನಾಡು ಕ್ಷೇತ್ರದಿ ನೆಲೆಸಿದ ಗೌರಿ
ಕಾಶಿಪುರಾಧೀಶ್ವರಿ
ಶ್ರೀ ಭುವನೇಶ್ವರಿ ಶರಣೆಂಬೆ ಶುಭಕರಿ
ಜಯ ರಾಜೇಶ್ವರಿ, ಜಯ ಪರಮೇಶ್ವರಿ........ಪಾಲಿಸೆ
ಶಾರಿಸುತೆ
ಚಿತ್ರ ಕೃಪೆ:ಅಂತರ್ಜಾಲ
ಪುರಂದರದಾಸರ ಪಾಲಿಸೆ ಎನ್ನ ಶ್ರೀ ಮಹಾಲಕ್ಷ್ಮಿ ಹಾಡಿನ ದಾಟಿ
http://youtu.be/42WbjcuaZnA
Rating