ಹಚ್ಚಿದೆ ಒಲವಿನ ಹಣತೆ...

ಹಚ್ಚಿದೆ ಒಲವಿನ ಹಣತೆ...

ಕವನ

 

ಗೆಳೆಯಾ,
ಹಚ್ಚಿದೆ ಒಲವಿನ ಹಣತೆ
ಬೆಳಗಿತು ಎದೆಯಲಿ ಮಮತೆ
ಸಮರವ ಸಾರಿದ 
ತಿಮಿರವನು   ಕಳೆಯಲು
ತೈಲವನೆರೆವುದ  ಮರೆತೆ
****
ಗೆಳೆಯಾ,
ಚೆಲುವೀ ಹೆಣ್ಣಲಿ 
ಎದೆಯೊಳ ಮಣ್ಣಲಿ
ಒಲವಿನ ಗಿಡವನ್ನು ನೆಟ್ಟೆ
ಬೇರದು ಇಳಿದು 
ಚಿಗುರನು  ಒಡೆದು
ಹೂವನು ಬಿಡುವ ಮೊದಲೇ
ನೀ 
ನೀರನು ಎರೆವುದ ಬಿಟ್ಟೆ
-ಮಾಲು